January 18, 2025
pragya4

ಬಜ್ಪೆಯ ಶ್ರೀ ಡಾ. ದೇವಿ ಪ್ರಸಾದ್ ಮತ್ತು ಶ್ರೀಮತಿ ಆಶಾಲತ ದೇವಿ ಪ್ರಸಾದ್ ಭಂಡಾರಿ ಯವರ 6 ತಿಂಗಳ ಮುದ್ದಿನ ಮಗಳು ಬೇಬಿ ಪ್ರಗ್ಯಾ ದೇವಿ ಪ್ರಸಾದ್ ಅಷ್ಟಮಿ ಯ ಪ್ರಯುಕ್ತ ವಿವಿದೆಡೆ ನಡೆದ ಕಂದಮ್ಮ ಗಳ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿ 4 ಬಹುಮಾನ ಪಡೆದು ಮಿಂಚಿದ್ದಾರೆ.

  • ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ದ ಪ್ರಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ರಾಷ್ಟ್ರೀಯ ಕಂದ ಕೃಷ್ಣ ವಿಭಾಗದ ಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
  • ಬಜ್ಪೆ ಯಲ್ಲಿ ಏರ್ಪಡಿಸಿದ್ದ ಮುದ್ದು ಕೃಷ್ಣ ವಿಭಾಗದಲ್ಲಿ ಪ್ರಥಮ ಸ್ಥಾನ
  • ಕಟೀಲ್ ನಲ್ಲಿ ಏರ್ಪಡಿಸಿದ್ದ ಮುದ್ದು ಕೃಷ್ಣ ವಿಭಾಗದಲ್ಲಿ ಪ್ರಥಮ ಸ್ಥಾನ
  • ಸುಂಕದಕಟ್ಟೆಯಲ್ಲಿ ನಡೆದ ಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮುದ್ದುಕೃಷ್ಣ ಸ್ಪರ್ಧೆ ಆಯೋಜಕರ ಮನಗೆದ್ದು ಸರಣಿ ಬಹುಮಾನಗಳನ್ನು ಬಾಚಿಕೊಂಡ ಮುದ್ದು ಕಂದಮ್ಮ ಪ್ರಗ್ಯಾಳಿಗೆ ಆ ದೇವರು ವಿಧ್ಯೆ ಆಯುರಾರೋಗ್ಯ ಐಶ್ವರ್ಯ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.

 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *