
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಭಂಡಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಕೊಡಲಾಗುವ ವಿದ್ಯಾನಿಧಿಯ ಸಹಾಯಧನದ ಚೆಕ್ಕನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಂಡಾರಿ ಸಮಾಜ ಸಂಘದ ಮುಖಾಂತರ ವಿತರಿಸಲಾಯಿತು.

ಮೂಡಿಗೆರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಷಣ್ಮುಖಾನಂದ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಡಿಸೆಂಬರ್19,2018 ರ ಬುಧವಾರ ಸಭೆ ಸೇರಿ ಉನ್ನತ ವ್ಯಾಸಂಗ ಮಾಡುತ್ತಿರುವ ಮೂಡಿಗೆರೆಯ ಚಿಂತನ್ ಭಂಡಾರಿ ಫಲ್ಗುಣಿ ಯವರಿಗೆ 2018-19 ನೇ ಸಾಲಿನ ವಿದ್ಯಾನಿಧಿಯ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮವನ್ನು ಬಾಳೇಹೊನ್ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ರಮಾ ಮೋಹನ್ ಭಂಡಾರಿಯವರು ಉದ್ಘಾಟಿಸಿದರು.ಬಾಳೇಹೊನ್ನೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ್ ಭಂಡಾರಿಯವರು, ಮೂಡಿಗೆರೆ ಭಂಡಾರಿ ಸಮಾಜ ಸಂಘದ ಹಿರಿಯರಾದ ಶ್ರೀ ಲೋಕೇಶ್ ಭಂಡಾರಿಯವರು, ಶ್ರೀ ಸತೀಶ್ ಭಂಡಾರಿಯವರು, ಶ್ರೀಮತಿ ಶಕುಂತಲಾ ಭಂಡಾರಿಯವರು, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ವನಿತಾ.ಎಸ್.ಭಂಡಾರಿಯವರು ನಿರೂಪಿಸಿದರು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.