ಸಂಜೆಯ ತಂಪಾದ ಹೊತ್ತಿನಲಿ
ಮನ ಬಯಸುತ್ತಿತ್ತು ನೂರಾರು
ಪಡುವಣದಿ ಕೆಂಪಾಗಿ ನಗುತಿರುವ ಸೂರ್ಯ
ಮೇಘಗಳ ನಡುವೆ ಇಣುಕುತಿಹನು ಚೂರು…..
ಅಂಗೈಯ ಬೊಗಸೆಯಲಿ ಹಿಡಿಯಲೆತ್ನಿಸುತಿಹೆ ಅವನ ನಾನು
ಆದರೆ ಮತ್ತೆ ಕಣ್ಣಾಮುಚ್ಚಾಲೆ ಆಡುತಿಹನವನು…..
ನೆರಳು ಬೆಳಕಿನ ಆಟದಲಿ ಮುಂಚೂಣಿ ಅವನು
ಕಾತರದಿ ಹುಡುಕುತಿಹೆ ನಾನವನ ನೆರಳು…..
ಮುಳುಗುವ ಸೂರ್ಯನ ಮೊಗದೆದುರಿಗೆ
ನಾನೊಂದು ನೆರಳಿನ ಗೊಂಬೆಯಂತೆ
ಆತನ ಅಂದವೋ ನನ್ನ ಮನದರಸಿಯ
ಹಣೆಯ ಮೇಲಿನ ಸಿಂಧೂರದಂತೆ…..
ಆದರೂ ಕ್ಯಾಮೆರಾದ ಕಣ್ಣಿನಲ್ಲಿ
ಸೆರೆಯಾಗಿಯೇ ಹೋದ ಆ ಸೂರ್ಯ
ನಾನೊಂದು ನಗುವ ಬೀರಿದೆ ಅಂಗೈಯಲಿ ಹಿಡಿದಂತೆ ಅವನ ಸೌಂದರ್ಯ…..
ಆ ಸಂಜೆಯ ಸೊಬಗು ನೀಡಿತ್ತು ಮನಕೆ
ತ್ರಪ್ತಿಯ ಶಾಂತತೆ
ಕ್ಯಾಮೆರಾ ಕ್ಲಿಕ್ಕಿಸಿದ ಚಿತ್ರವ ನೋಡಿ
ಮತ್ತೊಮ್ಮೆ ಮೊಗದಲಿ ಮೂಡಿತ್ತು ಮುಗುಳುನಗೆ…..
ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ