January 18, 2025
Untitaled-1 copy
Advt.

         ಮುಖದಲ್ಲಿ ಕೆಲವು ಸಂಧಭ೯ಕ್ಕಾಗಿ ಅಥವಾ ಉದ್ದೇಶಪೂವ೯ಕವಾಗಿ ಯಾರಿಗೂ ಕಾಣಿಸದಂತೆ ಧರಿಸಿಕೊಂಡಿರುವ ಮುಖದ ಧರಿಸು ಇದು. ಅದೇಷ್ಟೋ ಜನರು ಬದುಕಿನ ಪಯಣದಲಿ ಅವರಿಗೆ ಅರಿವಿರದಂತೆ ಧರಿಸಿ ಗೆದ್ದ ಮುಖವಾಡವಿದು. ಜೊತೆಗೆ ಸೋಲಿನ ಸಿಹಿಯನು ತಿನಿಸಿದ ಮುಖವಾಡವಿದು.
ಮಾನವ ಹುಟ್ಟಿನೊಳಗೆ ಗೆಲ್ಲೋ ಕುದುರೆಯಾಗಬೇಕೆಂಬ ಹಂಬಲದಿಂದ ಮನೆಯಲ್ಲಿರುವ ಮಾತಾ, ಪಿತರ ಅಶಿ೯ವಾದದೊಂದಿಗೆ ಮುಖವಾಡವನು ಧರಿಸಿದ ಬಡತನದ ಕುಟುಂಬ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಮನೆಯ ಪರಿಸ್ಥಿತಿಯನ್ನು ಮರೆಯಿಸಿ, ಸಿರಿತನದ ಶಿಕ್ಷಣವನ್ನು ನೀಡೊಕೆ ಪ್ರಾರಂಭಿಸುವುದು, ನಮ್ಮ ಮಕ್ಕಳಿಗೆ ನಮಗೆ ಇರುವ ಕಷ್ಟ ಅವರಿಗೆ ಬಾರದಿರಲೆಂದು, ಎಲ್ಲಾ ಸುಶಿಕ್ಷಿತ ವಿದ್ಯಾಥಿ೯ಗಳು ಶಿಕ್ಷಣ ಪಡೆಯುವ ಶಾಲೆಯೊಳು ಶಿಕ್ಷಣ ನೀಡುವರು. ಮನೆಯ ಪರಿಸ್ಥಿತಿ ಚೆನ್ನಾಗಿಲ್ಲವೆಂದು ವಿದ್ಯೆಯನು ನಿಲ್ಲಿಸಿಬಿಡುವೆಂದು ಹೇಳುವ ಹೆತ್ತವರು ನುಡಿಯುದು ವಿರಳವೆನಿಸುವುದು. ಶಿಕ್ಷಣಕ್ಕೆ ತಕ್ಕುದಾದ ಕೆಲಸ ದೊರೆಯುವವರೆಗೂ ಹೆತ್ತವರು ಮನೆಯ ಕಷ್ಟವನು ನುಡಿಯದೇ ಸಾಗುವವರ ಸಂಖ್ಯೆಯೇ ಹೆಚ್ಚು. ಜವಾಬ್ದಾರಿಯಲ್ಲಿ ಕಷ್ಟಗಳ ಜೀವನವನ್ನು ಮಕ್ಕಳಿಗೆ ತೋರಿಸದೆ ಅವರ ಬದುಕು ಕಟ್ಟುವ ಹೆತ್ತವರು ಧರಿಸಿದ ಜವಾಬ್ದಾರಿಯುತವಾದ ಮುಖವಾಡ ಬಹಳ ಮಹತ್ವಪೂಣ೯ವಾದುದು. ಮುಂದೆ ಮಕ್ಕಳು ಶಿಕ್ಷಣ ಮುಗಿಸಿ ಉದ್ಯೋಗ ನಂತರ ಸಂಸಾರ ಬಂಡಿಯನು ನಡೆಸಿ ಅವರು ಮಾಡುವುದು ಕೂಡ ಇದನ್ನೇ ನನಗಿಂತ ಒಂದು ಹೆಜ್ಜೆ ಮುಂದಿರ ಬೇಕೆಂದು ಪ್ರಯತ್ನಿಸುವರು..
ಇನ್ನೂ ಕೆಲವರು ಮನೆಯಲಿರುವ ಕಷ್ಟವನ್ನು ತಿಳಿದು ಪಾಟ್೯ ಟೈಂ ಕೆಲಸವನ್ನು ಮಾಡುತ್ತಾ, ಬಿಡುವಿನ ವೇಳೆಯಲಿ ಅಗತ್ಯವಾದ ಹಣವನ್ನು ಸಂಪಾಂದಿಸಿ ವಿದ್ಯೆಯನು ಪಡೆಯುವರು. ಮನೆಯ ಹೆತ್ತವರಿಗೆ ಅನಾರೋಗ್ಯಗಳಿದ್ದರೂ ಸುಖಿ ಕುಟುಂಬಿಕರಂತೆ ಇದ್ದು ಎಲ್ಲರೊಳಗೆ ನಗುತ್ತಾ ಬೆರೆಯುತಾ ಮನೆಯವರ ಸೂಶ್ರೂಷೆಯನು ಮಾಡುತಾ ವಿದ್ಯೆ ಪೂಣ೯ಗೊಳಿಸುವರು. ಹಣವಿಲ್ಲ, ಸಂಧಭ೯ಗಳ ಅಡ್ಡಿ, ಮನೆಯ ಸಮಸ್ಯೆ, ಎಲ್ಲ ಹಲವಾರು ಸಮಸ್ಯೆಗಳನ್ನು ದಾಟಿ ವಿದ್ಯೆ ಪಡೆಯಲು ಹಲವಾರು ಮುಖವಾಡವನ್ನು ಹಾಕಿಕೊಂಡು ಸಮಾಜದೊಳಗೆ ವಿದ್ಯಾವಂತರಾಗುವರು.

         ನಾನೊಮ್ಮೆ ವಿದ್ಯೆಯನ್ನು ಪಡೆಯಲು ಕಷ್ಟಪಟ್ಟ ವ್ಯಕ್ತಿಯನ್ನು ಬೇಟಿಯಾದೆ, ನಿಮಗೆ ಕಷ್ಟವಾಯಿತಲ್ಲವೇ ಕಲಿಯೋಕೆ ನಿಮ್ಮ ಪರಿಸ್ಥಿತಿಗಳು ನಗುತಾ ನುಡಿದರು, ಯಾವುದು ಕಷ್ಟವಿಲ್ಲ ಹೇಳಿ, ನಮಗಿಂತಲು ಕಷ್ಟಪಟ್ಟವರು ಸಾಧನೆ ಮಾಡಿರುವವರೆಂದು ತಿಳಿದು ನಡೆದರೆ ನಮಗೆ ಬಂದ ಕಷ್ಟಗಳೆಲ್ಲಾ ಕಷ್ಟಗಳಲ್ಲ ಎಂಬ ಮಹತ್ವಾಕಾಕಂಷೇಯ ಮುಖವಾಡವನ್ನು ಮನದಲ್ಲಿ ಧರಿಸಿ ಸಾಧನೆಯ ದಾರಿ ಕಡೆ ನಮ್ಮನ್ನೂ ಕಳುಹಿಸುವುದೆಂದು ಹೇಳಿದರು… ಕಷ್ಟ ಯಾರಿಗಿಲ್ಲ..?, ಕಷ್ಟವೆಂದು ಪ್ರಯತ್ನೀಸದೆ ಕಷ್ಟದ ಮುಖವಾಡವನ್ನಿರಿಸಿದರೆ ಬದುಕಿನೊಳಗೆ ಕಷ್ಟವೇ ಬೆಟ್ಟದೆತ್ತರಕ್ಕೆ ಬೆಳೆದು ನಿಲ್ಲುವುದೆನ್ನುವರು.

ಮತ್ತೊಂದು ಮುಖವಾಡ..
         ಮುಖವಾಡವನು ಗುಣದೊಳಗೆ ಹಾಕಿರುವವರು ಇವರು ಯಾವುದೋ ಸಮಸ್ಯೆಯಾದಾಗ, ಅವರು ಈ ಧರಿಸಿದನಿಂದಲೇ ಜನಪ್ರಿಯರಾಗುವರು, ಒಳ್ಳೆಯವರೊಂದಿಗೆ, ಒಳ್ಳೆಯವರು, ಕೆಟ್ಟವರೊಂದಿಗೂ ಒಳ್ಳೆಯವರಾದರೆ ಈ ಮುಖವಾಡ ಲಾಭಕ್ಕಾಗಿ ಹಾಕಿಕೊಂಡಿರಬಹುದು. ಇದರೊಳಗೆ ಲಾಭ, ನಷ್ಟದ ಹಲವಾರು ವಿಚಾರ ಇದೆ, ಅವರಿಗೆ ತಕ್ಕುದಾಗಿ ಅವರೇ ಹಾಕಿಕೊಳ್ಳುದರಿಂದ ಈ ಮುಖವಾಡ ಬಹಳಷ್ಟು ಮಂದಿ ಉಪಯೋಗಿಸುವ ಸಹಜವಾದ ವಣಿ೯ಕೆ ಇದು.

         ಮಾನವ ಜೀವನದ ಸಾಧನೆಯಲ್ಲಿ ಹಾಕಿ ಕೊಂಡಿರುವ ಮುಖವಾಡ ಯಾರಿಗೂ ತಿಳಿಯೋದಿಲ್ಲ ಯಾಕೆಂದರೆ ಇತ್ತೀಚೇಗೆ, ಅವರು ಬಡತನವಿದ್ದರೂ ನಂಬಿಕೆ, ಅತ್ಮವಿಶ್ವಾಸ ಗಳು ಕೂಡಿರುವ ಮನಸ್ಸನ್ನು ಮುಖವಾಡದೊಳಗೆ ಇರಿಸಿ ಬಹಳ ವರುಷ ತಪಸ್ಸು ಮಾಡಿದಂತೆ ಜಾಗರುಕರಾಗಿ ಸಾಧನೆಯ ಹಾದಿ ಹಿಡಿಯುತ್ತಾ ಪಯಣಿಸುತ ಯಾರಿಗೂ ತಿಳಿಯದಂತೆ ಜಗತ್ತಿನಲ್ಲಿ ಮಹಾನ್ ಸಾಧನೆ ಮಾಡುವವರಲ್ಲ ಅವರು ಹಾಕಿಕೊಳ್ಳೋ ಒಳ್ಳೆಯ ಮುಖವಾಡ ಸುಂದರವಾಗಿ ಕಾಣುದಿಲ್ಲವೇ.. ಇತ್ತೀಚಿನ ಮೊನ್ನೆ ಸಾಧನೆ ಮಾಡಿದ ಅತ್ಲೇಟಿಕ್ ಕ್ರಿಡಾಪಟುವಿನ ಸಾಧನೆಯು ಇದರಂತೆ ದೇಶ ಹೆಮ್ಮೆ ಪಡೊ ಸಾಧನೆ ಮಾಡಿರುವರು, ನಾನು ಬಡತನದಲಿ ಇರುವವಳೆಂದು ಸುಮ್ಮನಿದ್ದರೆ ಈ ಸಾಧನೆಗೆ ಬಾಜನಾರಾಗುತಿಲ್ಲ, ಏಷ್ಟೋ ವರುಷದ ಪರಿಶ್ರಮ ಇದು ಫಲ ನೀಡಿದೆ ಎನ್ನಬಹುದು…

Advt.

         ಮುಖವಾಡದೊಳಗೆ ಮಹತ್ವವಾದು ತಾಳ್ಮೆ, ಕಾಯುವಿಕೆ ಎರಡೂ ಜೊತೆಯಾಗಿದ್ದರೆ, ಜೀವನದಲಿ ಯಾವ ಸಮಸ್ಯೆಯ ಸುಳಿಗಾಳಿಯು ಹತ್ತಿರಬಂದರೂ ಕರಗಿ ನೀರಾಗಿ ಧರೆಯೊಳಗೆ ಹುದುಗಿ ಅಂತಜ೯ಲದ ಮಟ್ಟವನು ಏರಿಸುತ್ತಾ ಸದಾ ನಮ್ಮನ್ನು ಕಾಯುವುದು. ಮುಖವಾಡದ ಒಂದು ವಿಚಾರ ನಾವು ಹಾಕಿಕೊಂಡಿರುವ ಹಲವಾರು ಒಳ್ಳೇಯ ಸಾಧನೆಗೆ ಪೂರಕವಾಗಿರಲಿ…..

✍: ಕಾತಿ೯ಕ್ ಮಜಲ್ ಮಾರ್

Leave a Reply

Your email address will not be published. Required fields are marked *