
ಮುಖವಾಡದ ಬದುಕು

ನಗುವಿನ ಮುಖದ ಹಿಂದೆ ನೋವಿನ
ಭಾವನೆಗಳು ಜೀವನ ಬರಿದಾಗಿಸುವ ಮುನ್ನ
ಪ್ರೀತಿ ನಂಬಿಕೆಯಿಂದ ಅದನ್ನು ಸರಿಪಡಿಸು
ಹೊಸ ಜೀವನ ನಿನಗಾಗಿ ಕಾದಿರುವುದು
ಪ್ರೀತಿಸು ಮೋಹಿಸು ನಂಬಿಸು
ಆದರೆ ಪ್ರಾಮಾಣಿಕತೆ ಎಂಬ ಮುಖವಾಡ
ಧರಿಸಿ ಅಲ್ಲ, ನಿನ್ನ ನಂಬಿರುವವರ
ನಂಬಿಕೆ ಉಳಿಸಿ ಪ್ರೀತಿಸು
ಬಣ್ಣ ಬಣ್ಣದ ಚಿಟ್ಟೆಗಳ ಹಾಗೆ
ಬಣ್ಣ ಬಣ್ಣದ ಕನಸು ಕಟ್ಟಿಕೊಂಡಿರುವ
ಮನಸ್ಸುಗಳ ಸಂತೋಷವು, ಬಣ್ಣ ಬಣ್ಣದ
ಮುಖವಾಡ ಧರಿಸಿದ ಜನರ ದಾಳಿಗೆ ಮರುಗುತಿದೆ
ಹಾಳು ಮುಖವಾಡ ಧರಿಸಿ ನಂಬಿಸಬೇಡ
ಮೋಸದ ಮುಖವಾಡ ಹಾಕಬೇಡ
ಕಿತ್ತೊಗೆ ಒಮ್ಮೆ ಅ ಮುಖವಾಡದ ಬದುಕನ್ನು
ನಕ್ಕುಬಿಡು ಜಗತ್ತೇ ಬೆರಗಾಗುವಂತೆ
ಸಂಬಂಧಗಳ ಸುಳಿಯಲ್ಲಿ
ಭಾವನೆಗಳ ಸಾಲುಗಳು ಅಳುಕುತ್ತಿದೆ
ಪ್ರೀತಿಯ ಕೊಟ್ಟ ಜೀವ ನರುಳುತ್ತಿದೆ
ಇಲ್ಲಿ ಬರೀ ಮುಖವಾಡಗಳ ಕಾರುಬಾರು

✍ಗ್ರೀಷ್ಮಾ ಕಲ್ಲಡ್ಕ..