January 18, 2025
Sundari Eeshwara Bhnadary

ಮಂಗಳೂರು ಕೊಟ್ಟಾರ ದಿವಂಗತ ಈಶ್ವರ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಸುಂದರಿ ಭಂಡಾರಿ (92 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 11 , 2020 ರ ಶುಕ್ರವಾರ ಮದ್ಯಾಹ್ನ ಮುಂಬೈನಲ್ಲಿ ವಿಧಿವಶರಾದರು.

ಶ್ರೀಮತಿ ಸುಂದರಿ ಭಂಡಾರಿಯವರು ಮುಲ್ಕಿ ತಿರುಮಲೆಗುತ್ತು ಕುಟುಂಬದವರು.
ದಿವಂಗತರು ಇಬ್ಬರು ಗಂಡು ಮಕ್ಕಳಾದ ಸುನಿಲ್ , ಅನಿಲ್, ಐದು ಹೆಣ್ಣು ಮಕ್ಕಳಾದ ಪದ್ಮಾವತಿ , ಶಾಮಲಾ , ಭಾಗೀರಥಿ, ಪ್ರೇಮಾ, ರೇಖಾ , ಸೊಸೆಯಂದಿರು, ಅಳಿಯಂದಿರು, ಮೊಮ್ಮಕಳು, ಮರಿಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಮೃತರ ಒಬ್ಬರು ಮಗಳಾದ ಭಾರತಿ ಈ ಹಿಂದೆ ವಿಧಿವಶರಾಗಿದ್ದಾರೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕಚ್ಚೂರು ನಾಗೇಶ್ವರನು ಕರುಣಿಸಲೆಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *