
ಮೂಡಬಿದಿರೆ ನಾಗರಕಟ್ಟೆಯ ಬಹುಮುಖ ಪ್ರತಿಭೆ, ಹೇರ್ ಡಿಸೈನರ್ ಶ್ರೀ ಪ್ರಮೋದ್ ಭಂಡಾರಿ (ಪಮ್ಮು) ಇವರು ಮೂಡಬಿದಿರೆ ಸವಿತಾ ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವೃತ್ತಿಯಲ್ಲಿ ಹೇರ್ ಡಿಸೈನರ್ ಆಗಿರುವ ಪ್ರಮೋದ್ ಭಂಡಾರಿಯವರು ವೃತ್ತಿಯೊಂದಿಗೆ, ದೇಹದಾಡ್ಯಪಟುವಾಗಿದ್ದು , ಸಿನಿಮಾ ನಟ ಮತ್ತು ಉತ್ತಮ ಕ್ರಿಕೆಟ್ ಆಟಗಾರ. ಇವರು ಅನೇಕ ಕ್ರಿಕೆಟ್ ಪಂದ್ಯಾಟಗಳಲ್ಲಿ ಸಿಕ್ಸರ್ ಬಾರಿಸಿ ಸಿಕ್ಸರ್ ಪಮ್ಮು ಎಂಬ ಬಿರುದು ಪಡೆದವರಾಗಿರುತ್ತಾರೆ. ಹೇರ್ ಡಿಸೈನ್ ನಲ್ಲೂ ಚತುರರಾಗಿದ್ದು, ವಿಶೇಷ ಕೌಶಲ್ಯದಿಂದ ಪ್ರಸಿದ್ದರಾಗಿದ್ದಾರೆ.

ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಪ್ರಮೋದ್ ಭಂಡಾರಿಯವರು ಮೂಡಬಿದಿರೆ ಭಂಡಾರಿ ಸೇವಾ ಸಂಘದಲ್ಲಿ ಕ್ರೀಡಾ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಸವಿತಾ ಸಮಾಜ ಸಂಘದ ಕೋಶಾಧಿಕಾರಿಯಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ ಅಧ್ಯಕ್ಷರಾಗಿ ಇದೀಗ ಪದೋನ್ನತಿ ಹೊಂದಿದ್ದಾರೆ.

ಮೂಡಬಿದಿರೆ ಸವಿತಾ ಸಮಾಜ ಸಂಘಕ್ಕೆ ಆಯ್ಕೆಯಾದ ಬಹುಮುಖ ಪ್ರತಿಭೆ ಶ್ರೀ ಪ್ರಮೋದ್ ಭಂಡಾರಿಯವರ ನೇತೃತ್ವದಲ್ಲಿ ಒಳ್ಳೆಯ ಯೋಜನೆಗಳು ಅನುಷ್ಠಾನಗೊಂಡು ಸವಿತಾ ಸಮಾಜದ ಅಭಿವೃದ್ಧಿಯಾಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ .
–ಭಂಡಾರಿ ವಾರ್ತೆ
ವರದಿ : ಪ್ರಕಾಶ್ ಭಂಡಾರಿ ಮೂಡಬಿದ್ರೆ