ಭಂಡಾರಿ ಸೇವಾ ಸಮಿತಿ (ರಿ) ಮುಂಬೈ ಇದರ ವಾರ್ಷಿಕ ಕೌಟುಂಬಿಕ ಸ್ನೇಹ ಕೂಟ ಇದೇ ಬರುವ ಡಿಸೆಂಬರ್ 23, 2018 ರ ಭಾನುವಾರ ಮುಂಬೈನ ಮುಲುಂದ್ (ವೆಸ್ಟ್ ) ನಲ್ಲಿರುವ ಝವೇರ್ ಮಾರ್ಗದ ಶ್ರೀ ಕಚ್ ದೇಶೀಯ ಸಾರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ್ ಟ್ರಸ್ಟ್ ಹಾಲ್ ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯ ವರೆಗೆ ಜರಗಲಿದೆ .
ಸಮಾರಂಭದಲ್ಲಿ ಸಮಾಜದ ಬಾಂಧವರಿಗೆ ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆ ,ಸಮಾಜದ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ .
ಮದ್ಯಾಹ್ನ ದ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಗಣ್ಯರು ಭಾಗವಹಿಸಲಿದ್ದು , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜದ ಬಂಧುಗಳನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದಲ್ಲಿ ಭಂಡಾರಿ ಸೇವಾ ಸಮಿತಿ (ರಿ) ಮುಂಬೈ ಹಮ್ಮಿಕೊಳ್ಳಲಿರುವ ವಿನೂತನ ಯೋಜನೆಗಳಾದ ವಿದ್ಯಾನಿಧಿ ಹಾಗೂ ಆರೋಗ್ಯ ನಿಧಿ ಗೆ ದೇಣಿಗೆ ಸಂಗ್ರಹಿಸುವ ಮನವಿ ಪತ್ರವನ್ನು ಗಣ್ಯರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗುವುದು .
ಸಭಾ ಕಾರ್ಯಕ್ರಮದ ಬಳಿಕ ಅದ್ಧೂರಿಯ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲಾ ಬಂಧುಗಳು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಭಂಡಾರಿ ಸೇವಾ ಸಮಿತಿ (ರಿ) ಮುಂಬೈ ಇದರ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟಣೆ ಮೂಲಕ ವಿನಂತಿಸಿಕೊಳ್ಳುತ್ತಿದ್ದಾರೆ.
- ತಾರೀಕು 27 ಜನವರಿ 2019 ರ ಭಾನುವಾರ ಮಹಿಳಾ ಘಟಕದಿಂದ ಹಳದಿ ಕುಂಕುಮ ಕಾರ್ಯಕ್ರಮವನ್ನು ಮುಂಬೈ ಸಾಂತಾಕ್ರೂಸ್ (ಈಸ್ಟ್ ) ನ ಪ್ರಭಾತ್ ಕಾಲೊನಿಯಲ್ಲಿರುವ ಪೇಜಾವರ ಮಠ ದಲ್ಲಿ ಸಂಜೆ 3 ರಿಂದ 6 ಗಂಟೆಯವರೆಗೆ ಆಯೋಜಿಸಲಾಗಿದೆ .
- 2017-2018 ರ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 90 ಕ್ಕಿಂತ ಅಧಿಕ ಹಾಗೂ ಪಿ ಯು ಸಿ ಮತ್ತು ಪದವಿ ಯಲ್ಲಿ ಶೇಕಡಾ 85 ಕ್ಕಿಂತ ಅಧಿಕ ಅಂಕ ಪಡೆದು ಉತ್ತೀರ್ಣಗೊಂಡ ಮುಂಬೈ ಯ ಭಂಡಾರಿ ಸಮಾಜದ ಮಕ್ಕಳು ತಮ್ಮ ಅಧಿಕೃತ ಅಂಕ ಪಟ್ಟಿಯನ್ನು ಡಿಸೆಂಬರ್ 23 ರಂದು ಮಧ್ಯಾಹ್ನ 1 ಗಂಟೆಯ ಮುಂಚಿತವಾಗಿ ಶಶಿಧರ ಡಿ ಭಂಡಾರಿ (ಪ್ರಧಾನ ಕಾರ್ಯದರ್ಶಿ ,ಭಂಡಾರಿ ಸೇವಾ ಸಮಿತಿ (ರಿ) ಮುಂಬೈ) ಇವರಲ್ಲಿ ಸಲ್ಲಿಸಬೇಕು.
- ಪ್ರತೀ ಸಲದಂತೆ ಈ ಬಾರಿಯೂ ಶ್ರೀ ಭಾಲಕೃಷ್ಣ ಭಂಡಾರಿ ಪುತ್ತೂರು (ಪುಣೆ ) ಇವರು ತಮ್ಮ ತಂದೆ ದಿವಂಗತ ಮಹಾಲಿಂಗ ಭಂಡಾರಿ ಹಾಗೂ ಅತ್ತೆ ದಿವಂಗತ ಸುಶೀಲ ಅಚ್ಚಣ್ಣ ಭಂಡಾರಿ (ಶ್ರೀಮತಿ ಸುಲೋಚನಾ ಭಾಲಕೃಷ್ಣ ಭಂಡಾರಿ ಪುತ್ತೂರು ಇವರ ತಾಯಿ )ಯವರ ಸ್ಮರಣಾರ್ಥ 2017-2018 ರ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹಾಗೂ ಪಿ ಯು ಸಿ ಯಲ್ಲಿ ಅತುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.
- ಇನ್ನಷ್ಟುಹೆಚ್ಚಿನ ಮಾಹಿತಿಗಾಗಿ ಭಂಡಾರಿ ವಾರ್ತೆಯಲ್ಲಿ ಲಗತ್ತಿಸಿರುವ ಅಯಂತ್ರಣ ಪತ್ರಿಕೆಯನ್ನು ಓದಬೇಕಾಗಿ ವಿನಂತಿ.
-ಭಂಡಾರಿ ವಾರ್ತೆ