January 18, 2025
baombay news 2

      ಭಂಡಾರಿ ಸೇವಾಸಮಿತಿ ಮುಂಬೈಇದರ 64ನೇವಾರ್ಷಿಕ ಮಹಾಸಭೆಜುಲೈ 23ರಂದುಸಯಾನ್ ಪಶ್ಚಿಮದಸ್ವಾಮಿ ನಿತ್ಯಾನಂದಸಭಾಗೃಹದಲ್ಲಿ ನಡೆಯಿತು. ದೀಪ ಪ್ರಜ್ವಲಿಸಿಕುಲದೇವರಾದ ಕಚ್ಚೂರುಶ್ರೀ ನಾಗೇಶ್ವರದೇವರಿಗೆ ಪೂಜೆಸಲ್ಲಿಸಿ ಕಾರ್ಯಾಕ್ರಮಉದ್ಘಾಟಿಸಲಾಯ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದಭಂಡಾರಿ ಸೇವಾಸಮಿತಿ ಮುಂಬಯಿಇದರ ಅಧ್ಯಕ್ಷನ್ಯಾಯವಾದಿ ಶೇಖರ್ಎಸ್ ಭಂಡಾರಿಭಾಂಡೂಪ್ ಮಾತನಾಡಿ, ಸದಸ್ಯರ ಸಕ್ರಿಯಸೇವೆಯಿಂದ ಸಮಾಜದಸುಭದ್ರ ಸಂಘಟನೆಸಾಧ್ಯವಾಗುವುದು ಎಂದರು. ಸಭೆಯ ಆದಿಯಲ್ಲಿಅಗಲಿದ ಸರ್ವಭಂಡಾರಿ ಬಂಧುಗಳುಹಾಗೂ ಗಣ್ಯರಿಗೆಶ್ರದ್ಧಾಂಜಲಿ ಕೋರಲಾಯ್ತು. ಸಭಿಕರ ಪರವಾಗಿರಂಜಿತ್ ಎಸ್. ಭಂಡಾರಿ, ರಮೇಶ್ಭಂಡಾರಿ ಪೊವಾಯಿಸಲಹೆ ಸೂಚನೆಗಳನ್ನಿತ್ತರು. ಜತೆ ಕಾರ್ಯದರ್ಶಿಪುರುಷೋತ್ತಮ ಜಿ. ಭಂಡಾರಿ ಪ್ರಾಸ್ತಾವಿಕಭಾಷಣಗೈದರು. ಜೊತೆಕಾರ್ಯದರ್ಶಿ ಶಶಿಧರ್ಡಿ.ಭಂಡಾರಿಗತ ವಾರ್ಷಿಕಕಾರ್ಯಚಟುವಟಿಕೆಗಳ ಮಾಹಿತಿಯನ್ನಿತ್ತರು. ಗೌರವ ಕೋಶಾಧಿಕಾರಿಕರುಣಾಕರ ಜಿ.ಭಂಡಾರಿ ವಾರ್ಷಿಕಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿವಿಜಯ ಆರ್. ಭಂಡಾರಿ ಪ್ರಾರ್ಥನೆಗೈದು ವಂದಿಸಿದರು. ಮಹಾಸಭೆಯಬಳಿಕ ಪದಾಧಿಕಾರಿಗಳುಸಮಿತಿಯ ಸದಸ್ಯರಮಕ್ಕಳಿಗೆ ಶೈಕ್ಷಣಿಕವಿದ್ಯಾರ್ಥಿ ವೇತನನೀಡಿ ಶುಭಹಾರೈಸಿದರು. ಸೇವಾಸಮಿತಿಯಉಪಾಧ್ಯಕ್ಷರಾದ ನ್ಯಾಯವಾದಿರಾಮಣ್ಣ ಎಂ.ಭಂಡಾರಿ, ಪ್ರಭಾಕರಪಿ. ಭಂಡಾರಿ, ಸಲಹಾ ಸಮಿತಿಯಕಾರ್ಯಾಧ್ಯಕ್ಷ ನ್ಯಾಯವಾದಿಸುಂದರ್ ಜಿ.ಭಂಡಾರಿ, ಮಹಿಳಾವಿಭಾಗಾಧ್ಯಕ್ಷೆ ಶೋಭಾಸುರೇಶ್ ಭಂಡಾರಿ, ಉಪಕಾರ್ಯಾಧ್ಯಕ್ಷೆ ಪಲ್ಲವಿರಂಜಿತ್ ಭಂಡಾರಿ, ಕಾರ್ಯದರ್ಶಿ ರೇಖಾಎ. ಭಂಡಾರಿಮತ್ತಿತರರು ಉಪಸ್ಥಿತರಿದ್ದರು. 

0 thoughts on “ಮುಂಬೈ ಭಂಡಾರಿ ಸೇವಾ ಸಮಿತಿಯ 64 ನೇ ವಾರ್ಷಿಕ ಮಹಾಸಭೆ

Leave a Reply

Your email address will not be published. Required fields are marked *