ಮುಂಬಯಿ ಭಂಡಾರಿ ಸೇವಾ ಸಮಿತಿಯ 65 ನೇ ವರ್ಷದ ವಾರ್ಷಿಕ ಮಹಾಸಭೆ ಮುಂಬಯಿಯ ಸಯಾನ್ ನ ಶ್ರೀ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಜುಲೈ 28 ರಂದು ನಿಕಟಪೂರ್ವ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ಶೇಖರ್.ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತು.ಈ ಸಭೆಯಲ್ಲಿ ಮುಂಬಯಿಯಲ್ಲಿ ನೆಲೆಸಿರುವ ಭಂಡಾರಿ ಕುಟುಂಬದ ಬಂಧುಗಳು,ಮುಂಬಯಿ ಭಂಡಾರಿ ಸೇವಾ ಸಮಿತಿಯ ಸದಸ್ಯರು,ಸಮಾಜದ ಗಣ್ಯಾತಿಗಣ್ಯರು,ಭಂಡಾರಿ ಮಹಿಳಾ ಸೇವಾ ಸಮಿತಿಯ ಸದಸ್ಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ಶೇಖರ್. ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಭೆ ದೀಪ ಬೆಳಗಿಸಿ,ಕುಮಾರಿ ರಿಯಾ.ಆರ್.ಭಂಡಾರಿಯವರ ಪ್ರಾರ್ಥನೆಯೊಂದಿಗೆ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.ಗೌರವ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ವಿಜಯ.ಆರ್.ಭಂಡಾರಿಯವರು ಸ್ವಾಗತಿಸಿದರು.ಸಹ ಕಾರ್ಯದರ್ಶಿಯಾಗಿರುವ ಶ್ರೀ ಶಶಿಧರ್.ಡಿ.ಭಂಡಾರಿಯವರು ಸಭೆಗೆ ಗತ ವಾರ್ಷಿಕ ಮಹಾಸಭೆಯ ವರದಿ ಮತ್ತು ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು.ಗೌರವ ಕೋಶಾಧಿಕಾರಿ ಶ್ರೀ ಕರುಣಾಕರ.ಜಿ.ಭಂಡಾರಿಯವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಂಡಾರಿ ಸೇವಾ ಸಮಿತಿಯ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಿದರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.ಸಹ ಕಾರ್ಯದರ್ಶಿ ಶ್ರೀ ಪುರುಷೋತ್ತಮ್.ಜಿ.ಭಂಡಾರಿ ವಂದನಾರ್ಪಣೆ ನೆರವೇರಿಸಿದರು.
ಸಭೆಯ ಕೊನೆಯಲ್ಲಿ 2018-2020 ರ ಎರಡು ವರ್ಷದ ಕಾಲಾವಧಿಗೆ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಿ,ಪಟ್ಟಿಯನ್ನು ಅಂತಿಮಗೊಳಿಸಲಾಯಿತು.
ಮುಂಬಯಿ ಭಂಡಾರಿ ಸೇವಾ ಸಮಿತಿಯ ಸದಾ ಚಟುವಟಿಕೆಯ ಸದಸ್ಯರೂ,ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳೂ ಆಗಿರುವ ಶ್ರೀ ರಾಮಣ್ಣ.ಎಮ್.ಭಂಡಾರಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಶ್ರೀ ಪ್ರಭಾಕರ.ಪಿ.ಭಂಡಾರಿ ಮತ್ತು ಶ್ರೀ ಪುರುಷೋತ್ತಮ್ ಭಂಡಾರಿಯವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಶಶಿಧರ್.ಡಿ.ಭಂಡಾರಿಯವರು, ಸಹ ಕಾರ್ಯದರ್ಶಿಗಳಾಗಿ ನ್ಯಾಯವಾದಿ ಶ್ರೀ ಶಾಂತರಾಜ್.ಡಿ.ಭಂಡಾರಿ ಮತ್ತು ಶ್ರೀ ರಂಜಿತ್ ಭಂಡಾರಿ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಶ್ರೀ ಕರುಣಾಕರ್.ಎಸ್.ಭಂಡಾರಿ, ಸಹ ಖಜಾಂಚಿಗಳಾಗಿ ಶ್ರೀ ಪ್ರಕಾಶ್.ಕೆ.ಭಂಡಾರಿ ಮತ್ತು ಶ್ರೀ ಸುಭಾಷ್ ಭಂಡಾರಿ ಆಯ್ಕೆಯಾಗಿದ್ದಾರೆ.
ಇದೇ ವೇದಿಕೆಯಲ್ಲಿ ಮಹಿಳಾ ಭಂಡಾರಿ ಸೇವಾ ಸಮಿತಿಯ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಗಿದ್ದು ಶ್ರೀಮತಿ ಶಾಲಿನಿ ರಮೇಶ್ ಭಂಡಾರಿಯವರು ಅಧ್ಯಕ್ಷರಾಗಿ, ಶ್ರೀಮತಿ ರೇಖಾ.ಎ.ಭಂಡಾರಿಯವರು ಉಪಾಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಜಯಸುಧ.ಜೆ.ಭಂಡಾರಿಯವರು ಆಯ್ಕೆಗೊಂಡರು.ಜೊತೆಗೆ ಹದಿನೆಂಟು ಜನ ಸದಸ್ಯರನ್ನು ಭಂಡಾರಿ ಸೇವಾ ಸಮಿತಿಯ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.
ಭಂಡಾರಿವಾರ್ತೆ ಮತ್ತು ತಂಡದಿಂದ ಮುಂಬಯಿಯ ಭಂಡಾರಿ ಸೇವಾ ಸಮಿತಿಯ ಕಳೆದ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭ ವಿದಾಯ ಕೋರುತ್ತಾ,ನೂತನವಾಗಿ ರಚಿತಗೊಂಡ ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಹಾರ್ದಿಕವಾಗಿ ಶುಭ ಕೋರುತ್ತೇವೆ.ನೂತನ ಪದಾಧಿಕಾರಿಗಳು ಸಮಾಜದ ಒಳಿತಿಗಾಗಿ, ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಶ್ರೀ ದೇವರು ಅತೀ ಹೆಚ್ಚಿನ ಶಕ್ತಿಯನ್ನು, ಸ್ಥೈರ್ಯವನ್ನು, ತಾಳ್ಮೆಯನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಪ್ರಾರ್ಥಿಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.