January 18, 2025
bombay bhandary
ಮುಂಬಯಿಯ ಭಂಡಾರಿ ಸೇವಾ ಸಮಿತಿಯು ಭಂಡಾರಿ ಬಂಧುಗಳಿಗಾಗಿ ಉಚಿತ ಆರೋಗ್ಯ ಮಾಹಿತಿ ಮತ್ತು ಆಪ್ತ ಸಮಾಲೋಚನಾ ಶಿಬಿರ ವನ್ನು ಸೆಪ್ಟೆಂಬರ್ 8 ರ ಶನಿವಾರ ಮದ್ಯಾಹ್ನ 3:30 ರಿಂದ ಪೂರ್ವ ಡೊಂಬಿವಿಲಿಯ ರೋಟರಿ ಸೇವಾಕೇಂದ್ರದಲ್ಲಿ ಏರ್ಪಡಿಸಲಾಗಿದೆ.

 
ಈ ಶಿಬಿರದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ,ಮಾರ್ಗದರ್ಶನ ನೀಡಲಾಗುವುದು.ಶಿಬಿರದಲ್ಲಿ ಹೆಸರಾಂತ ಆರೋಗ್ಯ ತಜ್ಞರು, ಸಮಾಲೋಚಕರಾದ ಶ್ರೀ ಆರ್.ವಿಜಯನ್ ಮತ್ತು ಡಾ|| ಸುಜಾತ.ಕೆ.ಭಂಡಾರೆಯವರು ನಿಮ್ಮೊಂದಿಗೆ ಸಂಭಾಷಿಸಲಿದ್ದಾರೆ.

ಮುಂಬಯಿಯಲ್ಲಿ ನೆಲೆಸಿರುವ ಸಮಸ್ತ ಭಂಡಾರಿ ಬಂಧುಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ Adv.R.M ಭಂಡಾರಿ ಯವರು ಮತ್ತು ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಶಿಧರ್.ಡಿ.ಭಂಡಾರಿಯವರು ವಿನಂತಿಸಿಕೊಂಡಿದ್ದಾರೆ.

ದಿನಾಂಕ 8 ನೇ ಸೆಪ್ಟೆಂಬರ್,2018
ಸಮಯ : ಮದ್ಯಾಹ್ನ 3:30 ರಿಂದ.
ಸ್ಥಳ : ರೋಟರಿ ಸೇವಾ ಕೇಂದ್ರ.
ನೆಲಮಹಡಿ, ಗೋಖಲೆ ಕಾಂಪೌಂಡ್.
ರಘುವೀರ ನಗರ.
ನವಜೀವನ ನರ್ಸಿಂಗ್ ಹೋಮ್ ಹತ್ತಿರ.
ಡೊಂಬಿವಿಲಿ(ಪೂರ್ವ)

— ಭಂಡಾರಿವಾರ್ತೆ

Leave a Reply

Your email address will not be published. Required fields are marked *