January 18, 2025
brahmari prasada2
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಗೋಕುಲ ನಗರದಲ್ಲಿ ಶ್ರೀ ತಿಮ್ಮಪ್ಪ ಭಂಡಾರಿ ಮತ್ತು ಶ್ರೀಮತಿ ಅರುಣಾ ತಿಮ್ಮಪ್ಪ ಭಂಡಾರಿ ದಂಪತಿಯು ತಾವು ನೂತನವಾಗಿ ನಿರ್ಮಿಸಿದ ಮನೆ…
“ಭ್ರಾಮರಿ ಪ್ರಸಾದ”
ದ ಗೃಹಪ್ರವೇಶವನ್ನು ಅಕ್ಟೋಬರ್ 17 ರ ಬುಧವಾರ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಸಡಗರ ಸಂಭ್ರಮದಿಂದ ನೆರವೇರಿಸಿದರು.
ಗೃಹಪ್ರವೇಶದ ಶುಭ ಗಳಿಗೆಯಲ್ಲಿ ಉಪಸ್ಥಿತರಿದ್ದ ಬಂಧುಗಳು, ಆತ್ಮೀಯರು, ಕುಟುಂಬಸ್ಥರು, ಸ್ನೇಹಿತರು ನಂತರ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡು ತಿಮ್ಮಪ್ಪ ಭಂಡಾರಿ, ಅರುಣಾ ಭಂಡಾರಿ, ಮಕ್ಕಳಾದ ಚೇತನ್ ಭಂಡಾರಿ, ಚೈತನ್ಯ ಭಂಡಾರಿ, ಸಚಿನ್ ಭಂಡಾರಿಯವರನ್ನು ಆಶೀರ್ವದಿಸಿ,ಶುಭ ಹಾರೈಸಿದರು.
ನೂತನ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಶ್ರೀ ದೇವರು ದಂಪತಿ ಮತ್ತು ಮಕ್ಕಳಿಗೆ ಆಯುರಾರೋಗ್ಯ , ಐಶ್ವರ್ಯ ಕರುಣಿಸಿ,ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *