November 23, 2024
sasyaloka4
ಕೆಸುವಿನಂತೆ ಪ್ರಕೃತಿ ನೀಡಿರುವ ಕೊಡುಗೆಗಳಲ್ಲಿ  ಅಣಬೆಗಳು ಕೂಡ ಒಂದು. ಮಳೆಹನಿ ಭುವಿಗೆ ಬಿದ್ದಾಗ ಕೆಸು ಹೇಗೆ ಮೇಲೆಳುತ್ತದೊ ಅದೇ ರೀತಿ ಅಣಬೆಗಳು ಸಿಡಿಲು ಮಳೆಯ ಆರ್ಭಟದ ನಡುವೆ ಭುವಿಯಿಂದ ಹೊರಗೆ ಬಂದು ಪಾಕ ಪ್ರವೀಣೆಯರ ಕೈಯಲ್ಲಿ ವಿವಿಧ ಹೆಸರಿನ ಖಾದ್ಯವಾಗುವ   ಕಲ್ಲಣಬೆ ಹಾಗೂ ಇತರ ಬಗೆಯ ಅಣಬೆಗಳ ಕಾಲವಂತೂ ಮಳೆಗಾಲದ ಆರಂಭದಲ್ಲಿ. ನಾನಂತೂ ಚಿಕ್ಕವಳಿರುವಾಗ ಮಳೆಗಾಲ ಆರಂಭವಾದ ಹಾಗೆ ಅಣಬೆ ಪದಾರ್ಥ ಮಾಡಿಕೊಡಿ ಎಂದು ಅಮ್ಮನಿಗೆ ದುಂಬಾಲು ಬೀಳುತಿದ್ದೆ. ಅಷ್ಟು ಅಚ್ಚುಮೆಚ್ಚಿನ ಪದಾರ್ಥವೆಂದರೆ ಅಣಬೆ.
 
ಅಣಬೆ: ರುಚಿಕರ ಖಾದ್ಯಕ್ಕಾಗಿ ಮಳೆಗಾಲದ ...
 
 ಹಾಗಾದರೆ ಇದರ ಹುಟ್ಟು ಹೇಗೆ?
 
   ಹಳೆಯ ಜೀವಕೋಶಗಳಿಗೆ ಮಳೆಹನಿ ಮರುಜೀವ ನೀಡಿ ಅಣಬೆಗಳಾಗುತ್ತವೆ. ಅಂದರೆ ಹಿಂದಿನ ವರ್ಷ ಮಳೆಗಾಲ ಮುಗಿದ ನಂತರ ಭೂಮಿಯಡಿಯಲ್ಲಿ ಹುದುಗಿ ಹೋಗಿರುವ ಮಿಲಿಯನ್ ಗಟ್ಟಲೆ, ಕೋಟಿಗಟ್ಟಲೆ  ಶಿಲೀಂಧ್ರಗಳ ಜೀವಕೋಶಗಳು ಮೊದಲ ಮಳೆಯ ಸ್ವರ್ಶವಾಗುತ್ತಿದ್ದಂತೆಯೇ  ಹತ್ತಿಯ ಸಣ್ಣ ಬಾಲ್ ಗಳಂತೆ , ಗೋಲಿಯಂತೆ ಕಲ್ಲಣಬೆಗಳು ಹುಟ್ಟಿಕೊಂಡರೆ, ಸಣ್ಣ ಕೊಡೆಯಂತೆ  ಇನ್ನೊಂದು ಬಗೆಯ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಇದರಲ್ಲಿ ಕೆಲವು ಜೀವಕೋಶಗಳಿಗೆ ಆಹಾರ ಸಿಗದೇ ಸತ್ತು ಹೋಗುತ್ತದೆ. ಅದರಲ್ಲೂ ಕಲ್ಲಣಬೆಯ  ಜೀವಕೊಶಗಳಿಗೆ ಮಾತ್ರ ಮಳೆಯ ನೀರಿನ ಸ್ವರ್ಶವಾದ ಕೆಲವೇ ಗಂಟೆಗಳಲ್ಲಿ ಹುಟ್ಟಿಕೊಳ್ಳುತ್ತವೆ ಇನ್ನು ಕೆಲವು ಶಿಲೀಂಧ್ರಗಳು ಜನ್ಮ ತಾಳಲು ಹಲವು ದಿನಗಳು ಬೇಕಾಗುತ್ತದೆ. ಮಳೆ ಮತ್ತು ಸಿಡಿಲಿನ ಪ್ರಮಾಣ ಕಡಿಮೆಯಾದರೆ ಇದು ಬೆಳೆಯುವುದಿಲ್ಲ. ಸಾಮಾನ್ಯವಾಗಿ ನಾನು ತಿಳಿದಂತೆ ಸ್ವಲ್ಪ ದೊಡ್ಡ ಗಾತ್ರದ ಅಣಬೆಗಳು  (ಪೆರ್ಗೆಲಾಂಬು ತುಳುವಿನಲ್ಲಿ) ಒಂದೇ ಕಡೆ ಮಾತ್ರವಲ್ಲದೆ  ಸುತ್ತಮುತ್ತ 5/6 ಕಡೆಗಳಲ್ಲಿ ಬೆಳೆಯುತ್ತವೆ. ಇವು ಶಿಲೀಂದ್ರ ಜಾತಿಗೆ ಸೇರಿದವುಗಳಾದ್ದರಿಂದ ಇವುಗಳನ್ನು ಸಸ್ಯಗಳೆಂದು ಕರೆಯಬಹುದಾಗಿದೆ. ಭಾರತೀಯರು ಆಯುರ್ವೇದದಲ್ಲಿ ಅಣಬೆಗಳನ್ನು ತಾಮಸ ಆಹಾರವೆಂದು ವಿಂಗಡಿಸಿದ ಪರಿಣಾಮ ಆಯುರ್ವೇದ ಆಹಾರ ಪದ್ದತಿ ಅನುಸರಿಸುವ ಭಾರತೀಯ ಸಸ್ಯಹಾರಿಗಳು ಅಣಬೆಯನ್ನು ಸ್ವೀಕರಿಸುವುದಿಲ್ಲ.
 
ಸ್ವ ಉದ್ಯೋಗಕ್ಕೆ ದಾರಿ ಅಣಬೆ ಕೃಷಿ- Kannada Prabha
 
ಅಣಬೆ ಮಸಾಲಾ
 
Mushroom Curry recipe in Kannada | ಅಣಬೆ ಗೊಜ್ಜು | Quick ...
 
   ‘ಲಾಂಬು,’ ಎಂದು ತುಳುವಿನಲ್ಲಿ ‘ಮಶ್ರೂಮ್’ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಅಣಬೆಗೆ ವಿಶೇಷ ಸ್ಥಾನವಿದೆ.
 
ಅಣಬೆಗಳು ಅಗ್ಯಾರಿಕೇಲಿಸ್  ವಿಭಾಗದಲ್ಲಿ ಬರುವ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿದೆ. ಇದರಲ್ಲಿ ಸುಮಾರು 125 ಜಾತಿಗಳು 4000 ಪ್ರಬೇಧಗಳು ಇದ್ದು ಎಲ್ಲೆಡೆ ಪಸರಿಸಿವೆ. ಇವು ಹೆಚ್ಚು ಆದ್ರತೆ ತೇವಾಂಶ ಇರುವ ಕಡೆ ಬೆಳೆಯುತ್ತವೆ. ಆದರೆ ಸಸ್ಯಗಳಂತೆ ಹರಿತ್ತಿರುದಿಲ್ಲ ಯಾಕೆಂದರೆ ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಂತೆ ಭಿನ್ನವಾಗಿರುತ್ತದೆ.
 
Mushroom Tikka - Cook With Manali
 
 
   ಸ್ವಾಭಾವಿಕವಾಗಿ ಅಣಬೆಗಳು ವಿವಿಧ ಬಣ್ಣ ಮತ್ತು ರಚನೆಗಳನ್ನು ಹೊಂದಿರುವುದು ನಿಜಕ್ಕೂ ಕುತೂಹಲ ಕೆರಳಿಸಿವೆ. ಅವುಗಳ ವಿಸ್ಮಯ ಹಾಗೂ ಸುಂದರ ರೂಪವನ್ನು ಪ್ರಕೃತಿಯಲ್ಲಿ ನೋಡುವುದು ಸೋಜಿಗವೇ ಸರಿ. ಆದರೆ ಜೋಕೆ!!!!? ಸುಂದರವಾಗಿ ಕಾಣುವ ಎಲ್ಲಾ ಅಣಬೆಗಳು ತಿನ್ನಲು ಯೋಗ್ಯವಲ್ಲ. ಇವುಗಳು ವಿಷಕಾರಿ ಅಣಬೆಗಳು ಹಾಗೂ ನಮ್ಮ ದೇಹಕ್ಕೆ ಮಾರಕವಾದ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಹಿತ್ತಲಲ್ಲಿ ಬೆಳೆದ ಎಲ್ಲಾ ಅಣಬೆಗಳು ತಿನ್ನಲು ಯೋಗ್ಯವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತಿ ಮುಖ್ಯ. ಅದರಲ್ಲಿ  ಬೋಲಿಟಸ್ ಮತ್ತು ಪ್ಲೋರೋಟಸ್ ಇಯಸ್ ಜಾತಿಗೆ ಸೇರಿದ ಅಣಬೆಗಳು ಬಣ್ಣಹೊಂದಿದ್ದರೂ ತಿನ್ನಲು ಯೋಗ್ಯ.
 
ಅಣಬೆಯಲ್ಲಿ ಏನೇನಿದೆ?
       ಅಣಬೆಯ ಪದಾರ್ಥಗಳು ಬಹಳ ರುಚಿಕರವಾಗಿದ್ದು ಮೊಟ್ಟೆ ಮಾಂಸಗಳ ರುಚಿಯನ್ನು ಮೀರಿಸಬಲ್ಲವು. ಹಾಗಾಗಿ ರೋಮನ್ ದೇಶದ ಜನರು ಅಣಬೆಗಳನ್ನು ದೇವರ ಆಹಾರ ವೆಂದು ವರ್ಣಿಸಿದ್ದಾರೆ. ಹೀಗೆ ಅಣಬೆಯಿಂದ ತಯಾರಿಸುವ ಪದಾರ್ಥ ರುಚಿಕರ. ಅಣಬೆಯ ಸೂಪ್ ಹಾಗೂ  ಅಣಬೆಯೊಂದಿಗೆ ಹೆಸರುಕಾಳು ಹಾಕಿ ಮಾಡುವ ಪದಾರ್ಥವಂತೂ ಈಗಲೂ ಬಾಯಲ್ಲಿ ನೀರೂರಿಸುವಂತದ್ದು . ಬಾಯಿಗೆ ರುಚಿಕರ  ಮಾತ್ರವಲ್ಲದೇ ಹೆಚ್ಚು ಪೌಷ್ಟಿಕಾಂಶ. ಹೋಟೆಲ್ ಗಳಲ್ಲಿ ಸಿಗುವ ಅಣಬೆಗಳು ಕೃತಕವಾಗಿ ಬೆಳೆಯುವ ಮಿಲ್ಕಿ ಅಣಬೆಗಳು.
 
 
Products – Phlexx
 
ಅಣಬೆಗಳಲ್ಲಿ ನಮ್ಮ ಶರೀರಕ್ಕೆ ಬೇಕಾದ  ಪ್ರೋಟೀನ್ , ಅಮೈನೋ ಆಮ್ಲಗಳು, ಜೀವಸತ್ವಗಳಾದ ರೈಬೋಪ್ಲೇವಿನ್, ನಿಯಾಸಿನ್, ಥೈಯಾಮಿನ್, ಬಯೋಟಿನ್ , ನಿಕೋಟಿನ್ ಆಮ್ಲ ಹಾಗೂ ಖನಿಜಾಂಶಗಳಾದ ಕ್ಯಾಲ್ಸಿಯಂ,ರಂಜಕ,ಕಬ್ಬಿಣ, ಸೋಡಿಯಂ, ಪೊಟಾಷ್ಯಿಯಂ ಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಮಧುಮೇಹಿಗಳಿಗೆ ಮತ್ತು ಹೃದ್ರೋಗಿಗಳಿಗೆ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಅಣಬೆಯಲ್ಲಿರುವ ಔಷಧೀಯ ಗುಣಗಳು ರಕ್ತದೊತ್ತಡ, ಡಯಾಬಿಟಿಸ್, ಮೂಲವ್ಯಾಧಿ, ಅಸ್ತಮಾ , ಕ್ಯಾನ್ಸರ್,ಲಿವರ್ , ಕಿಡ್ನಿ, ಅಲರ್ಜಿಗಳು ವಿರುದ್ಧ ಉತ್ತಮ ಪರಿಣಾಮ ಬೀರುತ್ತದೆ. ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸಿಲೋಸೈಬೆ ಮೆಕ್ಸಿಕಾನ್ ಎಂಬ ಜಾತಿಯ ಅಣಬೆಯಲ್ಲಿರುವ ಹಲ್ಲೊಸಿನೊಜೆನಿಕ್ ಎಂಬ ರಾಸಾಯನಿಕ ವಸ್ತುವನ್ನು ಮನೋರೋಗ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಅಮಾನಿಟಮಸ್ ಕೇರಿಯಾ ಎಂಬ ಅಣಬೆಯನ್ನು ಕೆಲವು ಔಷಧಿಗೆ ಬಳಸುತ್ತಾರೆ. ಅಗ್ಯಾರಿಕಸ್,ಇಗ್ನೇರಿಯಸ್, ಅಗ್ಯಾರಿಕಸ್ ಆಲ್ಬಸ್ , ಅಗ್ಯಾರಿಕಸ್ ಅಸ್ಟ್ರಾಯಟಸ್ ಮುಂತಾದವುಗಳನ್ನು ಹೋಮಿಯೋಪತಿ ಔಷಧಿ ಪದ್ದತಿಯಲ್ಲಿ  ಬಳಸಲಾಗುತ್ತದೆ.
       
ಬೇಡಿಕೆ:
   ಕೃತಕವಾಗಿ ಬೆಳೆಯುವ ಅಣಬೆಗಿಂತಲೂ ನೈಸರ್ಗಿಕವಾಗಿ ದೊರೆಯುವ ಅಣಬೆಗಳಿಗಂತೂ ಸಿಕ್ಕಾಪಟ್ಟೆ ಡಿಮ್ಯಾಂಡ್. ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಕರಾವಳಿ ಭಾಗದ ಜನರು ಹೆಚ್ಚಾಗಿ ಅಣಬೆಯನ್ನು ಬಳಸುತ್ತಾರೆ. ಅದರಲ್ಲೂ ಈ ವರ್ಷ ಪಶ್ಚಿಮ ಘಟ್ಟ ತಪ್ಪಲಿನ ಕಾರ್ಕಳ ಕಲ್ಲಣಬೆ ಮಾರ್ಕೆಟ್ ಗಳಲ್ಲಿ  ಬ್ರಾಂಡ್ ಆಗಿ ಹೆಚ್ಚು ಬೇಡಿಕೆ ಪಡೆದು ಕಾರ್ಕಳ ಅಣಬೆಗೆ ಮಾರುಕಟ್ಟೆ ದರ ಕೆ.ಜಿ ಗೆ ರೂ.450 ರಿಂದ ರೂ. 600 ಇತ್ತು . ಅಷ್ಟೇ ಅಲ್ಲದೆ ಈ ಅಣಬೆ ಬೆಂಗಳೂರು ಮತ್ತು ಮುಂಬೈಗೂ ರವಾನೆಯಾಗುತ್ತಿದೆ.
 
ಕಲ್ಲಾ ಲಾಂಬು..... ಕಲ್ಲು ಅಣಬೆ 🍄 - « Porlu Marl ...
 
ಹೆಚ್ಚಾಗಿ ಜೂನ್ ನಂತರ ಕಾಣಿಸಿಕೊಳ್ಳುವ ಅಣಬೆಗಳು ಅಕಾಲಿಕ ಮಳೆಯ ಕಾರಣದಿಂದ ಈ ವರ್ಷ ಬೇಗನೆ ಕಾಣಿಸಿಕೊಂಡಿತ್ತು.
 
 ಅಷ್ಟೆ ಅಲ್ಲದೆ ಅಣಬೆಗಳು ವಾಸ್ತು ಶಿಲ್ಪಗಳಿಗೆ ಮಾದರಿಯಾಗಿದ್ದು ಅಣಬೆಗಳ ಮಾದರಿಯ ಕಟ್ಟಡ, ಪಾರ್ಕು ಗಳ ವಿನ್ಯಾಸವು ಮಾಡಲಾಗಿದ್ದು ಇದು ಎಲ್ಲರ ಗಮನ ಸೆಳೆದಿರುವುದಂತೂ ನಿಜ .
 
 
-ಸುಪ್ರೀತ ಭಂಡಾರಿ ಸೂರಿಂಜೆ

Leave a Reply

Your email address will not be published. Required fields are marked *