ಬೇಕಾಗುವ ಸಾಮಾಗ್ರಿಗಳು
• ಬನ್ನೂರು ಮಟನ್-೨ಕೆ.ಜಿ
• ತುಪ್ಪ ಅಥವಾ ಎಣ್ಣೆ-೬ ಚಮಚ
• ಉಪ್ಪು-ರುಚಿಗೆ ತಕ್ಕಷ್ಟು
• ಅರಿಶಿನ-ಅರ್ಧ ಚಮಚ
• ಕೊತ್ತಂಬರಿ ಸೊಪ್ಪು, ಪುದೀನ-೧ ಕಟ್ಟು
• ನಿಂಬೆಹಣ್ಣು-೧
• ಟೊಮಾಟೊ-೧
• ತುಂಡರಿಸಿದ ಈರುಳ್ಳಿ-೨
• ಸಾಸಿವೆ-ಅರ್ಧ ಚಮಚ
ಮಸಾಲಾಗೆ ಬೇಕಾಗುವ ಸಾಮಾಗ್ರಿಗಳು
• ಕಾಶ್ಮೀರಿ ಉದ್ದ ಮೆಣಸು-೧೦
• ಗಿಡ್ಡ ಮೆಣಸು-೬
• ಕತ್ತರಿಸಿದ ಈರುಳ್ಳಿ-೨
• ಬೆಳ್ಳುಳ್ಳಿ ಎಸಳು-೧೨
• ಕೊತ್ತಂಬರಿ ಬೀಜ-೨ ಚಮಚ
• ಜೀರಿಗೆ-ಕಾಲು ಚಮಚ
• ಸಾಸಿವೆ-ಅರ್ಧ ಚಮಚ
• ಸೋಂಪು-ಅರ್ಧ ಚಮಚ
• ಲವಂಗ-೪
• ಕರಿ ಮೆಣಸು-೧೨
• ಮೆಂತ್ಯ-೪೫ ಕಾಳು
• ಅರಿಶಿನ-ಅರ್ಧ ಚಮಚ
• ತುರಿದ ತೆಂಗಿನಕಾಯಿ-೧ ಕಪ್
• ಹುಣಸೇಹಣ್ಣು-ನಿಂಬೆಹಣ್ಣು ಗಾತ್ರದ್ದು
• ತೆಂಗಿನ ಹಾಲು-೧ ಕಪ್
ತಯಾರಿಸುವ ವಿಧಾನ ಹುಣಸೆಹಣ್ಣನ್ನು ಹೊರತು ಪಡಿಸಿ ಉಳಿದೆಲ್ಲ ಸಾಮಾಗ್ರಿಗಳನ್ನು ಒಂದಾದ ಮೇಲೊಂದರಂತೆ ಹುರಿಯಿರಿ. ತೆಂಗಿನ ತುರಿ ಹುರಿಯುವಾಗ ಅದಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಹುರಿಯಿರಿ. ಒಂದು ಮಿಕ್ಸಿ ಜಾರ್ ಗೆ ಹುರಿದ ಸಾಮಾಗ್ರಿಗಳು, ಹುಣಸೇಹಣ್ಣು, ತೆಂಗಿನ ಹಾಲು ಸೇರಿಸಿ ನುಣ್ಣಗೆ ಅರೆಯಿರಿ. ಕುಕ್ಕರ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ. ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ಕತ್ತರಿಸಿಟ್ಟ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಅದಕ್ಕೆ ಕತ್ತರಿಸಿಟ್ಟ ಟೊಮಾಟೋ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ತೊಳೆದಿಟ್ಟ ಮಟನ್ , ನಿಂಬೆ ರಸ, ಅರೆದಿಟ್ಟ ೪ ಚಮಚ ಮಸಾಲೆಯನ್ನು ಸೇರಿಸಿ ಮಿಕ್ಸ್ ಮಾಡಿ ಕುದಿಯುವವರೆಗೂ ಕೈಯಾಡಿಸಿರಿ. ಬಳಿಕ ಮುಚ್ಚಳವನ್ನು ಮುಚ್ಚಿ ೪ ವಿಷಲ್ ಕೂಗಿಸಿ.
ಮುಚ್ಚಳ ತೆರೆದ ಬಳಿಕ ಉಳಿದಿಟ್ಟ ಮಸಾಲೆಯನ್ನು ಅದಕ್ಕೆ ಸೇರಿಸಿ. ಮಸಾಲೆ ದಪ್ಪಗೆ ಅನಿಸಿದರೆ ತೆಂಗಿನ ಹಾಲು ಅಥವಾ ನೀರನ್ನು ಸೇರಿಸಬಹುದು. ಮತ್ತೆ ಮುಚ್ಚಳ ಮುಚ್ಚಿ ಬೇಯಿಸಿ. ಗ್ರೇವಿ ನೀರಾಗಿದ್ದರೆ ಸ್ವಲ್ಪಹೆಚ್ಚಾಗಿ ಕುದಿಸಬಹುದು. ಕಡಿಮೆ ಉರಿಯಲ್ಲಿ ೧೫ ನಿಮಿಷಗಳ ಕಾಲ ಬೇಯಿಸಿ. ಬೇಕಾದಲ್ಲಿ ಉಪ್ಪು ಸೇರಿಸಬಹುದು. ಸಣ್ಣಗೆ ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.
✍ ತೃಪ್ತಿ ಭಂಡಾರಿ
Good one sis