January 18, 2025
97
ಳುತ್ತಿದ್ದೆ ನಾನು ತಿಪ್ಪೆ ತೊಟ್ಟಿಯಲ್ಲಿ ,
ನಗುತ್ತಿತ್ತು ದೂರದಲ್ಲೊಂದು ಮಗು ತೂಗು ತೊಟ್ಟಿಲಲ್ಲಿ…
ಸೇರಿದ್ದವು ಕಾಗೆಗಳು ನನ್ನ ಬಳಿ ಸಾವಿರಾರು,
ಆ ಮಗುವಿನ ಬಳಿ ಇದ್ದರು ಹಲವಾರು ಜನರು..
ತುತ್ತು ಅನ್ನಕಿಲ್ಲದೆ ನಾನು ಚೀರುತ್ತಿದ್ದೆ..ಆದರೆ
ಆ ಮಗು ಕೊಟ್ಟಿದ್ದು, ತಿಂದಿದ್ದು ,ಹೆಚ್ಚಾಗಿ ಚೀರುತ್ತಿತ್ತು …
ಎಲ್ಲರ ಪ್ರೀತಿ ಪಾತ್ರ ಮಗುವಾಗಿರಲಿಲ್ಲ ನಾನು,
ಆ ಮಗುವು ಎಲ್ಲರಿಂದ  ಮುದ್ದಿಸಿಕೊಳ್ಳುತ್ತಿತ್ತು ನಾನಳುವಂತೆ..
ನನ್ನ ನೋಡಿ ಎಲ್ಲರೂ ಹೇಳುತ್ತಿದ್ದರೂ ಅಯ್ಯೋ ಪಾಪ ಎಂದು!
ಆ ಮಗು ಕಂಡು ಎತ್ತಿ ಹಿಡಿದು ಮುದ್ದಿಸುತ್ತಿದ್ದರು
ಚಿನ್ನ, ರನ್ನ ,ಬಂಗಾರ, ಎಂದು….
ನಾನಿಂದು ತೊಟ್ಟಿಯಲ್ಲಿ ಬಿದ್ದಿರುವ ಅನಾಥ, 
ಆ ಮಗುವು ತೊಟ್ಟಿಲಲ್ಲಿ ಮಲಗಿ ಕೇಳುತ್ತಿತ್ತು ಸಂಗೀತ..
ಹುಟ್ಟಿಸಿದವರ ಪ್ರೀತಿ ದಕ್ಕಲಿಲ್ಲ ,ಅದಕ್ಕೆ ನಾನು ಬೀದಿಗೆ ಬಿದ್ದಿರುವೆ,
ಎಲ್ಲ ಸಿಕ್ಕ  ಆ ಮಗು ಅರಮನೆಯಲ್ಲಿ ಸುಖಿಸುತ್ತಿದೆ..
✍ ನಾಗಶ್ರೀ ಭಂಡಾರಿ ಮೂಡುಬಿದಿರೆ

Leave a Reply

Your email address will not be published. Required fields are marked *