ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಶ್ರೀ ಮೋಹನ್ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ಮೋಹನ್ ಭಂಡಾರಿ ದಂಪತಿಯ ಪುತ್ರಿ ಕುಮಾರಿ ನಾಗಶ್ರೀ ಕೆ ಎಂ ಭಂಡಾರಿಯವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 558 (89.28% ) ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ
ನಾಗಶ್ರೀ ಕೋಣಂದೂರಿನದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ.
ನಾಗಶ್ರೀ ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.