ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಕೌನ್ಸಿಲ್ ಅಧೀನದ ಪ್ರೀಮಿಯರ್ ಆರ್ ಮತ್ತು ಡಿ ಲ್ಯಾಬೋರೇಟರಿ ಆಗಿದೆ. ಅಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆಯು ಎನ್‌ಎಎಲ್. ಪ್ರಸ್ತುತ ಈ ಸಂಸ್ಥೆಯು ಬೆಂಗಳೂರು ಕೇಂದ್ರದಲ್ಲಿನ ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (Gen / S & P)-12
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಎಫ್ ಅಂಡ್ ಎ) – 5
ಜೂನಿಯರ್ ಸ್ಟೆನೋಗ್ರಾಫರ್ (ಇಂಗ್ಲಿಷ್)- 7
ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಜತೆಗೆ ಟೈಪಿಂಗ್ ಗೊತ್ತಿರಬೇಕು. ಕಂಪ್ಯೂಟರ್ ಅರಿವು ಇರಬೇಕು.
ವಯೋಮಿತಿ ಅರ್ಹತೆಗಳು
ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗೆ 27 ವರ್ಷ ವಯೋಮಿತಿ ಮೀರಿರಬಾರದು. ಇತರೆ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ಮೀರಿರಬಾರದು.
ವೇತನ ಎಷ್ಟು?
ಸ್ಟೆನೋಗ್ರಾಫರ್ ಹುದ್ದೆಗೆ 7 ಸಿಪಿಸಿ, ಲೆವೆಲ್ 4 ಪೇ ಮೆಟ್ರಿಕ್ ಆಧಾರದಲ್ಲಿ ಹಾಗೂ ಇತರೆ ಹುದ್ದೆಗಳಿಗೆ 7 ಸಿಪಿಸಿ, ಲೆವೆಲ್ 2 ಪೇ ಮೆಟ್ರಿಕ್ ಆಧಾರದಲ್ಲಿ ವೇತನ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 28-11-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27-12-2020
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಇತರೆ ಹೆಚ್ಚಿನ ಮಾಹಿತಿಗಳಿಗೆ ವೆಬ್‌ಸೈಟ್ ವಿಳಾಸ www.nal.res.in ಗೆ ಭೇಟಿ ನೀಡಿರಿ.
-ಭಂಡಾರಿ ವಾರ್ತೆ