January 19, 2025
Puttur Namrutha balakrishna

ಪುತ್ತೂರು  ದಿವಂಗತ ಮಹಾಲಿಂಗ ಭಂಡಾರಿ  ಮತ್ತು ದಿವಂಗತ ಶೀಲಾವತಿ ಮಹಾಲಿಂಗ ಭಂಡಾರಿ  ಹಾಗೂ ತಿರುಮಲೆಗುತ್ತು ದಿವಂಗತ ಅಚ್ಚಣ್ಣ ಭಂಡಾರಿ  ಮತ್ತು  ದಿವಂಗತ ಸುಶೀಲ ಭಂಡಾರಿ ಬನ್ನಂಜೆ ದಂಪತಿಗಳ ಮೊಮ್ಮಗಳು  ಹಾಗೂ
ಶ್ರೀ  ಬಾಲಕೃಷ್ಣ ಭಂಡಾರಿ ಪುತ್ತೂರು ಮತ್ತು ಶ್ರೀಮತಿ ಸುಲೋಚನ ಬಾಲಕೃಷ್ಣ ಪೂನಾ ದಂಪತಿಯ ಸುಪುತ್ರಿ

ಡಾ॥  ಪುತ್ತೂರು ನಮೃತಾ ಬಾಲಕೃಷ್ಣ

 ಕಳೆದ ವರ್ಷದಲ್ಲಿ ನಡೆದ ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ  ವೆೃದಕೀಯ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಡಾ॥ ಪುತ್ತೂರು ನಮ್ರತಾ ಬಾಲಕೃಷ್ಣ  ಇವರು  ಪ್ರಾಥಮಿಕ ಮತ್ತು  ಪ್ರೌಢಶಿಕ್ಷಣವನ್ನು ಪೂನಾದ ಸೈಂಟ್ ಫಿಲಿಕ್ಸ್  ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ  ಶಿಕ್ಷಣ ಪಡೆದು  ಪೂನಾದ ಫೆರ್ಗುಸನ್ ಪಿ.ಯು ಕಾಲೇಜಿನಲ್ಲಿ ಪಿ.ಯು.ಸಿ  ವ್ಯಾಸಂಗ ಮಾಡಿ ಹೊರನಾಡು  ಕನ್ನಡಿಗರು  ವಿಭಾಗದಲ್ಲಿ  ಮಂಗಳೂರಿನ  ಹೆಸರಾಂತ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಕಾಲೇಜಿನಲ್ಲಿ ಸೀಟು ಪಡೆದ ಇವರು ಅತ್ಯುತ್ತಮ ಅಂಕದೊಂದಿಗೆ ಎಂಬಿ ಬಿಎಸ್ ಪದವಿಯನ್ನು  ಮುಗಿಸಿ ಮಂಗಳೂರಿನ  ಎ.ಜೆ.ಆಸ್ಪತ್ರೆಯಲ್ಲಿ  ವೈದ್ಯಕೀಯ ತರಬೇತಿಯನ್ನು ಪಡೆದಿದ್ದಾರೆ
ಪಠ್ಯೇತರ ಚಟುವಟಿಕೆಯಲ್ಲಿ ಸದಾ ತೊಡಗಿಸಿಕೊಂಡಿರುವ ಡಾ॥ ನಮ್ರತಾ ಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚು.


 ಭಂಡಾರಿ ಸಮಾಜದಲ್ಲಿ ಎಲ್ಲಾರಿಗೂ ಚಿರಪರಿಚಿತ ರಾಗಿರುವ ಶಿಕ್ಷಣ  ಪ್ರೇಮಿ, ಕೊಡುಗೈ ದಾನಿ , ಉದ್ಯಮಿ ಪೂನಾದ ಶ್ರೀ  ಬಾಲಕೃಷ್ಣ ಭಂಡಾರಿ ಯವರು ಅಂದಿನ ಹೆಸರಾಂತ   ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ ಸುರತ್ಕಲ್ (KREC) ಇಲ್ಲಿಯ ವಿದ್ಯಾ  ಸಂಸ್ಥೆಯಲ್ಲಿ  ಭಂಡಾರಿ ಸಮಾಜದಿಂದ ಅತ್ಯುತ್ತಮ  ಅಂಕದೊಂದಿಗೆ ಇಂಜಿನಿಯರ್  ಪದವಿ ಪೂರೈಸಿದ ವಿದ್ಯಾರ್ಥಿ ಎಂಬಾ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕಳೆದ  26 ವರ್ಷಗಳಿಂದ ಪೂನಾದಲ್ಲಿ ಕ್ಯಾಬಿನೆಟ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್  ಸಂಸ್ಥೆಯನ್ನು  ನಡೆಸಿಕೊಂಡಿರುತ್ತಾರೆ ಇದರ ಉತ್ಪನ್ನ ವಿಶ್ವದಾದ್ಯಂತ  ಜಗತ್ಪ್ರಸಿದ್ಧವಾಗಿದೆ.ಸದಾ ಸಮಾಜ ಸೇವೆಯಲ್ಲಿ  ತೊಡಗಿಸಿಕೊಂಡಿರುವ ಶ್ರೀ  ಬಾಲಕೃಷ್ಣ ಪೂನಾ ಇವರು ಪುತ್ತೂರಿನಲ್ಲಿ  ತನ್ನ  ತಂದೆಯ ನೆನಪಿಗಾಗಿ ಮಹಾಲಿಂಗ ಭಂಡಾರಿ ಚಾರಿಟೇಬಲ್ ಸೇವಾ ಟ್ರಸ್ಟ್  ಎಂಬಾ ಸಂಸ್ಥೆಯನ್ನು  ಸ್ಥಾಪಿಸಿ  ಕಳೆದ 15 ವರ್ಷಗಳಿಂದ  ಭಂಡಾರಿ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ಮಾಡುತ್ತಿದ್ದಾರೆ.  ಹಾಗೂ  ಮುಂಬಯಿಯಲ್ಲಿ  ತಂದೆ  ದಿವಂಗತ ಮಹಾಲಿಂಗ ಭಂಡಾರಿ ಮತ್ತು  ಅತ್ತೆ  ದಿವಂಗತ ಸುಶೀಲ ಭಂಡಾರಿ  ಬನ್ನಂಜೆ  ನೆನಪಿಗಾಗಿ  ರೂಪಾಯಿ 2,50,000 ಹಣವನ್ನು ಠೇವಣಿ  ಇಟ್ಟು  ಮುಂಬಯಿ ಭಂಡಾರಿ ಸೇವಾ ಸಮಿತಿಯ  ವತಿಯಿಂದ  ಎಸ್ ಎಸ್ ಎಲ್ ಸಿ   ಮತ್ತು  ಪಿ.ಯು ಸಿ  ಯಲ್ಲಿ  ಅತ್ಯಧಿಕ ಅಂಕ ಪಡೆದ  ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ  ಪ್ರೋತ್ಸಾಹ ಧನ ನೀಡುತ್ತಿದ್ದಾರೆ.  


ಇವರ ಮೊದಲ ಪುತ್ರಿ  ಶ್ರೀಮತಿ ಹರ್ಷಿತಾ  ಬಿ. ಇ, ಎಂ ಬಿ ಎ ವ್ಯಾಸಂಗ ಮಾಡಿ  ಪತಿ ಶ್ರೀ ಕಾರ್ತಿಕ್  ಇವರೊಂದಿಗೆ  ಕುವೈಟ್ ನಲ್ಲಿ ವೃತ್ತಿ ಹಾಗೂ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ  ಭಂಡಾರಿ ಸಮಾಜದಲ್ಲಿ  ಉತ್ತಮ  ಸಾಧನೆ ಮಾಡಿರುವ ಶ್ರೀ ಬಾಲಕೃಷ್ಣ ಪುತ್ತೂರು   ಇವರ ಸುಪುತ್ರಿ  ಡಾ॥ ಪುತ್ತೂರು ನಮ್ರತಾ ಬಾಲಕೃಷ್ಣ   ಎಂದು  ಹೇಳಲು “ ಭಂಡಾರಿ ವಾರ್ತೆಗೆ” ಬಹಳ ಹೆಮ್ಮೆಯಾಗುತ್ತದೆ .
ಶ್ರೀ ಬಾಲಕೃಷ್ಣ ಪುತ್ತೂರು ಭಂಡಾರಿ ವಾರ್ತೆಯ ಜೊತೆಗೆ  ಮಗಳ ಸಾಧನೆಯ ಬಗ್ಗೆ  ಸಂತಸ ವ್ಯಕ್ತಪಡಿಸಿದರು.


ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ  ಪದವಿ (MD) ಮಾಡುವ ಬಗ್ಗೆ  ಡಾ॥ ಪುತ್ತೂರು  ನಮ್ರತಾ ಬಾಲಕೃಷ್ಣರವರ ಕನಸು ನನಸು ಆಗಿ ಈಡೇರಿಸಲು ಭಗವಂತನ ಅನುಗ್ರಹ  ಸದಾ ಇರಲಿ ಎಂದು  ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ  ವಾರ್ತೆ  ಹಾರ್ದಿಕ ಶುಭ ಹಾರೈಸುತ್ತದೆ.

-ಭಂಡಾರಿ ವಾರ್ತೆ

 
 

Leave a Reply

Your email address will not be published. Required fields are marked *