
ನಸುನಗುತಿರುವ
ಕುಡಿಮೀಸೆ ಹುಡುಗ;
ನನ್ನ ಹೃದಯ
ವೀಣೆ ಮೀಟಿದವ..
ಪಿಸುಮಾತಿನಲಿ
ಮನ ಸೋಲಿಸುವ;
ನನ್ನ ಹುಡುಗ;ಕಣ್ಣಲ್ಲೇ
ಸಂಭಾಷಣೆ ಮಾಡುವವ.
ಹಿಂಬಾಲಿಸಿ ಬರುವುದಿಲ್ಲ
ಮನದ ಹಿಂಬಾಲಕನಾಗಿರುವನಲ್ಲ
ಮಾತಂತೂ ಸವಿಬೆಲ್ಲ,
ಮೆತ್ತನೆ ಕಚಗುಳಿಯಿಡುವನಲ್ಲ..
ಕೋಪವ ತರಿಸಿ,ನಾಸಿಕವ
ಹಿಂಡುವನು ಮೆಲುವಾಗಿ;
ಸೊಂಟ ಬಳಸಿ ಮುದ್ದಾಡುವನು ಮಗುವಾಗಿ..
ನಿನ್ನ ಜೊತೆ ಕಳೆವ ಕ್ಷಣಗಳು ಮಧುರ;
ನಿನ್ನ ಜೊತೆಯೇ ಇರಬೇಕೆಂಬುದು ನನ್ನ
ಮನದ ಕಾತರ…

✍ ನಾಗಶ್ರೀ ಭಂಡಾರಿ, ಮೂಡುಬಿದಿರೆ
Super
Nice
Nice
Meaning full
Nice. Meaning full
Nice. Meaning full
Thanku all
Thanku all
ನೀನಿರಲು ಸನಿಹ
ಬಳಿಬಾರದು ವಿರಹ….
ನೀನಿರಲು ದೂರ
ಮಸಸೇಕೋ ಬಾರ…ಬಾರ.