
ನನ್ನ ಕನಸುಗಳೇ ಹೀಗೆ
ಬಾಂದಳ ದಲ್ಲಿ ಮಿನುಗುವ ಚುಕ್ಕಿ ಚಂದ್ರಮರ ಹಾಗೆ
ನನ್ನ ಕನಸುಗಳೇ ಹೀಗೆ
ಉದಾಯಾಸ್ತಮಾನ ಭಾಸ್ಕರನ ಹಾಗೆ
ನನ್ನ ಕನಸುಗಳೇ ಹೀಗೆ
ಸರದಿಯಲ್ಲಿ ದಡ ಮುತ್ತುವ ಅಲೆಯ ಹಾಗೆ
ನನ್ನ ಕನಸುಗಳೇ ಹೀಗೆ
ಹೊಸದಾಗಿ ಸೀರೆಯುಟ್ಟು ನಾಚುವ ನಾರಿಯ ಹಾಗೆ
ನನ್ನ ಕನಸುಗಳೇ ಹೀಗೆ
ಮೊದಲಾಗಿ ಹೆಜ್ಜೆಮೆಲ್ ಹೆಜ್ಜೆ ಇಡುವ ಮಗುವಿನ ಹಾಗೆ
ನನ್ನ ಕನಸುಗಳೇ ಹೀಗೆ
ಸುಖವಾಗಿ ಬಿರಿಬಿರಿದು ಅರಳುವ ಮೊಗ್ಗಿನ ಹಾಗೆ
ನನ್ನ ಕನಸುಗಳೇ ಹೀಗೆ
ಹಗುರಾಗಿ ಬಾಗಿ ಬಳುಕುವ ಬೀಳು ಬಳ್ಳಿಯ ಹಾಗೆ
ನನ್ನ ಕನಸುಗಳೇ ಹೀಗೆ
ಇಂಪಾಗಿ ಹಾಡುವ ಕರಿ ಕೋಗಿಲೆಯ ಹಾಗೆ
ನನ್ನ ಕನಸುಗಳೇ ಹೀಗೆ
ನಾದ ವಾಗಿ ಹರಿಯುವ ಝರಿ ತೊರೆಗಳ ಹಾಗೆ
ನನ್ನ ಕನಸುಗಳೇ ಹೀಗೆ ನನ್ನ ಕನಸುಗಳೇ ಹೀಗೆ
ನನ್ನ ಕನಸುಗಳೇ ಹೀಗೆ……
ಈಗ ಹಗುರಾಗಿ ಹಾರಿದೆ ಸೂರ್ಯಾಸ್ತಮಾನ ಸೂಚಿಸುವ ಬಾನಾಡಿ ಗಳಂತೆ….
✍🏻: ರಮೇಶ್ ಭಂಡಾರಿ ಬೆಳ್ವೆ