January 18, 2025
Seetharam

ಎಲ್ಲರಿಗೂ ತಿಳಿದ ಹಾಗೆ ಶ್ರೇಷ್ಟ ಚಿಂತಕ/ಶಿಕ್ಷಕ ಮಾಜಿ ರಾಷ್ಟ್ರಪತಿ ಡಾ! ರಾಧಾಕೃಷ್ಣನ್ ಅವರ ಜನ್ಮ ದಿನ ಸೆಪ್ಟೆಂಬರ್ 5ನೇ ತಾರೀಕನ್ನು “ಶಿಕ್ಷಕರ ದಿನಾಚರಣೆ” ಎಂದು ಆಚರಿಸಲಾಗುತ್ತಿದೆ.

     ಶಿಕ್ಷಕರ ದಿನಾಚರಣೆಯ ಸಂಬಂಧ    ಶಿಕ್ಷಕರ/ವಿದ್ಯಾರ್ಥಿಗಳ ಬಗ್ಗೆ ವೈಭವೀಕರಿಸಿ ಮಾತಾಡುವ ಕಲೆ ಅಥವಾ ಶಿಕ್ಷಣದ ಪಾತ್ರ, ಶಿಕ್ಷಣದ ಮೌಲ್ಯಗಳು, ಇದೆಲ್ಲಾ ವಿಮರ್ಶಿಸುವ ಸಾಮರ್ಥ್ಯ ನನ್ನಲ್ಲಿ ಇಲ್ಲ Frankely speaking.

   ನನಗೆ ಎಂಟು ವರುಷಗಳು ಪೂರ್ತಿಯಾದ ಬಳಿಕವೇ ನನ್ನ ಪೋಷಕರು ನನ್ನನ್ನು 1961 ನೇ ಇಸವಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಗೆ  ಸೇರ್ಪಡೆಗೊಳಿಸಿದರು.

ಪ್ರಾಥಮಿಕ/ಹಿರಿಯ ಪ್ರಾಥಮಿಕ ಶಾಲಾ ಅವಧಿಯಲ್ಲಿ ನಮಗೆ ಅಕ್ಷರಾಭ್ಯಾಸದೊಂದಿಗೆ  ಪಾಠ ಮಾಡುವ ಗಂಡಸರನ್ನು ಮಾಸ್ಟ್ರು ಹಾಗೂ ಮಹಿಳೆಯನ್ನು ಟೀಚರ್ ಎಂದು ಕರೆಯುತಿದ್ದೆವು.

    ನಮ್ಮ ಹೈಸ್ಕೂಲು ದಿನಗಳಲ್ಲಿ ಕೂಡಾ  ನಮಗೆ ಶಿಕ್ಷಕ ಪದದ ಅರ್ಥ/ ವ್ಯಾಖ್ಯಾನ  ತಿಳಿದಿರಲಿಲ್ಲ.  ಆ ಮೇಲೆ ನಾನು ಹಾಗು ನನ್ನಂತಹವರಿಗೆ ಅರ್ಥವಾದದ್ದು ಏನೆಂದರೆ Teacher ಅಂದರೆ ಶಿಕ್ಷಕ ಅಥವಾ ಭೊಧಕ. ಪಾಠ ಮಾಡುವ ಮಹಿಳೆ ಶಿಕ್ಷಕಿ ಹಾಗೂ ಪಾಠ ಮಾಡುವ ಪುರುಷರನ್ನು ಶಿಕ್ಷಕನೆಂದು ಕರೆಯುವ ಪಧ್ಧತಿ  ನಮಗೆ ಅರ್ಥವಾಗುವಾಗ ಭಾರಿ ವಿಳಂಬವಾಗಿತ್ತು. 

    ನನ್ನ ದೃಷ್ಟಿಯಲ್ಲಿ ಪ್ರಾಥಮಿಕ ಶಾಲೆಯಿಂದ ಹೈಯರ್ ಪ್ರೈಮರಿಯವರೆಗಿನ ಶಿಕ್ಷಕರು ನಮಗೆ  ಗುರು ಸಮಾನರಾಗಿಯೂ ಹಾಗೂ ಹೈಸ್ಕೂಲು ಶಿಕ್ಷಣದವರೆಗೆ  ಪಾಠ ಮಾಡುವವರು ನಮಗೆ ಶಿಕ್ಷಕರಾಗಿಯೂ ನನಗೆ ಕಂಡಿದ್ದಾರೆ.

   ಬಾಲ್ಯಾವಸ್ಥೆಯಲ್ಲಿದ್ದಾಗ ವಿದ್ಯಾರ್ಥಿಗಳ ಕೈ ಹಿಡಿದು ಅಕ್ಷರಾಭ್ಯಾಸ ಮಾಡಿಸಿದವರು ಶಿಕ್ಷಕರು. ಸಣ್ಣ ಪುಟ್ಟಮಕ್ಕಳ ತುಂಟಾಟ ಕೀಟಲೆಗಳೆನ್ನೆಲ್ಲಾ ಸಹಿಸಿಕೊಂಡು ತಪ್ಪುಗಳನ್ನು ತಿದ್ದಿಸಿಕೊಳ್ಳುವ ಹಾಗೂ ವಿದ್ಯಾರ್ಥಿಗಳಿಗೆ ಬದುಕಿನ ಪಾಠಗಳನ್ನು ಸಣ್ಣ ಸಣ್ಣ ಕಥೆಯ ರೂಪದಲ್ಲಿ ಮತ್ತು ಪಾಠಗಳನ್ನು ಆಟದ ಮೂಲಕ ತೋರಿಸುವ ವೇಳೆ ಪಾಠ ಮಾಡುವವರು ಬರೇ ಶಿಕ್ಷಕರ ಪಾತ್ರವಲ್ಲ ಪೋಷಕರ ಪಾತ್ರವನ್ನೂ  ನಿರ್ವಹಿಸುತ್ತಾರೆ.

   ಮೆಟ್ರಿಕ್ಯುಲೇಷನ್ ಬಳಿಕದ ಮುಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಪಾಠ/ಭೋಧಕರನ್ನು ಬೇರೆ ಬೇರೆ ಸ್ಥಾನಮಾನಗಳಿಂದ ಸಮಾಜದಲ್ಲಿ ಕರೆಯಲ್ಪಡುತ್ತಾರೆ.

   ಉದಾ:  Lecturers, Principal,  Associated Professors, Professors, Senior Professors , Physical Directors , ಹೀಗೆ ನೂರಾರು ಪದ ನಾಮಂಕಿತ ಹುದ್ದೆಗಳಲ್ಲಿ ಸೇವೆಗೈದರೂ ಅವರ ಮೂಲ ವೃತ್ತಿಯ ಪ್ರವೃತ್ತಿ ಶಿಕ್ಷಕರೇ ಆಗಿರುತ್ತಾರೆ ಎಂಬುದು ನನ್ನ ನಂಬಿಕೆ ಹಾಗೂ ತಿಳುವಳಿಕೆ.

   ಭಾರತದಾಧ್ಯಂತ ಇರುವ ಯಾವುದೇ General Education, Medical Education, Technical Education or Any Other Higher Institution including Re-search depts. ನಲ್ಲಿ  ಭೊಧಿಸುವ ಭೊಧಕರ ಹುದ್ದೆಗಳು ಹಲವಾರು, ಆದರೆ  ಭೋಧಿಸುವವರ ಒಟ್ಟು ಸಮೂಹಕ್ಕೆ ಬಳಸಲಾಗುವ ಪದ, ಅದು ಶಿಕ್ಷಕ ಎಂಬುದೇ ಆಗಿರುತ್ತದೆ.

    ಆದರೆ ಈಗ ಬೇರೆ ಬೇರೆ ಹೆಸರಿನ ತರಗತಿಗಳನ್ನು ಆರಂಬಿಸಿ  Certificate ಸಹಿತ/ರಹಿತ ಅನೇಕ ಮಂದಿ ಶಿಕ್ಷಕರಾಗಿ ದುಡಿಯುತ್ತಾರೆ.

 Regular teacher

Part-time teacher

Tuition teacher

Tutorial Teacher

ಪೋಷಕರಿಬ್ಬರೂ ದುಡಿಯುವವರ ಮಕ್ಕಳಿಗೋಸ್ಕರವೇ ಹುಟ್ಟು ಹಾಕಲಾದ ಸಂಸ್ಥೆಗಳಲ್ಲಿ ದುಡಿಯುವ Teachers👇👇

Pre-kinder Garten/Kinder garten teacher

Pre Lkg/Ukg teacher

ಮೇಲೆ ಹೇಳಿದ್ದೆಲ್ಲಾ ಕೊರೋನಾ ಪೂರ್ವ ಶಿಕ್ಷಕರು

    👇👇👇👇👇👇👇

ಕೊರೋನಾ ನಂತರದ ಶಿಕ್ಷಕರು

On line teachers

U–Tube teacher

  T V Teachers(  ಚಂದನ/ Byjus world teachers. ಇದು ಕೆಲವೇ ಉದಾಹರಣೆಗಳು👍

   ಮನೆಯಲ್ಲಿ ಮಕ್ಕಳಿಗೆ Online Class ನಡೆಯುವಾಗ Mobile, Computer ಹಿಂದೆ ಮಕ್ಕಳ ಪೋಷಕರು, ಅಜ್ಜ/ ಅಜ್ಜಿ, ಅಕ್ಕ ಅಣ್ಣ, ಹಾಗು ಮನೆಮಂದಿಯ ಇತರರು ಪರೋಕ್ಷವಾಗಿ ಶಿಕ್ಷಕರ ಪಾತ್ರವನ್ನು ಮನೋಜ್ನವಾಗಿ ನಿರ್ವಹಿಸುವ ಶಿಕ್ಷಕರಿಗೆ ನನ್ದೊಂದು ಸಲಾಂ🙏🙏🙏🙏

    ಏನೇ ಆಗಲಿ ಪ್ರಾಥಮಿಕ/ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನಗೆ ಆ ಕಾಲದಲ್ಲಿ  ಅಕ್ಷರಾಭ್ಯಾಸದಿಂದ ಮೊದಲ್ಗೊಂಡು ನೀತಿ ಪಾಠಗಳನ್ನು ಕಲಿಸಿದ, ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂದು ಮೂಲಭೂತ ಶಿಕ್ಷಣ ಭೊಧಿಸಿದವರೇ ನನ್ನ ಶ್ರೇಷ್ಟ ಶಿಕ್ಷಕರು ಎಂದು ನಾನು ಬಾವಿಸುತ್ತಾ  ಈ ವರ್ಷದ ಶಿಕ್ಷಕರ ದಿನಾಚರಣೆಗೆ ಶುಭ ಹಾರೈಸುತ್ತೇನೆ🙏🙏🙏

ಲೇಖನದಲ್ಲಿ ನನ್ನ ಅನಿಸಿಕೆಯಂತೆ ನೇರವಾಗಿ ಬರೆದಿದ್ದೇನೆ. 

ಶಿಕ್ಷಕರಿಗೆ ಹಾಗೂ ಶಿಕ್ಷಣ ಸಮುದಾಯದವರಿಗೆ  ಶಿಕ್ಷಕರ ದಿನಾಚರಣೆಯ ಪ್ರಯುಕ್ತ  ಗೌರವ ಪೂರ್ವಕ ವಂದನೆಗಳನ್ನು ಸಲ್ಲಿಸಬಯಸುತ್ತೇನೆ🙏🙏🙏

B.Sc,  D.ed  B.ed  ವೃತ್ತಿ ಶಿಕ್ಷಣ ಪೂರೈಸಿ  ಯಾವುದೇ ಉದ್ಯೋಗವನ್ನು ಅರಸದೆ  ಮನೆ ಗೃಹಿಣಿ ಜವಾಬ್ದಾರಿಯೊಂದಿಗೆ ತಮ್ಮದೇ

ಮಕ್ಕಳಿಗೆ ( ನಮ್ಮ ಮೊಮ್ಮಕ್ಕಳಿಗೆ) ಮನೆ ಪಾಠ ಮಾಡುವ  ನನ್ನ ಮಗಳಿಗೆ ಈ ಲೇಖನ ಅರ್ಪಣೆ🙏🙏🙏

✍️ ಸೀತಾರಾಮ ಭಂಡಾರಿ M. P ,ಕೋಣಾಜೆ

Leave a Reply

Your email address will not be published. Required fields are marked *