ನಾಟಿ ಕೋಳಿ ಚಿಕನ್ ಫ್ರೈ
ಬೇಕಾಗುವ ಪದಾರ್ಥಗಳು
- ಎಣ್ಣೆ- ಸ್ವಲ್ಪ
- ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ರಿಂದ ಒಂದೂವರೆ ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1-2
- ಕರಿಬೇವು-ಸ್ವಲ್ಪ
- ಟೊಮೆಟೋ- 2 (ಸಣ್ಣಗೆ ಹೆಚ್ಚಿದ್ದು)
- ಹಸಿಮೆಣಸಿನ ಕಾಯಿ- 1-2
- ಚಿಕನ್- 1 ಕೆಜಿ
- ಉಪ್ಪು- ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ- ಸ್ವಲ್ಪ
- ನೀರು- 1 ಲೋಟ
- ಖಾರದಪುಡಿ- 1-2 ಚಮಚ
- ದನಿಯಾ ಪುಡಿ- 1 ಚಮಚ
- ಅರ್ಧ ಚಮಚ- ಕಾಳು ಮೆಣಸಿನ ಪುಡಿ
- ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು
ಮಾಡುವ ವಿಧಾನ…
- ಒಲೆಯ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ಈರುಳ್ಳಿ, ಟೊಮೆಟೋ, ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಚೆನ್ನಾಗಿ ತೊಳೆದ ಚಿಕನ್, ಉಪ್ಪು, ಅರಿಶಿಣದ ಪುಡಿ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ಕೂಗು ಕೂಗಿಸಿಕೊಳ್ಳಬೇಕು.
- ನಂತರ ದನಿಯಾ ಪುಡಿ, ಖಾರದ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಮತ್ತೊಂದು ಕೂಗು ಕೂಗಿಸಿಕೊಳ್ಳಬೇಕು. ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಕರವಾದ ನಾಟಿ ಕೋಳಿ ಚಿಕನ್ ಫ್ರೈ ಸವಿಯಲು ಸಿದ್ಧ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ:ಕೆ ಪಿ