
Naval NCC ಯ OSD (Overseas deployment) ತರಬೇತಿಗೆ ಭಾರತವನ್ನು ಪ್ರತಿನಿಧಿಸಲು ಕಾರ್ಕಳ ಕಾಬೆಟ್ಟುವಿನ ಶ್ರೀ ಯೊಗೀಶ್ ಭಂಡಾರಿ ಹಾಗೂ ಶ್ರೀಮತಿ ಸುಜಾತರವರ ಮಗನಾದ ಗೌತಮ್ ಕಾರ್ಕಳ ಆಯ್ಕೆಯಾಗಿರುತ್ತಾರೆ.
ಇವರು ಕಾರ್ಕಳದ ಶ್ರೀಮದ್ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಯಾಗಿರುತ್ತಾರೆ. ಈ ಸಲದ OSD ತರಬೇತಿಯು ಇಂಡೊನೇಷ್ಯಾ, ಮಲೇಷ್ಯಾ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ.
ಗೌತಮ್ ಕಾರ್ಕಳರವರ ಸಾಧನೆಗೆ ಭಂಡಾರಿ ವಾರ್ತೆ ಅಭಿನಂದನೆ ಸಲ್ಲಿಸುತ್ತದೆ ಜೊತೆಗೆ ವಿದೇಶ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತದೆ.
—ಭಂಡಾರಿವಾರ್ತೆ