
ನಿಶಬ್ದದ ರಾತ್ರಿಯಲಿ
ನಿನ್ನದೇ ಸದ್ದು
ಕಣ್ತೆರದು ನೋಡಿದೆ
ಸುತ್ತಲೂ ಎದ್ದು|
ನಿನ್ನ ಕಣ್ಣ ಕಾಂತಿಯ ಹೊಳಪು
ನಾ ಕಂಡೆ ಹುಣ್ಣಿಮೆಯ ಬೆಳಕಲಿ
ನಿನ್ನ ಸ್ಪರ್ಶದ ಆ ಸೊಗಸು
ನಾ ಅನುಭವಿಸುವೆ ಈ ಚಳಿಯಲಿ|
ಕಳೆದುಕೊಳ್ಳುವ ಇಚ್ಛೆ ಇಲ್ಲ
ಪಡೆದುಕೊಳ್ಳುವ ಪರಿ ಗೊತ್ತಿಲ್ಲ
ಮತ್ತೊಮ್ಮೆ ಕವಿಯಾಗಲೇ?
ಪದ ಪದ ಜೋಡಿಸುತಾ ನಿನ್ನ ಕುರಿತು|
ಬಾಳಿಗೆ ಹೂವು ನೀನೆಂದು
ಬಿರಿದು ನಗುತ್ತಿದ್ದೆ ಎಂದೆಂದೂ
ದೂರಾಗಿ ಹೋದೆ ನೀನಿಂದು
ನಿನ್ನ ಮರೆತಂತೆ ನಟಿಸಿರುವೆ ನಾನಿಂದು|

Super lines……ಇನಿಯನ ಸವಿನೆನಪಿನಲ್ಲಿ…!!!