

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಮಹಾವೀರ ರಸ್ತೆಯಲ್ಲಿ ಶ್ರೀ ಸುಧೀರ್ ಭಂಡಾರಿಯವರು ತಮ್ಮ ನೂತನ “ಯೂ ಲೈಕ್ ಮೆನ್ಸ್ ಪಾರ್ಲರ್” ನ್ನು ಮೇ 12 ರ ಶನಿವಾರ ಶ್ರೀ ವೈಭವ ಲಕ್ಷ್ಮೀ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ಉದ್ಘಾಟಿಸಿದರು.
ಇದು ಇವರ ಎರಡನೇ ಶಾಖೆಯಾಗಿದ್ದು ಇದು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ.ಇವರ ಮೊದಲ ಸಲೂನ್ ಕಳಸದ ತ್ರಿಶೂಲ್ ಮೆನ್ಸ್ ಪಾರ್ಲರ್.ಮೂಡಿಗೆರೆ ತಾಲೂಕಿನ ಶ್ರೀ ರಾಘವ ಭಂಡಾರಿ ಮತ್ತು ಶ್ರೀಮತಿ ಸರೋಜಿನಿ ರಾಘವ ಭಂಡಾರಿ ದಂಪತಿಯ ಪುತ್ರರಾದ ಶ್ರೀ ಸುಧೀರ್ ಭಂಡಾರಿಯವರ ಈ ಪ್ರಯತ್ನಕ್ಕೆ ಕುಟುಂಬಸ್ಥರು,ಆತ್ಮೀಯರು,ಸ್ನೇಹಿತರು ಶುಭ ಕೋರಿ ಪ್ರೋತ್ಸಾಹಿಸಿದರು.
ಶ್ರೀ ಸುಧೀರ್ ಭಂಡಾರಿಯವರ ಎರಡನೇ ಸಲೂನ್ ಯೂ ಲೈಕ್ A C ಡಿಲಕ್ಸ್ ಮೆನ್ಸ್ ಪಾರ್ಲರ್ ಯಶಸ್ವಿಯಾಗಿ ಮುಂದುವರೆಯಲಿ,ನಿಮ್ಮ ಕೆಲಸ ಕಾರ್ಯಗಳಲ್ಲಿ ಶ್ರೀ ದೇವರು ನಿಮಗೆ ಬೆಂಬಲವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.

ಭಂಡಾರಿವಾರ್ತೆ
ಸುಧೀರ್ ಭಂಡಾರಿ ಆಲ್ ದಿ ಬೆಸ್ಟ್