ದಕ್ಷಿಣ ಕನ್ನಡಿಗರು ವೃತ್ತಿಪರರು, ಕಷ್ಟಜೀವಿಗಳು ಎಂಬುದು ಎಷ್ಟು ನಿಜವೋ ಅವರು ಭೋಜನಪ್ರಿಯರು ಎಂಬುದೂ ಅಷ್ಟೇ ನಿಜ. ಅವರು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ತಮ್ಮ ದಕ್ಷಿಣ ಕನ್ನಡ ಶೈಲಿಯ ಭೋಜನವನ್ನು ತುಂಬಾ ಇಷ್ಟ ಪಡುತ್ತಾರೆ.
ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ಲಕ್ಷಾಂತರ ದಕ್ಷಿಣ ಕನ್ನಡಿಗರು ನೆಲೆಸಿದ್ದಾರೆ. ಅವರುಗಳು ಊಟದ ವಿಷಯಕ್ಕೆ ಬಂದರೆ ದಕ್ಷಿಣ ಕನ್ನಡ ಶೈಲಿಯ ಭೋಜನವನ್ನು ಅರಸುವುದು ಸಾಮಾನ್ಯ. ದಕ್ಷಿಣ ಕನ್ನಡ ಶೈಲಿಯ ಭೋಜನ ಉಣಬಡಿಸುವ ನೂರಾರು ಹೋಟೆಲ್ ಗಳು ಬೆಂಗಳೂರಿನಲ್ಲಿ ಇದ್ದರೂ ಮನೆ ಊಟದ ರುಚಿ ಅವರು ಕೊಡಲು ಸಾಧ್ಯವಿಲ್ಲ.
ಇದನ್ನೆಲ್ಲ ಮನಗಂಡು ನಮ್ಮ ಭಂಡಾರಿ ಬಂಧುವೊಬ್ಬರು ದಕ್ಷಿಣ ಕನ್ನಡದ ಜನಪ್ರಿಯ ಆಹಾರ ಉತ್ಪನ್ನಗಳು, ತಿಂಡಿ ತಿನಿಸುಗಳು, ನೈಸರ್ಗಿಕ ಉತ್ಪನ್ನಗಳು, ದಕ್ಷಿಣ ಕನ್ನಡದ ಟ್ರೇಡ್ ಮಾರ್ಕ್ ಎನಿಸಿರುವ ನೂರಾರು ಉತ್ಪನ್ನಗಳು ಒಂದೇ ಸೂರಿನಡಿ ದೊರಕುವ ಮಳಿಗೆಯೊಂದನ್ನು ಬೆಂಗಳೂರಿನ HBR ಲೇ ಔಟ್ ನಲ್ಲಿ ತೆರೆದಿದ್ದಾರೆ. ಅದುವೇ ನ್ಯೂ ಮಂಗಳೂರು ಸ್ಟೋರ್ಸ್.
ಬಂಟ್ವಾಳ ತಾಲೂಕಿನ ಕಾಯರ್ಗೋಳಿ ಮುಡಿಪು ನಿವಾಸಿಗಳಾದ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಬಾಬು ಭಂಡಾರಿ ದಂಪತಿಗಳ ಪುತ್ರ ಶ್ರೀ ರಾಜೇಶ್ ಕುಮಾರ್ ಭಂಡಾರಿ ತಮ್ಮ ಪತ್ನಿ ಶ್ರೀಮತಿ ದಿವ್ಯಾ ರಾಜೇಶ್ ರವರ ಸಹಕಾರದೊಂದಿಗೆ ಬೆಂಗಳೂರಿನ HBR ಲೇ ಔಟ್ ನ BDA ಕಾಂಪ್ಲೆಕ್ಸ್ ಬಳಿ ಮಾರ್ಚ್ 26 ರ ಸೋಮವಾರ ಶುಭಾರಂಭ ಮಾಡಿದ ಸ್ವದೇಶಿ ಭಂಡಾರವೇ ಈ “ನ್ಯೂ ಮಂಗಳೂರು ಸ್ಟೋರ್ಸ್.”
ಈ ಮಳಿಗೆಯೊಳಗೆ ಕಾಲಿಟ್ಟರೆ ನಿಮಗೆ ಊರಿನ ದಿನಸಿ ಅಂಗಡಿಗಳಲ್ಲಿ ದೊರಕುವ, ದಕ್ಷಿಣ ಕನ್ನಡದ ಭೋಜನವನ್ನು ಸಿದ್ಧಪಡಿಸಲು ಬೇಕಾಗುವ ಪ್ರತಿಯೊಂದು ಸಾಮಗ್ರಿಗಳು ಇಲ್ಲಿ ದೊರಕುತ್ತವೆ. ಇಲ್ಲಿ ನಿಮಗೆ ಕುಚುಲಕ್ಕಿ, ಕೆಂಪು ಅಕ್ಕಿ, ಸಾವಯವ ಅಕ್ಕಿ, ರಾಜಮುಡಿ ಅಕ್ಕಿ, ಆಲೂರು ಅಕ್ಕಿ.
ಗ್ರಾಮರಾಜ್ಯ ಉತ್ಪನ್ನಗಳಾದ ಗೋಧಿ ಹಿಟ್ಟು, ಗೋಧಿ ಕಡಿ, ಅಕ್ಕಿ ಹಿಟ್ಟು, ರಾಗಿ ಹಿಟ್ಟು , ಮಜ್ಜಿಗೆ ಮೆಣಸು, ಅಪ್ಪೆ ಮಿಡಿ ಉಪ್ಪಿನಕಾಯಿಗಳು, ಕಷಾಯ ಪುಡಿ, ಜೋನಿ ಬೆಲ್ಲ, ನವರತ್ನ ಮಾಲೈ.
ಹಲಸಿನ ಹಪ್ಪಳ, ಗೆಣಸಿನ ಹಪ್ಪಳ, ಧರ್ಮಸ್ಥಳದ ಅನುಗ್ರಹ ತೆಂಗಿನ ಎಣ್ಣೆ, ಮಂಗಳೂರು ತೆಂಗಿನ ಎಣ್ಣೆ, ತೆಂಗಿನಕಾಯಿ, ಗೇರು ಬೀಜ, ಬಾಳೆ ಹಣ್ಣು, ಕೋಕಂ(ಪುನರ್ಪುಳಿ) ಸಿಪ್ಪೆ,ಜ್ಯೂಸ್, ನೈಸರ್ಗಿಕವಾಗಿ ತಯಾರಿಸಿದ ಸೋಪುಗಳು, ಶಾಂಪೂಗಳು, ಅಗರಬತ್ತಿಗಳು.
ಇಡ್ಲಿ ಪಾತ್ರೆಗಳು, ಕಾಯಿ ತುರಿಯುವ ಮಣೆಗಳು.
ಮಂಗಳೂರಿನ ಪ್ರಖ್ಯಾತ ಅರುಣ ಮತ್ತು ನಾಯರ್ಸ್ ಬ್ರಾಂಡಿನ ಮಸಾಲೆ ಪುಡಿ, ಸಾಂಬಾರು ಪುಡಿ, ಮೆಣಸಿನ ಪುಡಿ.
ಪತಂಜಲಿ ಹಾಗೂ ಶ್ರೀ ರಾಮಚಂದ್ರಾಪುರ ಮಠದ ಉತ್ಪನ್ನಗಳು, ದೇಸಿ ತಳಿ ಹಸುವಿನ ತುಪ್ಪ, ಜೇನು ತುಪ್ಪ, ಗೋಡಂಬಿ, ಕಾಳು ಮೆಣಸು, ಕಾಫಿ ಪುಡಿ, ಟೀ ಪುಡಿ, ಸಿರಿ ಧಾನ್ಯಗಳು…. ಒಂದೇ ಎರಡೇ ನೂರಾರು ಉತ್ಪನ್ನಗಳು.
ಹೊಟ್ಟೆ ಪಾಡಿಗಾಗಿ ಹುಟ್ಟಿದ ಊರನ್ನು ತೊರೆದು ಬಂದಿರಬಹುದು ಆದರೆ ಹೊಟ್ಟೆಗೆ ತಿನ್ನುವ ಆಹಾರವನ್ನು ಬದಲಿಸಿಕೊಳ್ಳುವ ಅನಿವಾರ್ಯತೆ ಇನ್ನಿಲ್ಲ. ಬೆಂಗಳೂರಿನಲ್ಲಿ ನೆಲೆಸಿರುವ ಉಡುಪಿ, ಮಂಗಳೂರು, ಕುಂದಾಪುರ, ಹೊನ್ನಾವರ, ಭಟ್ಕಳ , ಬಂಟ್ವಾಳ ಮುಂತಾದ ಕರಾವಳಿಗರಿಗೆ ಮಾತ್ರವಲ್ಲದೆ ಕೇರಳಿಗರೂ ನಿರಂತರ ಬೇಟಿ ಕೊಡಬಹುದಾದ ಆಹಾರೋತ್ಪನ್ನಗಳ ಮಳಿಗೆ ಇದೆಂಬ ಹೆಗ್ಗಳಿಕೆ ಈ ಸ್ಟೋರ್ ನದು ಎಂದರೆ ಅತಿಶಯೋಕ್ತಿ ಏನಲ್ಲ. ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡಿಗರು ಇದರ ಸದುಪಯೋಗಪಡಿಸಿಕೊಳ್ಳಬಹುದು.
ಭಂಡಾರಿ ಬಂಧುಗಳೊಬ್ಬರು ಮಾಡಿರುವ ಈ ಹೊಸ ಸಾಹಸಕ್ಕೆ ನಾವೆಲ್ಲರೂ ಸಹಾಯ ಸಹಕಾರ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನೀವು ಬೇಟಿಕೊಡುವುದರ ಜೊತೆಜೊತೆಗೆ ನಿಮ್ಮ ಬಂಧುಗಳಿಗೆ, ಪರಿಚಯಸ್ಥರಿಗೆ, ಸ್ನೇಹಿ
ಕಾಯರ್ಗೋಳಿ ಮುಡಿಪು ಶ್ರೀ ರಾಜೇಶ್ ಕುಮಾರ್ ದಂಪತಿಗಳ ಈ ಮಹತ್ವಾಕಾಂಕ್ಷಿ ಯೋಜನೆಗೆ ಭಗವಂತನು ಅಭೂತಪೂರ್ವ ಯಶಸ್ಸು ನೀಡಿ ಅವರ ಕೈ ಹಿಡಿದು ನಡೆಸಲಿ, ಕರಾವಳಿ ಕನ್ನಡಿಗರ, ಕೇರಳಿಗರ ಮತ್ತು ಬೆಂಗಳೂರಿಗರ ಸಂಪೂರ್ಣ ಸಹಕಾರ ನಿಮಗೆ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.