January 18, 2025
kid and dad

 

 

 

 

 

ನಿನ್ನ ಬರುವಿಕೆಗಾಗಿ..

 

ಮಾತು ಮೌನವಾಗಿ ಮನಸ್ಸು ಹೇಳುತಿದೆ
ಇದು ನಿನ್ನ ಬರುವಿಕೆಗಾಗಿ ಕಾಯುವ ಕವಿತೆ

ಮುಸ್ಸಂಜೆಯ ಹೊತ್ತಲ್ಲಿ
ಒಬ್ಬಳೆ ಕುಳಿತಿರುವೆ
ನಿನ್ನ ನೆನಪಲ್ಲಿ
ಮಿಂದು ನಡುಗುತಿರುವೆ

ಚಳಿ ಜ್ವರವಿಲ್ಲದ ರೋಗ
ಹೃದಯದಲ್ಲಿ ಅಳಿಸಲಾಗದ ರಾಗ
ನಿನಗೆ ಕೇಳಿಸದು
ನನ್ನೊಳಗಿನ ಅಳಲು ಕೊನೆಯಾಗಲಾರದು
ಎಷ್ಟು ಹೇಳಿದರೂ ಮುಗಿಯದು
ಆ ದಿನ ಮುಂಜಾನೆ ಸಮಯ
ನನಗೆ ಗೊತ್ತಿಲ್ಲ ನೀ ಬಿಟ್ಟು

ಹೋಗಿರುವೆಯೆಂದೂ ಆದರೂ
ಆಕಸ್ಮಿಕವಾಗಿ ನಿನ್ನ ಕಂಡಾಗ
ಅದೇ ಪ್ರೀತಿ ನಿನ್ನ ಕಣ್ಣಲ್ಲಿ
ಮತ್ತೆ ಮತ್ತೆ ನೋಡುವ ಆಸೆ
ನಿನ್ನ ಮಾತು, ನಗು
ನಿನ್ನೊಂದಿಗೆ ಆಡುತ್ತಿದ್ದ ಆಟ
ಜೊತೆಗೆ ಒಂದಿಷ್ಟು ತುಂಟಾಟ
ತುಂಬಾ ಕಾಡುತಿದೆ ನನ್ನಾ

ಪ್ರಶ್ನೆಯಾಗಿ ಉಳಿದಿರುವೆ ನೀನು
ಉತ್ತರಕ್ಕಾಗಿ ಕಾದಿರುವ ನಾನು
ಹೇಳು ಮತ್ತೆ ಯಾವಾಗ ಬರುವೆ
ಹೇಳದೇ ಕೇಳದೆ ಹೊರಟು ಹೋಗಿರುವೆ
ನನ್ನದು ತಪ್ಪು ಭಾವನೆಯಾ

ನೀನು ಬರುವೆ ಎಂಬ ಹುಚ್ಚು ನಂಬಿಕೆನಾ
ಪೆಚ್ಚಾಗಿ ಕುಳಿತ ನಾನು ಗೀಚಿದೆ ಮನಸ್ಸಿಗೆ ತೋಚಿದ್ದನ್ನಾ
ಹೇಳು ಅಪ್ಪ ನೀ ಯಾವಾಗ ಬರುತೀಯಾ…
ನಿನಗಾಗಿ ಕಾಯುವ ನಿನ್ನ ಮುದ್ದು ಮಗಳು ನಾ …


✍  ಗ್ರೀಷ್ಮಾ ಭಂಡಾರಿ ಕಲ್ಲಡ್ಕ

Leave a Reply

Your email address will not be published. Required fields are marked *