January 18, 2025
0J7A2374

ಬೆಂಗಳೂರಿನ ಶೇಷಾದ್ರಿಪುರಂನ ಹೋಟೆಲ್ ಲಲಿತ್ ಅಶೋಕ್ ನಲ್ಲಿ ಜುಲೈ 31 ರಂದು ನಡೆದ ಎಸ್ ವಿ ಫಿದಾ ಬೆಸ್ಟ್ ಮಿಸ್ಟರ್ ಸೌತ್ ಇಂಡಿಯಾ ಇಂಟರ್ನ್ಯಾಷನಲ್ -2022 ಬ್ಯೂಟಿ ಪೆಜೆಂಟ್ ಸ್ಪರ್ಧೆಯಲ್ಲಿ ಮಂಗಳೂರಿನ ಮರೋಳಿಯ ನಿರ್ಮಲ್ ಕುಮಾರ್ ಭಂಡಾರಿ ಪ್ರಥಮ ಸ್ಥಾನ ಪಡೆದು ಗೆಲುವಿನ ನಗೆ ಚೆಲ್ಲಿದ್ದಾರೆ .


.
ಈ ಸ್ಪರ್ಧೆಯನ್ನು ಸುಧಾ ವೆಂಚರ್ಸ್ ಆಯೋಜಿಸಿದ್ದರೆ, ಮಾಸ್ಟರ್ ಆನಂದ್ , ನಿರಂಜನ್ ದೇಶಪಾಂಡೆ ಅತಿಥಿಗಳಾಗಿದ್ದರು . ಈ ಸ್ಪರ್ಧೆಯಲ್ಲಿ ವಿಶೇಷ ಅತಿಥಿಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಉಪಸ್ಥಿತರಿದ್ದು ವಿಜೇತರಿಗೆ ಶುಭ ಹಾರೈಸಿದರು . 


ನಿರ್ಮಲ್ ಕುಮಾರ್ ಭಂಡಾರಿ ಈ ಹಿಂದೆ ಇದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸ್ಟರ್ ಮಂಗಳೂರು -2021 ,ಮಿಸ್ಟರ್ ಗ್ಲಾಮರ್ ಕಿಂಗ್ 2022 ,ಮಿಸ್ಟರ್ ಕರ್ನಾಟಕ 2022 ಇದೀಗ ಮಿಸ್ಟರ್ ಸೌತ್ ಇಂಡಿಯಾ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಭಂಡಾರಿ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ .

ಬೆಳ್ತಂಗಡಿಯ ಸನತ್ ಕುಮಾರ್ ಬಿ ಮತ್ತು ಉಡುಪಿಯ ವಿಜಯಲಕ್ಷ್ಮಿ ಎಸ್ ಕುಮಾರ್ ದಂಪತಿಯ ಪುತ್ರನಾಗಿರುವ ನಿರ್ಮಲ್ ಕುಮಾರ್ ಭಂಡಾರಿ ತಮ್ಮ ಪದವಿ ಶಿಕ್ಷಣದ ಬಳಿಕ ಮಂಗಳೂರಿನ ಮಿಲಾಗ್ರಿಸ್ ನಲ್ಲಿರುವ ಶಾಕ್ಜ್ ಫಿಟ್ನೆಸ್ ನಲ್ಲಿ ಜಿಮ್ ತರಭೇತುದಾರರಾಗಿದ್ದಾರೆ.

ನಿರ್ಮಲ್ ಕುಮಾರ್ ಭಂಡಾರಿ ತನ್ನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ , ಸಮಾಜಕ್ಕೆ,ಕುಟುಂಬಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಾಶಯವನ್ನು ಕೋರಿ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

Leave a Reply

Your email address will not be published. Required fields are marked *