ಉಡುಪಿಯ ವಾದಿರಾಜ ರಸ್ತೆಯಲ್ಲಿರುವ ಶ್ರೀ ವಿದ್ಯೋದಯ ವಿದ್ಯಾಲಯದಲ್ಲಿ UKG ವ್ಯಾಸಂಗ ಮಾಡುತ್ತಿರುವ ಮಾಸ್ಟರ್ ನಿಶ್ಚಿತ್ .ಎಸ್. ಭಂಡಾರಿ ತನ್ನ ಶಾಲೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ನಿಶ್ಚಿತ್ ಉಡುಪಿಯ ಕೋಡಂಕೂರಿನ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ಸಂತೋಷ್ ಭಂಡಾರಿಯವರ ಸುಪುತ್ರ.
ಎಳೆವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತಿ ವಹಿಸಿ ನಿಶ್ಚಿತ್ ಮಾಡುತ್ತಿರುವ ಸಾಧನೆ ಅಪ್ರತಿಮ. ಕರಾಟೆಯಲ್ಲಿಯೂ ಉತ್ತಮ ಸಾಧನೆ ಮಾಡುತ್ತಿರುವ ಈ ಭಂಡಾರಿ ಪ್ರತಿಭೆ ಚಿತ್ರಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ. ಭಗವಂತನು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭಹಾರೈಸುತ್ತದೆ.
-ಭಂಡಾರಿವಾರ್ತೆ.