
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ ಸಿ ರೋಡು ಅಮ್ಟಾಡಿ ದಿವಂಗತ ಸುಬ್ಬು ಭಂಡಾರಿಯವರ ಮೊಮ್ಮಗಳು ಜನಾರ್ದನ ಭಂಡಾರಿ ಕೆಸರುಗದ್ದೆ ಮತ್ತು ಶ್ರೀಮತಿ ಕವಿತಾ ಭಂಡಾರಿ ಎಲ್ಲೂರು ರವರ ಪುತ್ರಿ ನಿಶಿತಾ ಜೆ ಭಂಡಾರಿ ಇವರು 2021-22 ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 580 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಿಶಿತಾ ಜೆ ಭಂಡಾರಿ ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ. ನಿಶಿತಾ ಜೆ ಭಂಡಾರಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.