January 18, 2025
IMG-20180206-WA0048

ಕರ್ನಾಟಕ  ರಾಜ್ಯ ವಿಧಾನಸಭೆಗೆ ಮೇ ತಿಂಗಳ 12 ರಂದು ನಡೆಯಲಿರುವ ಚುನಾವಣೆಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ  ಬಿತಿ೯ ಗಂಗಾಧರ ಭಂಡಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ದಿನಾಂಕ 20/04/2018ರ  ಶುಕ್ರವಾರದಂದು ಮಧ್ಯಾಹ್ನ ಜೆಡಿಎಸ್ ಪಕ್ಷದ ಉಡುಪಿ ಜಿಲ್ಲಾ ಅಧ್ಯಕ್ಷ  ಯೋಗಿಶ್ ವಿ. ಶೆಟ್ಟಿ  ಜೆಡಿಎಸ್ ಜಿಲ್ಲಾ ವಕ್ತಾರ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಪ್ರದೀಪ್  ಜಿ. ಕಾರ್ಯಾಧ್ಯಕ್ಷ  ವಾಸುದೇವ ರಾವ್ ಉಡುಪಿ ಬ್ಲಾಕ್ ಅಧ್ಯಕ್ಷ  ಅಬ್ದುಲ್ ಖಾದರ್ ಕುಂಜಾಲು ಮತ್ತು ಶಾಲಿ ಶಾಲಿನಿ ಶೆಟ್ಟಿ  ಕೆಂಚನೂರು ನೇತೃತ್ವದಲ್ಲಿ ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸಮ್ಮುಖ ದಲ್ಲಿ ಉಡುಪಿ ಚುನಾವಣಾಧಿಕಾರಿ ಎಚ್  ಕೆಂಪೇಗೌಡ  ರವರಿಗೆ  ನಾಮಪತ್ರವನ್ನು ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ  ಬಿತಿ೯ ಗಂಗಾಧರ ಭಂಡಾರಿಯವರು ನಾನು ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ  ಮಾಡಿದ್ದೇನೆ.

ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ,ಕ್ಷೇತ್ರದ ಅಭಿವೃದ್ಧಿಗೆ  ಸ್ಪಂದಿಸುತ್ತೇನೆ. ಈ  ಹಿಂದೆ  ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಉಡುಪಿ ಜಿಲ್ಲೆ  ಘೋಷಣೆಯಾಗಿದ್ದರೂ  ಸಮಗ್ರವಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ .ನನ್ನನ್ನು ಶಾಸಕನಾಗಿ ಆರಿಸಿದ್ದಲ್ಲಿ  ಉಡುಪಿಯನ್ನು  ರಾಜ್ಯ ದಲ್ಲಿ ಮಾದರಿ ಜಿಲ್ಲೆಯಾಗಿ  ಮಾಡುತ್ತೇನೆ  ಎಂದು ಹೇಳಿದರು .

 

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *