
ಕರ್ನಾಟಕ ಸರಕಾರ ವಿಧಾನಸಭೆಗೆ ಮೇ 12 ರಂದು ಚುನಾವಣೆ ನಡೆಯಲಿದ್ದು ಕಾಕ೯ಳ ಕ್ಷೇತ್ರ ದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಎಚ್ . ಗೋಪಾಲ ಭಂಡಾರಿ ದಿನಾಂಕ 20/4/2018 ಶುಕ್ರವಾರದಂದು ಕಾರ್ಕಳ ಕ್ಷೇತ್ರದ ಚುನಾವಣಾಧಿಕಾರಿ ಕುಸುಮಾ ಇವರಿಗೆ ತಮ್ಮ ನಾಮಪತ್ರವನ್ನು ಕಾಂಗ್ರೆಸ್ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಪ್ರಧಾನ ಕಾರ್ಯದರ್ಶಿ ಶೇಖರ ಮಡಿವಾಳ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸುಧಾಕರ್ ಕೋಟ್ಯಾನ್ ನೀರೆ ಕೃಷ್ಣ ಶೆಟ್ಟಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ತಹಸೀಲ್ದಾರ್ ಮಹಮ್ಮದ್ ಇಸಾಕ್ ಉಪಸ್ಥಿತಿರಿದ್ದರು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಗೋಪಾಲ ಭಂಡಾರಿಯವರು ಕಾರ್ಕಳ ಕ್ಷೇತ್ರದ ಜನತೆ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿ ಜನರ ಸೇವೆ ಮಾಡಿದ್ದೇನೆ . ಮತ್ತೆ ಎರಡು ಬಾರಿ ಬಹಳ ಪೈಪೋಟಿ ನೀಡಿ ಅಲ್ಪ ಮತಗಳ ಅಂತರದಿಂದ ಸೋಲು ಉಂಟಾಯಿತು ಸೋತರೂ ಕಾರ್ಯಕರ್ತರ ಮತ್ತು ಕಾರ್ಕಳ ಜನತೆಯ ಸೇವೆಗೆ ನಿರಂತರ ಸ್ಪಂದಿಸುತ್ತಿದ್ದೇನೆ.


ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಕಾರ್ಯಕರ್ತರು ಹಾಗೂ ಬೆಂಬಲಿಗರೇ ನನ್ನ ಆಸ್ತಿ ಕಾರ್ಕಳದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಬಡ ಕುಟುಂಬದಿಂದ ಬಂದ ನನಗೆ ಪಕ್ಷ ಉತ್ತಮ ಅವಕಾಶಗಳನ್ನು ನೀಡಿದೆ ಎಂದು ಹೇಳಿದರು .
— ಭಂಡಾರಿವಾರ್ತೆ.