September 20, 2024

ನುಗ್ಗೆಕಾಯಿ ಸೂಪ್

ಬೇಕಾಗುವ ಪದಾರ್ಥಗಳು

  • ನುಗ್ಗೆಕಾಯಿ- 2-3
  • ಟೊಮೆಟೋ- 1
  • ಶುಂಠಿ- ಸ್ವಲ್ಪ
  • ಬೆಳ್ಳುಳ್ಳಿ-ಸ್ವಲ್ಪ
  • ಈರುಳ್ಳಿ-1
  • ಉಪ್ಪು-ರುಚಿಗೆ ತಕ್ಕಷ್ಟು
  • ಅರಿಶಿಣದ ಪುಡಿ- ಅರ್ಧ ಚಮಚ
  • ಜೀರಿಗೆ ಪುಡಿ- 1 ಚಮಚ
  • ಕಾಳುಮೆಣಸಿನ ಪುಡಿ- 1 ಚಮಚ
  • ಕೊತ್ತಂಬರಿ ಸೊಪ್ಪು-ಸಣ್ಣಗೆ ಕತ್ತರಿಸಿದ್ದು ಸ್ವಲ್ಪ

ಮಾಡುವ ವಿಧಾನ…

  • ನಾರು ತೆಗೆದು ಚೆನ್ನಾಗಿ ತೊಳೆದು ಕತ್ತರಿಸಿದ ನುಗ್ಗೆಕಾಯಿಗಳನ್ನು ಕುಕ್ಕರ್’ಗೆ ಹಾಕಿ, ಮೇಲಿನ ಎಲ್ಲಾ ಪದಾರ್ಥಗಳನ್ನೂ ಹಾಕಿ 3 ಕೂಗು ಕುಗಿಸಿಕೊಳ್ಳಿ
  • ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾಯಿ ತಿರುಳನ್ನು ಸಿಪ್ಪೆಯಿಂದ ತೆಗೆಯಿರಿ. ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ರುಚಿಕರವಾದ ನುಗ್ಗೆಕಾಯಿ ಸೂಪ್ ಸವಿಯಲು ಸಿದ್ಧ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಕೆ ಪಿ

Leave a Reply

Your email address will not be published. Required fields are marked *