January 18, 2025
Kacchuru sri nageshwara

ನಾಳೆ ‘ಮೇ’ 8 ಕಚ್ಚೂರಿನಲ್ಲಿ ಭಂಡಾರಿ ಕುಲೋದ್ಧಾರಕ  ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ. ಸ್ವಾಮಿಗೆ ವಿಶೇಷ  ಸೇವೆಗಳು  ಸಲ್ಲುವ, ಅವನ  ರೂಪಗಳನ್ನು  ಕಣ್ತುಂಬಿಕೊಳ್ಳುವ, ಅನವರತ ನಮ್ಮನ್ನು ಕಾಯೋ ಎಂದು ಬೇಡುವ, ಸಮಾಜ ಬಾಂಧವರು ನಾವುಗಳು ಒಂದೆಡೆ ಸೇರುವ , ನೆಂಟರಿಷ್ಟರನ್ನು ಕಂಡಾಗ ಹರ್ಷಿಸುವ, ಭಗವಂತನ ಸೇವೆಗಳಲ್ಲಿ  ಭಾಗವಹಿಸುವ, ಸಲ್ಲಿಸುವ, ಮನರಂಜನಾ  ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ಒಟ್ಟಾರೆ ಹೇಳಬೇಕೆಂದರೆ ಶ್ರೀ ನಾಗೇಶ್ವರ ಸ್ವಾಮಿಯ  ಕೃಪಾ ಕಟಾಕ್ಷಕ್ಕೆ ಪಾತ್ರರಾಗುವ  ದಿನ.🙏

  ಆದರೇನು ಮಾಡುವುದು…??? ಕೊರೋನ  ವ್ಯೆರಾಣು ಈ ಬಾರಿಯೂ ಉತ್ಸವಕ್ಕೆ ತನ್ನ ಅಡ್ಡಗಾಲು ಇಟ್ಟಿದೆ. ಇರಲಿ ಏನಾಗಬೇಕೆಂಬುದು ಇದೆಯೋ ಅದು ಆಗಲೇಬೇಕು. ಅದು ಅವನ ಸಂಕಲ್ಪ.

ಆದರೆ ನಾವು ಮಾತ್ರ ನಮ್ಮಸ್ವಾಮಿ ಯನ್ನುನಾವಿರುವಲ್ಲಿಂದಲೇ ನೆನೆಯೋಣ. ಸದಾ ಅವನ ಅನುಗ್ರಹವನ್ನು ಬೇಡೋಣ.  ಅವನಾಶೀರ್ವಾದದ ಶ್ರೀರಕ್ಷೆಯಲ್ಲಿ ಜೀವಿಸೋಣ.

‘ಮೇ 8’  ರಂದು ನಮ್ಮೆಲ್ಲರ ಮೊಬೈಲ್ ನ ಸ್ಟೇಟಸ್ ನಲ್ಲಿ ನಮ್ಮಸ್ವಾಮಿ (Boss) ರಾರಾಜಿಸಲಿ. ಅವನ online ಆಶೀರ್ವಾದ  ನಮಗೆಲ್ಲರಿಗೂ ಲಭಿಸಲಿ.

ಸರ್ವೇಜನ: ಸುಖಿನೋ ಭವಂತು

 ಶ್ರೀ ನಾಗೇಶ್ವರಾಯ ನಮಃ

 

 

 

 

 

ರಾಜಶೇಖರ್ ಭಂಡಾರಿ, ಬೆಂಗಳೂರು 

 

 

Leave a Reply

Your email address will not be published. Required fields are marked *