ಬೇಕಾಗುವ ಸಾಮಾಗ್ರಿಗಳು:
ಕೋಳಿ – 1/2 ಕೆ.ಜಿ
ಪಾಲಕ್ ಸೊಪ್ಪು – 3ಕಟ್ಟು
ಚಕ್ಕೆ – 1 ಇಂಚು
ಲವಂಗ – 3-4
ಅರಿಸಿನ – 1/4 ಚಮಚ
ಶುಂಟಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ದೊಡ್ಡ ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
ಬೆಳ್ಳುಳ್ಳಿ – 2-3 ಎಸಳು (ಸಣ್ಣಗೆ ಹೆಚ್ಚಿದ್ದು)
ಟೊಮೋಟೊ– 2 (ಸಣ್ಣಗೆ ಹೆಚ್ಚಿದ್ದು)
ಹಸಿ ಮೆಣಸಿನಕಾಯಿ – 2-3 (ಸಣ್ಣಗೆ ಹೆಚ್ಚಿದ್ದು)
ಎಣ್ಣೆ – 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – 1ಚಮಚ
ದನಿಯ ಪುಡಿ – 3 ಚಮಚ
ಜೀರಿಗೆ ಪುಡಿ – 1/2 ಚಮಚ
ಗರಂ ಮಸಾಲೆ ಪುಡಿ – 1/4 ಚಮಚ
ಕಸೂರಿ ಮೇತಿ – 1 ಚಮಚ
ಮಾಡುವ ಬಗೆ:
ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ ಅದಕ್ಕೆ ಬಿಡಿಸಿದ ಸೊಪ್ಪನ್ನು ಹಾಕಿ 3-5 ನಿಮಿಷ ಬೇಯಿಸಿ. ನೀರನ್ನು ಬಸಿದು, ಸೊಪ್ಪನ್ನು ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬ0ದ ಕೂಡಲೆ ಚಕ್ಕೆ, ಲವಂಗ, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕೆಂಪಗಾಗುವವರೆಗು ಬೇಯಿಸಿರಿ. ಇದಕ್ಕೆ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಪ್ರೈ ಮಾಡಿ , ಬಳಿಕ ತೊಳೆದ ಕೋಳಿಯನ್ನು ಸೇರಿಸಿ ಬೇಯಿಸಿರಿ. ಬೆಂದ ಕೋಳಿಗೆ ಹೆಚ್ಚಿದ ಟೊಮೋಟೊ ಹಾಕಿ 1-2 ನಿಮಿಷ ಬಾಡಿಸಿ. ಈಗ ರುಬ್ಬಿರುವ ಪಾಲಕ್ ಸೊಪ್ಪನ್ನು ಹಾಕಿ ಖಾರದ ಪುಡಿ, ಅರಸಿನ ಪುಡಿ, ಗರಮ್ ಮಸಾಲೆ ಪುಡಿ, ಜೀರಿಗೆ ಪುಡಿ, ದನಿಯ ಪುಡಿ, ಉಪ್ಪು, ಕಸೂರಿ ಮೇತಿ ಹಾಕಿ 10 ನಿಮಿಷ ಬೇಯಿಸಿಕೊಂಡರೆ ರುಚಿಯಾದ ಪಾಲಕ್ ಸೊಪ್ಪಿನ ಕೋಳಿಯನ್ನು ಚಪಾತಿ, ದೋಸೆ ಪೂರಿ, ಅನ್ನದೊಂದಿಗೆ ಸವಿಯಬಹುದಾಗಿದೆ.
ಪ್ರತಿಭಾ ಭಂಡಾರಿ, ಹರಿಹರಪುರ