

ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಎಲೆಕೋಸು -2 ಕಪ್
ಈರುಳ್ಳಿ -2
ಹಸಿಮೆಣಸಿನಕಾಯಿ-3
ಕರಿಬೇವಿನ ಸೊಪ್ಪು -15 ರಿಂದ 20 ಎಸಳು
ಕೊತ್ತಂಬರಿ ಸೊಪ್ಪು- 1/2 ಕಪ್
ಕಡ್ಲೆಹಿಟ್ಟು -5 ಚಮಚ(ದೊಡ್ಡದು)
ಅಕ್ಕಿ ಹಿಟ್ಟು-2 ಚಮಚ
1 ಟೇಬಲ್ ಸ್ಪೂನ್ ಕಾದ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಅಚ್ಚ ಕಾರದಪುಡಿ -1 ಚಮಚ
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಎಲೆಕೋಸು, ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, 1/2 ಚಮಚ ಅಚ್ಚ ಕಾರದಪುಡಿ, ಕಾದ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕಲಸಿಕೊಳ್ಳಿ. ಬೇಕಾದರೆ ಸ್ವಲ್ಪ ನೀರು ಹಾಕಿಕೊಂಡು ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಹಾಕಿ ಕರಿಯರಿ.
ಬಿಸಿ ಬಿಸಿಯಾದ ಪಕೋಡವನ್ನು ಕಾಫಿ ಜೊತೆ ತಿನ್ನಿ.
