
ಮಂಗಳೂರಿನ ಕೋಡಿಕಲ್ ದೇರೆಬೈಲ್ ನಿವಾಸಿ ಮೂಲತಃ ಉಡುಪಿ ಪಾಂಗಾಳದ ರಾಜು ಭಂಡಾರಿಯವರು ನವೆಂಬರ್ 25, 2018 ರ ರವಿವಾರ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ದಿವಂಗತ ರಾಜು ಭಂಡಾರಿಯವರು ಕಾರ್ಪೋರೇಶನ್ ಬ್ಯಾಂಕ್ ನಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅಲ್ಲದೆ ಕಚ್ಚೂರು ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರಾಗಿ, ಕಚ್ಚೂರು ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಮೃತರು ಪತ್ನಿ ಶ್ರೀಮತಿ ಸುಮ, ಪುತ್ರ ಹರಿಪ್ರಸಾದ್, ಮಗಳು ನಿಧಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
26, ನವೆಂಬರ್ 2018 ರಂದು ಬೆಳಗ್ಗೆ 11 ಗಂಟೆಗೆ ದಿವಂಗತ ಪಾಂಗಾಳ ರಾಜು ಭಂಡಾರಿಯವರ ಅಂತ್ಯಕ್ರಿಯೆ ಕೋಡಿಕಲ್ ದೇರೆಬೈಲಿನ ನಿವಾಸದಲ್ಲಿ ನಡೆಯಲಿದೆ.
ದಿವಂಗತ ಪಾಂಗಾಳ ರಾಜು ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ದುಃಖತಪ್ತ ಪತ್ನಿ, ಪುತ್ರ ಹಾಗೂ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
“ಭಂಡಾರಿವಾರ್ತೆ.”