January 18, 2025
WhatsApp Image 2021-11-26 at 19.36.46
ತುಲು ಭಾಷೆಯಲ್ಲಿ ಶ್ರೀತಾಳೆ ಮರವನ್ನು “ಪನೊಲಿ” ಮರ ಎನ್ನುತ್ತಾರೆ. ಈ “ಪನೊಲಿ” ಪದದಲ್ಲಿ ಎರಡು ತುಲು ಪದಗಳು ಸೇರಿ ಕೊಂಡಿದೆ. ಅವುಗಳಲ್ಲಿ ಒಂದು “ಪನಿ” ಮತ್ತು ಇನ್ನೊಂದು “ಒಲಿ”. ಪನಿ ಎಂದರೆ ಹನಿ ಎಂದರ್ಥ. ಪನಿ ಎಂದರೆ ಆದು ನೀರಿನಹನಿ,ಇಬ್ಬನಿ, ಮಳೆ ಎಂದು ತಿಳಿಯಬೇಕು. ಮತ್ತು ಒಲಿ ಎಂದರೆ ಗರಿ (ಮಡಲ್) ಎಂದರ್ಥ. ಒಟ್ಟಾಗಿ “ಪನೊಲಿ”(ಪನಿ+ಒಲಿ) ಎಂದರೆ ಮಳೆನೀರಿನಿಂದ ರಕ್ಷಿಸಿಕೊಳ್ಳುವ ಸಾಧನ ಇಲ್ಲವೇ ಸಲಕರಣೆ.ಪನೊಲಿ ಮರ ಅಂದರೆ ಮಾನವನು ತುಲುನಾಡಲ್ಲಿ ಮಳೆಯಿಂದ ರಕ್ಷಿಸಿ ಕೊಳ್ಳಲು ಬಳಸುತ್ತಿದ್ದ ಮರವಾಗಿತ್ತು. ಮಳೆ,ಗಾಳಿ, ಚಳಿ‌ ಬಿಸಿಲಿನಿಂದ ಅಂದು ತುಲುವರನ್ನು ರಕ್ಷಿಸಿದ್ದ ಮರವೇ ಗ್ರೇಟ್ “ಪನೊಲಿ” ಮರ.
    ಆದಿ ದ್ರಾವಿಡ ಜನರು ಅಂದಿನ ತುಲುನಾಡಲ್ಲಿಬದುಕು ಸಾಗಿಸುತ್ತಿದ್ದ ಕಾಲವದು. ಅದೇ ಕಾಲದಲ್ಲಿ ದಕ್ಷಿಣ ಆಫ್ರಿಕಾ ಖಂಡದ ಅತ್ಯಂತ ಸಾಧು ಆದಿವಾಸಿ “ಕೊರ” ಜನಾಂಗದ ಜನರು ಕಡಲಿನಲ್ಲಿ ದಾರಿ ತಪ್ಪಿ ತುಲುನಾಡಿಗೆ ಬಂದು ನೆಲೆಸುವರು.ಆದಿ ದ್ರಾವಿಡರು ಕೊರ ಆದಿವಾಸಿ ಜನರನ್ನು “ಕೊರಗ” ಎಂದು ಕರೆಯು ವರು.ಈ ಕಾಲದಲ್ಲೇ ತುಲುನಾಡು ಪ್ರಚಂಡ ಜಲ ಪ್ರಲ ಯಕ್ಕೆ ಸಿಲುಕುವುದು.ಇದರ ಪರಿಣಾಮವಾಗಿ ತುಲುನಾಡು ಪೂರ ಮುಳುಗಿ ಹೋಗುವುದು.ಇಲ್ಲಿ ಜನರು ಬದುಕಲಾಗದೆ ತುಲುನಾಡು ತೊರೆಯುವರು. ಕೊರಗರು ಪಶ್ಚಿಮ ಘಟ್ಟದ ಕೋರೆ ಪ್ರದೇಶದಲ್ಲಿ ನೆಲೆ ಆಗುವರು.ಆದಿ ದ್ರಾವಿಡ ಜನಾಂಗದ ಜನರು ಕೇರಲ,ತಮಿಲ್ ನಾಡು,ಆಂಧ್ರ, ತಲಂಗಾಣ ದೇಶಗಳಲ್ಲಿ ನೆಲೆ ಆಗುವರು.ಅಂದಿನ ತುಲುನಾಡು ತುಲುಕಾಡು ಆಗಿ ಪರಿವರ್ತನೆ ಆಗುವುದು. ಮೃಗ ,ಪಕ್ಷಿ, ನಾಗ ಸರ್ಪಗಳಂತಹ ಸರಿಸೃಪಗಳ ನಾಡಾಗುವುದು. ಎಲ್ಲಡೆ ಸರೋವರ ದಂತಹ ಕೊಳ(ಪಟ್ಲ)ಪ್ರದೇಶ ಆಗುವುದು.
     ಸಹಸ್ರಾರು ವರುಷಗಳ ಬಳಿಕ ಕೇರಲದಲ್ಲಿ ನೆಲೆಯಾಗಿದ್ದ ತುಲುವ ಆದಿ ದ್ರಾವಿಡರಿಗೆ “ಸೂದ್ರ” ಎಂಬ ಪದವಿಯು ಅಲ್ಲಿನ ಮೇಲ್ಜಾತಿಯವರಿಂದ ಸಿಗುತ್ತದೆ. ಅಸ್ಪ್ರಶ್ಯತೆಯಿಂದ ಅಲ್ಲಿ ಅವರಿಗೆ ಬದುಕಲು ಆಗದೆ ತಮ್ಮ ಪೂರ್ವಜರ ತುಲುನಾಡನ್ನು ಹುಡುಕಿಕೊಂಡು ಬರುತ್ತಾರೆ. ಈ ಕಾಲಕ್ಕೆ ಅದು ತುಲುಕಾಡಾಗಿತ್ತು.ನಿರಂತರ ಮಳೆ ಜಡಿಮಳೆ ಬರುತ್ತಿತ್ತು. ತುಲುಕಾಡಿನ ಬಹುಪಾಲು ಪ್ರದೇಶವು ಪಟ್ಲ ಆಗಿತ್ತು.ಎತ್ತರದ ಜಾಗಗಳಲ್ಲಿ ಎಲ್ಲೆಡೆ ಈ ತಾರಿ ಮರಗಳು ಬೆಳೆದಿದ್ದರೆ ತಗ್ಗು ಪ್ರದೇಶಗಳಲ್ಲಿ ಎಲ್ಲೆಡೆ ಅಸಂಖ್ಯಾತ “ಪನೊಲಿ” ಮರಗಳು ಸೊಂಪಾಗಿ ಬೆಳೆದು ಈ ದ್ರಾವಿಡ ಸೂದ್ರ ಜನರನ್ನುಸ್ವಾಗತ ಮಾಡುತ್ತಿದ್ದವು.
     ಈ ದ್ರಾವಿಡ ಜನರು ಎತ್ತರದ ಪ್ರದೇಶಗಳಲ್ಲಿ ಬೆಳೆದು ನಿಂತ ತಾರಿ ಗರಿಗಳಿಂದ ಎತ್ತರದ ಭೂಮಿಯಲ್ಲಿ ಗುಡಿಸಲು ನಿರ್ಮಿಸುವರು.ಆದರೆ ಈ ಗರಿಗಳು ಬೇಗನೆ ಒಣಗಿ ಮುರಿಯುತ್ತಿತ್ತು. ಒಂದು ರೀತಿಯ ಕಿರಿಕಿರಿ ಆಗುತ್ತಿತ್ತು. ಧಾರಾಳವಾಗಿ ಬೀಳುವ ಜಡಿಮಳೆಯಿಂದ ಗುಡಿಸಲು ಸೋರುತ್ತಿತ್ತು.ಮಣ್ಣಿನ ಗೋಡೆ ಕೊಚ್ಚಿ ಹೋಗುತ್ತಿತ್ತು.ಈ ದ್ರಾವಿಡ ಜನರ ದೃಷ್ಟಿ ಈ ಪನೊಲಿ ಮರದ ಅರ್ಧ ಚಂದ್ರನ ವಿನ್ಯಾಸದ ಗರಿಗಳತ್ತ ಬೀಳುತ್ತದೆ. ಕಡಿದು ಗುಡಿಸಲಿಗೆ ಬಳಸುವರು.ಇದು ತಾರಿ ಗರಿಗಳಿಂದ ಉತ್ತಮವಾಗಿ ಕಂಡು ಬಂತು. ಹೆಚ್ಚಿನ ಬಾಳುವಿಕೆ ಕೂಡಾ ಇತ್ತು. ಗಾಳಿ, ಮಳೆ, ಚಳಿ,ಬಿಸಿಲು ಇವುಗಳಿಂದ
ರಕ್ಷಿಸಲು ಪನೊಲಿ ಗರಿಗಳನ್ನು ಯಥೇಚ್ಛವಾಗಿ ಬಳಸಿದರು. ಇಲ್ಲೇ ಈ ಮರವನ್ನು “ಪನೊಲಿ” ಎಂದು ಕರೆದರು. ಮಳೆಗಾಲದಲ್ಲಿ ಕೊರಂಬುಗಳಲ್ಲಿ ಬಳಸಿದರು.ಇದರ ಗರಿಗಳಿಂದ ಛತ್ರಿ ತಯಾರಿಸಿ ಮಳೆಗೂ ಬಿಸಿಲಿನ ದಾಹಕ್ಕೆ ತಾಪಕ್ಕೆ ಉಪಯೋಗಿಸುವರು. ನಂತರದ ಕಾಲದಲ್ಲಿ ದೈವರಾಧನೆಯಲ್ಲಿ ಛತ್ರಿಯಾಗಿ ಬಳಸಿದರು. ತಾಳೆಗರಿಗಳಲ್ಲಿ ಗ್ರಂಥ ಬರೆದಂತೆ ಪನೊಲಿ ಗರಿಗಳಲ್ಲೂ ಬರೆದಿದ್ದಾರೆ.
     ಈ ದ್ರಾವಿಡ ಸೂದ್ರರು ತುಲುನಾಡಿನ ಎತ್ತರದ ಸ್ಥಳ ಗಳಲ್ಲಿ ಹೊಲಗದ್ದೆಗಳನ್ನು ರಚಿಸಿ ಕುಡು ಅರಿ(ಕುಡರಿ-
ಹುರುಳಿ ಮತ್ತು ಅಕ್ಕಿ)ಎಸೆದು ತುಲುನಾಡು ಸೃಷ್ಟಿ ಮಾಡುವರು.ನಾಗರಾಧನೆಗಾಗಿ ನಾಗಬನ ರಚಿಸುವರು.ನಂತರದ ಕಾಲದಲ್ಲಿ ತುಲುನಾಡು ಸೃಷ್ಟಿಸಿದ ಮಹಾನುಭಾವರನ್ನು ಅವರ ಮರಣದ ಬಳಿಕ ಅವರ ನ್ನು“ಬೂತೊಲು”(ಭೂತಲದಲ್ಲಿ ಇರುವವರು)ಆಗಿ ಕಲ್ಲುಹಾಕಿ ನಂಬುವರು.
    ತುಲುನಾಡಿಗೆ ಜೈನರ ಪ್ರವೇಶ ಆಗುತ್ತದೆ.ಇಲ್ಲಿನ ಬಹುಪಾಲು ಕೊಳಪ್ರದೇಶದಲ್ಲಿ ಕೊಳಕ್ಕೆ ಗದ್ದೆಗಳ
ನಿರ್ಮಾಣದ ಯೋಜನೆ ಆರಂಭವಾಗುತ್ತದೆ. ಪನೊಲಿ ಮನೆಗಳು ಅದೃಶ್ಯವಾಗಿ ಮುಲಿ ಹುಲ್ಲಿನ ಮನೆಗಳು ಮೇಲೇಳುತ್ತದೆ.ಈ ಕಾಲದಲ್ಲಿ ಪನೊಲಿ ಮರಗಳು ಎಷ್ಟಿತ್ತೆಂದರೆ ಈಗ ನಾವೆಲ್ಲ ಕಾಣುತ್ತಿರುವ “ಅಕೇಶಿಯಾ” ಮರಗಳಂತೆ ಎಲ್ಲೆಡೆ ಹರಡಿತ್ತು.ತುಲುನಾಡಿನಾದ್ಯಂತ ಸಹಸ್ರಾರು ಹೂ ಬಿಟ್ಟ ಪನೊಲಿ ಮರಗಳಿದ್ದವು.ಹೊಲ ಗದ್ದೆಗಳ ನಿರ್ಮಾಣದಲ್ಲಿ ಅದೆಷ್ಟೋ ಪನೊಲಿ ಮರಗಳನ್ನು ಕಡಿದರೂ ಮತ್ತಷ್ಟು ಈ ಮರಗಳು ಮೇಲೆ ಬರುತ್ತಿತ್ತು.ಒಂದು ಮರದಲ್ಲಿ ಕ್ಟಿಂಟಾಲ್ಗಟ್ಟಲೆ ಬೀಜಗಳು ಉತ್ಪಾದನೆ ಆಗುತ್ತಿತ್ತು.ಖಾಲಿ ಖಾಲಿ ಪ್ರದೇಶಯುದ್ದಕ್ಕೂ ಇದರ ಗಿಡಗಳು ಮೊಳಕೆ ಬಂದು ಗಿಡವಾಗಿ ಮರಗಳಾಗಿ ಪನೊಲಿ ಮರಗಳ ಕಾಡಿನಂತೆ ತೋರುತ್ತಿತ್ತು.ಈ ಮರಗಳ ನಿಯಂತ್ರಣ ಮಾಡುವುದೇ ಒಂದು ತಲೆನೋವಾಗಿತ್ತು.
    ತುಲುನಾಡಲ್ಲಿ ಆದಿ ಮೂಲದಲ್ಲಿ ನಾಗರಾಧನೆ, ಬೂತರಾಧನೆಗಳು ಸರಳವಾಗಿ ಪೃಕೃತಿ ಆರಾಧನೆಯಡಿ
ನಡೆಯುತ್ತಿತ್ತು. ನಂತರದ ಕಾಲದಲ್ಲಿ ಈ ದೈವರಾಧನೆ ಎಂದರೆ ಭಯದ ಆರಾಧನೆ ಎಂದಾಗುತ್ತದೆ. ದೋಷ,
ಪ್ರಾಯಶ್ಚಿತ್ತ ಎಂಬ ಪದಗಳು ಈ ಆರಾಧನೆ ಅಡಿಯಲ್ಲಿ ಹುಟ್ಟುತ್ತದೆ. ಈ ಭಯವು ತುಲುವರಲ್ಲಿ ರಕ್ತಗತವಾಗಿ
ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತದೆ.ಮೇಲ್ಜಾತಿ ಜನರು ಏನು ಹೇಳಿದರೂ ಕೀಲ್ಜಾತಿಯವರು ಹೆದರಿ ನಂಬುತ್ತಿದ್ದರು.ತುಲುನಾಡಲ್ಲಿ ಲಕ್ಷ ಬೂತಗಳು ಇವೆ ಎಂದರೂ ಇಲ್ಲಿನ ಸೂದ್ರರು ನಂಬುವ ಜಾಯ
ಮಾನವರಾಗಿ ಇರುವರು. ನಿಜವಾದ ಬೂತಗಳ ಹೆಸರುಗಳನ್ನು ಬದಲಾಯಿಸಿ ಹೊಸ ಹೊಸ ಹೆಸರಿಟ್ಟರೂ
ಹೆದರಿ ಅದನ್ನು ಒಪ್ಪುವವರೇ.
     ತುಲುನಾಡಲ್ಲಿ ಶಿವರಾಧನೆಯನ್ನು ಅನುಸರಿಸಲು ಶಿವರಾತ್ರಿ ದಿನ ಜಾಗರಣೆ ಇರಲು ಮನೆ ಮನೆಗಳಿಗೆ
ಕಲ್ಲು ತರಕಾರಿ ಎಸೆದು ಮನೋರಂಜನೆ ಮಾಡುವ ಸಂಪ್ರದಾಯ ಸಹಸ್ರಾರು ವರ್ಷ ನಡೆಯುತ್ತಿತ್ತು. ಈಗಿ
ನ ಕೆಲವು ದಶಕಗಳಿಂದ ಅದು ನಿಂತಿದೆ.ದೇವರಾದ ಶ್ರೀರಾಮ,ಶ್ರೀ ಕೃಷ್ಣರನ್ನು ಅನುಸರಿಸಿ ಆರಾಧಿಸಲು ದೀಪಾವಳಿ ಹಬ್ಬವನ್ನು ಆಚರಿಸುವ ಆರಾಧನೆ ಬರುವುದು.ಇಲ್ಲಿ ಬಲೀಂದ್ರ ಎಂಬ ರಕ್ಕಸನನ್ನು ಸೃಷ್ಟಿಸಿ ಅವನ
ನ್ನು ಭೂಮಿಗೆ ತಳ್ಳುವ ಕತೆಗಳು ಬರುತ್ತದೆ.ಅದರಲ್ಲೂ ಬಲೀಂದ್ರನಿಗೆ “ಕೂ” ಎಂದು ಕೂಗಿ ಅವನನ್ನು ಕರೆಯು
ವ ಆರಾಧನೆ ಇದೆ.“ಅಲೆಟ್ಟ್ ಬೊಲ್ನೈ ಮುರುಕುನಗ”ಈ ಬಲ್ಲ..‌.ಇತ್ಯಾದಿ ಅಸಾಧ್ಯವಾದ ಅರ್ಥ ಹೀನವಾದ ಸಾಹಿತ್ಯಗಳಲ್ಲಿ ಕರೆಯುವ ಪರಿ ವಿಚಿತ್ರ ಎಣಿಸುವುದು.
ಇವುಗಳ ಅರ್ಥಗಳನ್ನೇ ತಿಳಿಯದ ಸೂದ್ರರು ಬಲೀಂದ್ರನನ್ನು ಈಗಲೂ ಕರೆಯುತ್ತಾರೆ. ದೀಪಾವಳಿಯು ರಾಮ
ಕೃಷ್ಣರನ್ನು ಆರಾಧಿಸುವ ಹಬ್ಬ ಹೊರತು ಬಲಿ ಚಕ್ರವರ್ತಿದ್ದಲ್ಲ.
     ಕುಡು ಅರಿ ಎಸೆದು ಸೃಷ್ಟಿ ಆದ ತುಲುನಾಡಲ್ಲಿ ಕುಡು ಅರಿ ಹುರಿದು ತಿನ್ನುವ ಸಂಪ್ರದಾಯವನ್ನು ಆದಿ
ದ್ರಾವಿಡ ಸೂದ್ರರು ಮುಂದುವರಿಸಿ ಕೊಂಡು ಬಂದಿದ್ದರು.ಇದು ಅನಾದಿಕಾಲದ ಸಂಪ್ರದಾಯ ಆಗಿತ್ತು.ಆದರೆ
ಇತ್ತೀಚಿನ ದಶಕಗಳಲ್ಲಿ ಈ ಸಂಪ್ರದಾಯ ಒಮ್ಮೆಲೇ ನಿಂತು ಬಿಟ್ಟಿದೆ. ವಿಚಾರಿಸಿದರೆ ಭಯದ ಮಾತುಗಳು
ಜನರಿಂದ ಬರುತ್ತದೆ.“ದೇವಿಯಿಂದ ಈ ಸಂಪ್ರದಾಯವನ್ನು ನಿಲ್ಲಿಸುವಂತೆ ದೇವಿಯೇ ಆದೇಶಿಸಿದ್ದಾಳೆಯಂತೆ”
ಎಂಬ ಉತ್ತರ ಸಿಗುತ್ತದೆ.ತುಲುನಾಡು ಸೃಷ್ಟಿಯಾದ ದಿನವನ್ನು “ಕೆಡ್ಡಸ” ಎಂದು ಕರೆದು “ಕುಡರಿ” ತಿನ್ನಲು ಜನ ಹೆದರುವರು.ಇನ್ನೇನು ಹತ್ತಿಪ್ಪತ್ತು ವರ್ಷಗಳ ಬಳಿಕ ಈ ” ಕೆಡ್ಡಸ”ದ ಶಬ್ಧವು ತುಲು ನಿಗಂಟಿನಿಂದ
ಮರೆಮಾಚಿ ಹೋಗುವುದರಲ್ಲಿ ಸಂಶಯವೇ ಇಲ್ಲ.
“ಕುಡರಿ” ಎಂದರೆ ಕುಡು ಅರಿ(ಹುರುಳಿ ಮತ್ತು ಅಕ್ಕಿ) ಎಂಬುದನ್ನು ಮರೆತು ಬಿಡುವರು. ಬದಲಿಗೆ “ಕೊಡಲಿ”
ಎಂದು ಸುಲಭದಲ್ಲಿ ಅರ್ಥೈಸುವರು.
      ಇನ್ನು ” ಪನೊಲಿ” ಮರವನ್ನು ಕಡಿಯುವ ಸಂಪ್ರದಾಯ ಮೂಢ ನಂಬಿಕೆಯಿಂದ ಹುಟ್ಟಿಲ್ಲ. ಈಗ ಅದು
ಮೂಢನಂಬಿಕೆಯಾಗಿ ಪರಿವರ್ತನೆ ಆಗಿದೆ. ಅಂದು ಈ ಮರಗಳ ನಿಯಂತ್ರಣ ಮಾಡುವುದು ಬಲು ಕಷ್ಟದ
ಕೆಲಸವಾಗಿತ್ತು. ಜನ ಜಾಗೃತಿ ಮೂಡಿಸಲು ಜನರಲ್ಲಿ ಒಂದು ಕತೆಯನ್ನು ಸೃಷ್ಟಿಸುವರು. ಅದೇನೆಂದರೆ”ಪನೊ
ಲಿ ಮರದಲ್ಲಿ ಹೂ ಬಿಟ್ಟರೆ ಅದನ್ನು ಕೂಡಲೇ ಕಡಿದು ಹಾಕಬೇಕು.ಇದರ ಹೂವಿನ ದುರ್ಗಂಧವು ಊರೆಲ್ಲ
ಹರಡಿ ವಿಷವಾಗುವುದು. ಊರಿಗೆ ಇದು ಅನಿಷ್ಟ. ಬರಗಾಲ ಬಂದು ಜನ ಸಾಯುವರು. ಈ ಮರವನ್ನು ಕಡಿ
ಯುವಾಗ ಮನೆ ಯಜಮಾನ ಮನೆಯಲ್ಲಿ ಇರಬಾರದು.ಅದನ್ನು ಕಡಿಯುವ ಧ್ವನಿ ಅವನಿಗೆ ಕೇಳಬಾರದು.
ಅವನು ಮರ ಕಡಿಯುವ ಸಮಯಕ್ಕೆ ಊರು ಬಿಟ್ಟು ಬೇರೆ ಊರಲ್ಲಿ ಇರಬೇಕು”ಎಂಬ ನಿಬಂಧನೆಗಳನ್ನು
ಜನರಲ್ಲಿ ಬಿತ್ತುವರು.ಮೇಲೆ ಹೇಳಿದಂತೆ ಜನರು ಭಯಪಡುತ್ತಾರೆ. ವರ್ಷಗಳಿಂದ ವರ್ಷಕ್ಕೆ ಹೂವು ಬಿಟ್ಟ ಮರಗಳು ಕಡಿಮೆಯಾಗುತ್ತಾ ಬರುತ್ತದೆ. ನಂತರದಲ್ಲಿ ಹೂವು ಬಿಟ್ಟ ಮರಗಳಲ್ಲಿ ಕಾಯಿ ಬೀಜಗಳು ಆಗದಂತೆ
ನೋಡಿ ಕೊಂಡರು. ಕಡಿಯುತ್ತಲೇ ಬಂದರು.
    ಒಂದು ಮರದಲ್ಲಿ ಅಸಂಖ್ಯಾತ ಬೀಜಗಳಿಂದ ಅಸಂಖ್ಯಾತ ಮರಗಳು ಹುಟ್ಟುವುದನ್ನು ನಿಯಂತ್ರಿಸಲು ಈ ಸೃಷ್ಟಿ ಮಾಡಿದ ಸುಳ್ಳು ಕತೆ ಚೆನ್ನಾಗಿ ಕೆಲಸ ಮಾಡುತ್ತದೆ.ಅಂದಿನ ಪನೊಲಿ ನಿರ್ಮೂಲನ ಕಾರ್ಯ  ಕ್ರಮವು ಯಶಸ್ವಿಯಾಗಿ ತುಲುನಾಡಿನಾದ್ಯಂತ ಕೆಲಸ ಮಾಡುತ್ತದೆ. ಅದು ಎಷ್ಟು ಯಶಸ್ವಿ ಆಯಿತೆಂದರೆ ನಾಡಲ್ಲಿ ಆ ಮರದ ಸಂತತಿಯೇ ಇಲ್ಲದಂತೆ ಆಗುತ್ತದೆ.
ಪೀಳಿಗೆಯಿಂದ ಪೀಳಿಗೆಗೆ ಪನೊಲಿ ಮರ ಹೂವು ಬಿಟ್ಟರೆ ಮನೆ ಯಜಮಾನ ಸಾಯುತ್ತಾನೆ ಎಂಬ ಭಯ ಎಲ್ಲರಲ್ಲೂ ಮನೆ ಮಾಡುವುದು. ಮೂಢನಂಬಿಕೆ ಅತ್ತ ಅದು ಸಾಗುವುದು.
       “ಅಂದು ತುಲುನಾಡಿನ ಎಲ್ಲೆಡೆ ನಾನು ಮರೆಯುತ್ತಿದ್ದೆ.ಮಾನವನು ನನ್ನ ಕೈಗಳನ್ನು ಕಡಿದು ಸಾಕಷ್ಟು ನೋವು ಕೊಟ್ಟು ಹಿಂಸಿಸಿ ಬಿಡುತ್ತಿದ್ದರು. ಆದರೂ 60-90 ವರ್ಷಗಳವರೆಗೂ ನನ್ನ ಸಂತತಿ ಬೆಳೆಸಬೇಕು ಎಂದು ಹಾತೊರೆಯುತ್ತಿದ್ದೆ.ಆದರೆ ನಾನು ಹೂವು ಬಿಡುವಾಗಲೇ ನನ್ನನ್ನು ಕಡಿದು ಹಾಕುತ್ತಾ ಬಂದರು.
ಬೀಜ ಬಿಟ್ಟು ಸಸಿ ಆಗಲು ಈ ಮಾನವ ಬಿಡಲೇ ಇಲ್ಲ.
ಅಂದು ನನ್ನಿಂದ ಲಾಭವನ್ನು ಪಡೆದು ಅವರು ಮೆರೆದರು. ಅವರ ಸ್ವಾರ್ಥಕ್ಕಾಗಿ ನನ್ನನ್ನು ಕಡೆಗಣಿಸಿ ಕೊಂದು ಹಾಕಿದರು. ನನ್ನ ಸಾಯಿಸುವ ದಿನದಲ್ಲಿ ವಾದ್ಯ ಸಿಡಿಮದ್ದುಗಳ ಸಂಭ್ರಮ. ಪೂಜೆ ಮಂತ್ರಗಳ ಘೋಷಣೆ ಮಾಡುವ ಸಂಪ್ರದಾಯದ ಒಳಗೆ ಇನ್ನಷ್ಟು ಹೊಸ ಸಂಪ್ರದಾಯದ ಜನನ. ಅಂದರೆ ನನ್ನನ್ನು ಕೊಂದು ಹಾಕುವ ಕಾರ್ಯಕ್ರಮದಲ್ಲಿ ಹೊಸ ಹೊಸ ವಿಧಿ ವಿಧಾನಗಳು. ಅನುಯಾಯಿ ಭಕ್ತರ ಗೌಜಿ ಗದ್ದಲ.
ಪೃಕೃತಿ ನಾಶವಾಗುತ್ತದೆ ಎಂಬ ಪರಿಜ್ಞಾನ ಇಲ್ಲದ ಅನುಯಾಯಿ ಭಕ್ತರು. ಇದೇ ಭಕ್ತರ ಪೂರ್ವಜರನ್ನು ಅಂದು
ಮಳೆ,ಚಳಿ, ಬಿಸಿಲಿನಿಂದ ನಾನು ರಕ್ಷಿಸಿದ್ದನ್ನು ಮರೆತು ಈಗ ಕಡಿಯುವ ಸಂಭ್ರಮದಲ್ಲಿ ಕೇಕೇ ಹಾಡುತ್ತಿದ್ದಾರೆ.
ತುಲುನಾಡಿನ ಕಲ್ಲುಟ್ಟಿ-ಕಲ್ಕುಡ ದೈವಗಳು ನನ್ನ ತಂಪಾದ ಆಸರೆಯಲ್ಲಿ ನೆಲೆಯಾಗಿ ಆ ಸ್ಥಳಕ್ಕೆ“ಪನೊಲಿ-ಬೈಲ್ ಎಂಬ ಹೆಸರನ್ನು ಕೊಟ್ಟೆ.ಆ ದೈವಗಳು ಮೆರೆದು ಪಾವನರಾಗಿದ್ದಾರೆ.ನಾನೇ ಅಲ್ಲಿಲ್ಲ ಎಂದ ಮೇಲೆ ಆ ಊರಿಗೆ ಈ ಹೆಸರು ಬೇಕೆ?ಈಗ ನಾನೇ ಆ ದೈವಗಳಲ್ಲಿಪ್ರಾರ್ಥಿಸುವೆನು. ಆ ದೈವಗಳು ಸರಕಾರದ ಅರಣ್ಯ ಇಲಾಖೆಯಿಂದ ಈ ಮರಗಳನ್ನು ರಕ್ಷಿಸುವ ಸಲುವಾಗಿ ಕಠಿಣವಾದ ಆದೇಶವನ್ನು ಹೊರಡಿಸಬೇಕು.ಈ ಮರಗಳನ್ನು ಕಡಿದವರಿಗೆ ಕಠಿಣ ಶಿಕ್ಷೆ ಸಿಗುವ ಭರವಸೆಯನ್ನು ದೈವಗಳು ಪಡೆಯಬೇಕು” ಎಂಬ ಅಳಲನ್ನು ಪನೊಲಿ ಮರವು ತುಲುವರಲ್ಲಿ ವಿನಂತಿಸುವುದು.
ಮುಂದುವರಿಸುತ್ತಾ…
“ಅಂದು ತುಲುನಾಡಲ್ಲಿ ನಮ್ಮಅಸಂಖ್ಯಾತ ಸದಸ್ಯರು ಎಲ್ಲೆಡೆ ಹೂವು ಬಿಟ್ಟು ಬೀಜ ಪ್ರಸಾರ ಆಗಿ ಇನ್ನಷ್ಟು ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆ ಕಾಲದಲ್ಲಿ ಮಾನವನ ಒಟ್ಟು ಸಂಖ್ಯೆಗಿಂತಲೂ ನಮ್ಮ ಸಂಖ್ಯೆ ಅಧಿಕವಾಗಿತ್ತು.ಇದನ್ನು ಕಂಡ ಮಾನವ ಸುಳ್ಳು ಕತೆ ಸೃಷ್ಟಿಸಿ ನಮ್ಮ ಮುಂದಿನ ಪೀಳಿಗೆ ಬೆಳೆಯದಂತೆ ನೋಡಿ ಕೊಂಡ.ಇಲ್ಲಿನ ತುಲುವ ಸುಳ್ಳು ಕತೆಗಳನ್ನು ಬೇಗನೆ ನಂಬುವವನು.ಸತ್ಯವನ್ನು ನಂಬುವವನಲ್ಲ.ಅದು ಈಗಲೂ ಮುಂದುವರಿಯುತ್ತಾ ಇದೆ.ಪನೊಲಿ ಬೈಲಿನ ಕಲ್ಲುಟ್ಟಿ-ಕಲ್ಕುಡನವರು ಎದ್ದು ನಮ್ಮ ನಿಜವಾದ ಕತೆಯನ್ನು ತುಲುವರಿಗೆ ತಿಳಿಸಬೇಕು.ನಾವು ಹೂವು ಬಿಟ್ಟರೆ ಮನೆಗಳ ಮಾಲಕರು ಸಾಯುವುದಿಲ್ಲ ಎಂದು ಅವರಿಗೆ ತಿಳಿಸಬೇಕು.ನಮ್ಮ ‌ಸದಸ್ಯರ ಸಂಖ್ಯೆ ಹೆಚ್ಚಾದಲ್ಲಿಆಗ ನಮ್ಮನ್ನು ಬೇಕಾದರೆ ಕಡಿಯಲಿ.ನಮ್ಮ ಇರುವಿಕೆಯ ನ್ನು ಎಂದೂ ಅಳಿಸಬೇಡಿ.ಅಳಿಯಲು ಬಿಡಬೇಡಿ.ಏಕೆಂದರೆ ಅಂದಿನ ಕಾಲ ತುಲುನಾಡಿಗೆ ಇನ್ನೊಮ್ಮೆ ಬೇಗನೇ ಬರಲಿಕ್ಕಿದೆ.ಆಗ ಅವರಿಗೆ ತೊಂದರೆ ಆಗಬಾರದು.ಅವರ ನ್ನು ನಾವು ಅಂದು ರಕ್ಷಿಸಿದಂತೆ ಮಳೆ,ಚಳಿ,ಬಿಸಿಲುಗಳಿಂದ ರಕ್ಷಿಸುತ್ತೇವೆ” ಎಂದು ಪನೊಲಿ ಮರವು ಭರವಸೆಯನ್ನುಕೊಡುತ್ತದೆ.
✍ ️ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ
(ನಿವೃತ್ತ ಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *