January 18, 2025
cutuku

ಪದ ಪುಂಜಗಳೇ ಸಿಗುತ್ತಿಲ್ಲ
ನಿನ್ನ ಮಹಿಮೆಯ ವರ್ಣಿಸಲು
ಕಲಾಕುಂಚಗಳೇ ಸಾಲುತ್ತಿಲ್ಲ
ನಿನ್ನ ವರ್ಣನೆಯ ಬಣ್ಣಿಸಲು
ನನ್ನಾತ್ಮದೊಳು ನೀ ಅವಿತಿರುವೆಯೋ
ನಿನ್ನಾತ್ಮದೊಳು ನಾನಿರುವೆನೋ…..
ನಾನಂತೂ ಅರಿಯೇ!!!
ಈ ಭುವಿಯ ಅಂತರಾಳದಲಿ
ನಾ ಹೇಗೆ ಹುಡುಕಲಿ ನಿನ್ನ
ನೀ ಯಾವ ಚರಾ-ಚರದೊಳು
ಲೀನವಾಗಿಹೆಯೋ,
ಇಲ್ಲವೇ ನಾನೇ ನಿನ್ನೊಳಗಿಹನೋ ಪರಮಾತ್ಮ?
ನನ್ನೀ ಆತ್ಮ ಪರಿತಪಿಸುತಿಹುದು
ವಿಲೀನವಾಗಲು ನಿನ್ನೊಳಗೆ
ಈ ಲೀನ -ವಿಲೀನ
ಆತ್ಮ-ಪರಮಾತ್ಮಗಳ
ನಡುವೆಯೇ ಸಾಗುತಿದೆ ಬದುಕು
ಈ ಬದುಕಿನಲ್ಲಿ ನೀ ನೀಡುತಿಹೆ
ವಿಶ್ವರೂಪದರ್ಶನದ ಬೆಳಕು……

✍ ಅಕ್ಷತಾ ಆರ್ ಭಂಡಾರಿ
ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ 

Leave a Reply

Your email address will not be published. Required fields are marked *