January 18, 2025
parameshwara

ಭಂಡಾರಿ ಸಮಾಜದ ಹೆಸರಾಂತ ಚಲನಚಿತ್ರ ನಿರ್ದೇಶಕ ಶ್ರೀ ಸುಧಾಕರ್ ಬನ್ನಂಜೆಯವರ ಮಾವ (ಶ್ರೀಮತಿ ಮಮತಾ ಸುಧಾಕರ್ ಬನ್ನಂಜೆಯವರ ತಂದೆ )ಭದ್ರಾವತಿಯ ಅರೆಬಿಳಚಿ ಯ ಪರಮೇಶ್ವರ ಭಂಡಾರಿ ಯವರು ಡಿಸೆಂಬರ್ 11 , 2018 ರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು .ಅವರಿಗೆ 66 ವರ್ಷ ವಯಸಾಗಿತ್ತು .ದಿವಂಗತರು ರೈತ ಸಂಘ ಭದ್ರಾವತಿಯ ಕಾರ್ಯಕರ್ತರಾಗಿದ್ದರು 

ಮೃತರು ಪತ್ನಿ ನಳಿನಾಕ್ಷಿ , ಮಗಳು ಶ್ರೀಮತಿ ಮಮತಾ ಸುಧಾಕರ್ ಬನ್ನಂಜೆ, ಅಳಿಯ ಶ್ರೀ ಸುಧಾಕರ್ ಬನ್ನಂಜೆ, ಮಗ ಹರೀಶ್ , ಸೊಸೆ ಅನುರಾಧ , ಮಗಳು ಸುಮಲತಾ ಅಳಿಯ ರಘು , ಮೊಮ್ಮಕ್ಕಳಾದ ಪ್ರಾರ್ಥನ್ , ಪ್ರೇರಣ್ , ಕೌಶಿಕ್ , ದೀಪ್ತಿ , ತೃಪ್ತಿ ಯವರನ್ನು ಅಗಲಿದ್ದಾರೆ .

 ಪರಮೇಶ್ವರರವರ ಪತ್ನಿ ,ಮಕ್ಕಳು,ಕುಟುಂಬಸ್ಥರಿಗೆ ಅವರ ನಿಧನದ  ದುಃಖವನ್ನು  ಭರಿಸುವ ಶಕ್ತಿಯನ್ನು ಭಗವಂತನು  ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು “ಭಂಡಾರಿವಾರ್ತೆ” ಭಕ್ತಿಪೂರ್ವಕ  ಪ್ರಾರ್ಥನೆ.


-ಭಂಡಾರಿವಾರ್ತೆ.

Leave a Reply

Your email address will not be published. Required fields are marked *