January 18, 2025
2

ಪೋಷಕರೇ, ಈ ಆಹಾರಗಳು ನಿಮ್ಮ ಮಗುವಿನ ನೆನಪು ಶಕ್ತಿಯನ್ನು ಉತ್ತಮವಾಗಿಸುತ್ತಂತೆ

ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಆಹಾರದಲ್ಲಿ ಸೇರಿಸಬಹುದಾದ ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದೆ. ಇವು ಮಕ್ಕಳ ಸ್ಮರಣಶಕ್ತಿಯನ್ನು ಉತ್ತಮವಾಗಿಸುವಲ್ಲಿ ಸಹಕಾರಿಯಾಗಬಲ್ಲವು.

ಮಾನವರಲ್ಲಿ ಗರಿಷ್ಠ ಮೆದುಳಿನ ಬೆಳವಣಿಗೆಯು ಬಾಲ್ಯದಲ್ಲಿ ಸಂಭವಿಸುತ್ತದೆ. ಅದಕ್ಕಾಗಿಯೇ ಚಿಕ್ಕವರಿರುವಾಗಲೇ ಅವರಿಗೆ ಆರೋಗ್ಯಕರ ಆಹಾರವನ್ನು ನೀಡುವುದು ಬಹಳ ಮುಖ್ಯ. ಪೋಷಕರು ತಮ್ಮ ಮಕ್ಕಳಿಗೆ ಅವರ ಸ್ಮರಣೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪೂರಕಗಳನ್ನು ನೀಡುವುದು ನಿಮಗೆ ಗೊತ್ತಿರಬಹುದು. ಆದರೆ ಅದರ ಅಡ್ಡಪರಿಣಾಮಗಳು ಮಕ್ಕಳ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತವೆ.

ಪೋಷಕಾಂಶ ಭರಿತ ಆಹಾರ

ಪ್ರೋಟೀನ್, ಡಿಎಚ್‌ಎ, ಕ್ಯಾಲ್ಸಿಯಂ ಮತ್ತು ಇತರ ಕೆಲವು ಖನಿಜಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ನೈಸರ್ಗಿಕ ಆಹಾರವನ್ನು ಮಕ್ಕಳಿಗೆ ನೀಡುವುದು ಮುಖ್ಯವಾಗಿದೆ. ಇದು ಮಕ್ಕಳ ಸ್ಮರಣೆ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ.

ಮೊಟ್ಟೆಗಳು

ಮೊಟ್ಟೆಯು ಪ್ರೋಟೀನ್, ಕಬ್ಬಿಣ, ರಂಜಕ ಮತ್ತು ಫೋಲೇಟ್ ಇತ್ಯಾದಿಗಳಿಂದ ಸಮೃದ್ಧವಾಗಿವೆ. ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ಅವಶ್ಯಕವಾಗಿದೆ. ಮೊಟ್ಟೆಗಳಲ್ಲಿ ಮೆನ್ಕೊಲಿನ್ ಎಂಬ ಅಂಶವಿದ್ದು, ಇದು ಮಕ್ಕಳ ಮೆದುಳಿನ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತುಪ್ಪ

ಅನೇಕ ಜನರು ತುಪ್ಪವನ್ನು ಕೆಟ್ಟ ಕೊಬ್ಬು ಎಂದು ಭಾವಿಸುತ್ತಾರೆ, ಆದರೆ ತುಪ್ಪ ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದು. ಇದು DHA ಯಿಂದ ತುಂಬಿರುತ್ತದೆ ಮತ್ತು ಇದು ಮಕ್ಕಳ ಮೆದುಳನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸ್ಮರಣೆಯನ್ನು ಬಲಪಡಿಸುತ್ತದೆ. ಹೀಗಾಗಿ, ಮಕ್ಕಳು ಯಾವುದೇ ಬೇಯಿಸಿದ ಭಕ್ಷ್ಯಗಳನ್ನು ಸೇವಿಸುವಾಗ ಅವರ ಆಹಾರದಲ್ಲಿ ಒಂದು ಚಮಚ ತುಪ್ಪವನ್ನು ಸೇರಿಸೋದನ್ನು ಮರೆಯದಿರಿ.

ಹಾಲು

ಹಾಲು ಇಡೀ ದೇಹದ ಬೆಳವಣಿಗೆಗೆ ಸಹಾಯ ಮಾಡುವ ಒಂದು ಪಾನೀಯವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮಕ್ಕಳ ಮೆದುಳನ್ನುಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕಬ್ಬಿಣದ ಜೊತೆಗೆ ಫಾಸ್ಫರಸ್ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಮಗುವಿನ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.

ಡ್ರೈಫ್ರೂಟ್ಸ್‌

ಡ್ರೈಫ್ರೂಟ್ಸ್‌ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಒಣ ಹಣ್ಣುಗಳಾದ ವಾಲ್‌ನಟ್ಸ್, ಬಾದಾಮಿ ಮತ್ತು ಪಿಸ್ತಾ ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಈ ಡ್ರೈಫ್ರೂಟ್ಸ್‌ ಗಳ ಪ್ರಯೋಜನಗಳನ್ನು ಪಡೆಯಲು ನೀವು ಅವುಗಳನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಕೊಡಬೇಕು. ಅವುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ದೇಹಕ್ಕೆ ಹೆಚ್ಚು ಪೋಷಕಾಂಶಗಳು ಸಿಗುತ್ತವೆ.

ಬಾಳೆಹಣ್ಣು

ಬಾಳೆಹಣ್ಣು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಬಾಳೆಹಣ್ಣು ತಿನ್ನುವುದರಿಂದ ಮಕ್ಕಳಿಗೆ ಶಕ್ತಿ ಸಿಗುತ್ತದೆ ಮತ್ತು ಅವರ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಮಕ್ಕಳ ತೂಕವೂ ಹೆಚ್ಚುತ್ತದೆ. ಹಾಗಾಗಿ ಮಕ್ಕಳಿಗೆ ಪ್ರತಿದಿನ ತಿನ್ನಲು ಬಾಳೆಹಣ್ಣುಗಳನ್ನು ತಿನ್ನಿಸುವುದು ಉತ್ತಮ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: VK

Leave a Reply

Your email address will not be published. Required fields are marked *