
ಪರಿಸರ ಪಯಣ
ಮುಂಜಾನೆಯ ತಣ್ಣನೆ ಗಾಳಿ ಬೀಸಲು ಹಕ್ಕಿಗಳ ಚಿಲಿಪಿಲಿ ಕಲರವ ಕೇಳಲು!
ಇಬ್ಬನಿಯು ಮುತ್ತಿಕ್ಕುತಿದೆ
ನೇಸರನ ಆಗಮನಕ್ಕೆ ಕಾಯುತಿದೆ!
ಮೈದುಂಬಿ ಹರಿಯುತ್ತಿವೆ ಪ್ರವಾಹಿನಿ
ಕೈ ಬೀಸಿ ಕರೆಯುತ್ತಿದೆ ನಿಸರ್ಗ ಮಾತೆ!
ಕಂಪನು ಸೂಸುವ ಸುಮರಾಶಿ
ತನ್ನಿನಿಯನ ಕರೆಯುತಿದೆ!
ವೃಕ್ಷ ಸಾಲೆಗಳ ನರ್ತನ
ಬೀಸುತಿದೆ ತಂಗಾಳಿಯ ಕಂಪನ!
ಸುಂದರ ಪ್ರಕೃತಿಯ ಮಡಿಲಲ್ಲಿ
ನಲಿದಾಡುವ ಪ್ರಾಣಿ ಮಾಲೆ
ಸ್ವಚ್ಚಂದ ಪರಿಸರದ ಸುಂದರ ನೋಟ
ಕಣ್ತಂಪುಗೊಳಿಸೋ ಪ್ರಕೃತಿ ಮಾಟ
ನಿಸ್ವಾರ್ಥ ಪ್ರೀತಿಯ ಭೂಮಾತೆ
ಸಲಹುತಿಹಳು ತನ್ನ ಮಡಿಲಲ್ಲಿ
ಅದೆಷ್ಟೋ ಜೀವರಾಶಿಯ!
_ ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ