ಮಳೆಗಾಲ ಬಂತೆಂದರೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಾಡುವ ಖಾದ್ಯವಾಗಿದೆ.ಕಾಡಿನಲ್ಲಿ ಹಾಗೂ ತೋಟಗಳಲ್ಲಿ ಮರದ ಮೇಲೇ ಸಿಗುವ ಕೆಸುವಿನಿಂದ (ಮರಗೆಸ) ಪತ್ರೊಡೆಯನ್ನು ತಯಾರಿಸುತ್ತಾರೆ.
ಬೇಕಾಗುವ ಸಾಮಾಗ್ರಿಗಳು:
ಕೆಸುವಿನ ಎಲೆ -10-12
ಅಕ್ಕಿ -1 1/2 ಕಪ್
ಉದ್ದಿನಬೇಳೆ -1/4 ಕಪ್
ಒಣಮೆಣಸು -10-15
ಧನಿಯಾ ಬೀಜ -3 ಚಮಚ
ಜೀರಿಗೆ-2 ಚಮಚ
ಕಾಯಿತುರಿ -1ಕಪ್
ಹುಣಸೇ ಹುಳಿ – 1 ನಿಂಬೆ ಗಾತ್ರದ್ದು
ಈರುಳ್ಳಿ -2
ಅರಿಶಿನ – ಚಿಟಿಕೆ
ಎಣ್ಣೆ -4-5 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 6-8 ಗಂಟೆಗಳ ಕಾಲ ನೆನೆಸಿಡಿ.
ಒಣಮೆಣಸು,ಕೊತ್ತಂಬರಿ ,ಜೀರಿಗೆ ಇಷ್ಟನ್ನು ಹುರಿದುಕೊಳ್ಳಿ, ನಂತರನೆನೆಹಾಕಿದ ಅಕ್ಕಿ ಬೇಳೆಗೆ ಹುರಿದ ಸಾಮಾಗ್ರಿ ಮತ್ತು ಹುಳಿ,ಕಾಯಿತುರಿ,ಉಪ್ಪು,ಅರಿಶಿನ ಹಾಕಿ ನುಣ್ಣಗೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ.
ಕೆಸುವಿನ ಎಲೆಗಳನ್ನು ನೀರಿನಿಂದ ತೊಳೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣವನ್ನು ಒಂದು ಎಲೆಯ ಒಂದು ಭಾಗಕ್ಕೆ ಹಚ್ಚಿದ ನಂತರ ಅದರ ಮೇಲೆ ಇನ್ನೊಂದು ಎಲೆ ಇಟ್ಟು ಮತ್ತೆ ಹಚ್ಚಬೇಕು .ಈ ರೀತಿ ಒಂದರಮೇಲೊಂದರಂತೆ 3-4 ಎಲೆಗಳನ್ನಿಟ್ಟು ಹಚ್ಚಿ ನಂತರ ಎಲೆಗಳನ್ನು ಸುರುಳಿ ಆಕಾರದಲ್ಲಿ ಸುತ್ತಿ ಇದನ್ನು ಇಡ್ಲಿ ಮತ್ತು ಕಡಬು ಬೇಯಿಸುವ (ಸರಗೋಲು) ಪಾತ್ರೆಯಲ್ಲಿ ಇಟ್ಟು 45 ನಿಮಿಷ ಬೇಯಿಸಬೇಕು.
ಬೆಂದ ನಂತರ ಅದನ್ನು ಚಾಕುವಿಂದ ಸಣ್ಣಗೆ ಪುಡಿಯಾಗುವ ರೀತಿ ಹೆಚ್ಚಿಕೊಳ್ಳಬೇಕು.
ಕೊನೆಯಲ್ಲಿ ಒಂದು ಬಾಣಲೆಗೆ ಎಣ್ಣೆ ಹಾಕಿ ಕರಿಬೇವು,ಒಣಮೆಣಸು, ಉದ್ದಿನ ಬೇಳೆ, ಜೀರಿಗೆ, ಈರುಳ್ಳಿ ಹಾಕಿ ಪ್ರೈ ಮಾಡಿ ಪತ್ರೊಡೆ ಹಾಕಿ ಕಲಸಿದರೆ
ಒಗ್ಗರಣೆ ಮಾಡಿದ ಪತ್ರೊಡೆ ಸಿಧ್ಧ.
ಪ್ರತಿಭಾ ಭಂಡಾರಿ ಹರಿಹರಪುರ