January 18, 2025
Vote

ಕೋವಿಡ್​ ಕಾರಣದಿಂದ ಮುಂದೂಡಲ್ಪಟ್ಟಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ  ದಿನಾಂಕ ಘೋಷಣೆಯಾಗಿದೆ.

ಮೊದಲ ಹಂತದ ಮತದಾನ ಡಿಸೆಂಬರ್ 22ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಡಿ.27ರಂದು ನಡೆಯಲಿದೆ.  ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ.  5762 ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ.  92,121 ಸದಸ್ಯರಿಗೆ ಚುನಾವಣೆ ನಡೆಯಲಿದೆ.

ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಮತಎಣಿಕೆ ನಡೆಯಲಿದೆ.  ಎರಡು ಹಂತದ ಮತ ಎಣಿಕೆ ಒಂದೇ ದಿನ ನಡೆಯಲಿದೆ. 

ಕೋವಿಡ್ ಪಾಸಿಟಿವ್ ಇರುವ ರೋಗಿಗಳಿಗೆ ಮತ ಹಾಕಲು ಕೊನೆಯ ಒಂದು ಗಂಟೆಗೆ ಅವಕಾಶ ಕೊಡುತ್ತೇವೆ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಯುವ ಜಾಗೃತಿ ಮತದಾರರ ವೇದಿಕೆ ರಾಜ್ಯ ಅಧ್ಯಕ್ಷ ಶ್ರೀ ಮಹೇಂದ್ರ ಕುಮಾರ್ ಫಲ್ಗುಣಿ , ಮತದಾರರಿಗೆ ಈ ಕೆಳಗಿನ ಸಂದೇಶ ರವಾನಿಸಿದ್ದಾರೆ.

ಸಿಗರೇಟ್ ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾದರೆ ಮತ ಮಾರಾಟ ದೇಶಕ್ಕೆ ಅಪಾಯಕಾರಿ. ಪ್ರಜ್ಞೆ ಇಲ್ಲದ ನಾಯಕನಿಗೆ ಮತ ನೀಡಿದರೆ ಇಡೀ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಆದ್ದರಿಂದ ಪ್ರಜ್ಞಾವಂತರಿಗೆ ಮತ ನೀಡಿ.


ಬಲಿಷ್ಠ ಕರ್ನಾಟಕ ನಿರ್ಮಾಣವಾಗಲಿ. ರಾಜ್ಯದ ಸರ್ವತೋಮುಖ ಪ್ರಗತಿಗೆ ನಿಮ್ಮ ಮತ ಮೀಸಲಿರಲಿ.

 

 

ಮಹೇಂದ್ರ ಕುಮಾರ್ ಫಲ್ಗುಣಿ
ಯುವ ಜಾಗೃತಿ ಮತದಾರರ ವೇದಿಕೆ

Leave a Reply

Your email address will not be published. Required fields are marked *