January 18, 2025
Grama pachayat

ರಾಜ್ಯ ಚುನಾವಣೆ ಆಯೋಗವು 2020ರ ಡಿಸೆಂಬರ್ 22ರಂದು ಮೊದಲ ಮತ್ತು ಡಿಸೆಂಬರ್ 27ರಂದು ಎರಡನೇ ಹಂತದ ಚುನಾವಣೆ ನಡೆಸುವುದಾಗಿ ಘೋಷಿಸಿದೆ. ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಎರಡೂ ಹಂತದ ಮತಎಣಿಕೆ ಒಂದೇ ದಿನ ನಡೆಯಲಿದೆ.

ರಾಜ್ಯದ 30 ಜಿಲ್ಲೆಗಳ 5,762 ಗ್ರಾಮ ಪಂಚಾಯತಿಗಳಿಗೆ ಚುನಾವಣೆ (Gram Panchayat Election) ನಡೆಯಲಿದೆ. ಒಟ್ಟು 92,121 ಸದಸ್ಯರ ಆಯ್ಕೆಗಾಗಿ ಅಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಅರ್ಧ ತಾಲೂಕುಗಳಲ್ಲಿ ಮಾತ್ರ ಚುನಾವಣೆ ನಡೆಯಲಿದೆ. ಉಳಿದ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಪ್ರತಿ ಜಿಲ್ಲೆಗಳಲ್ಲೂ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಈ ಬಗ್ಗೆ ಯುವ ಜಾಗೃತಿ ಮತದಾರರ ವೇದಿಕೆಯ ರಾಜ್ಯ ಅಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿಯವರು ಮುಂಬರುವ ಗ್ರಾಮ ಪಂಚಾಯತ್ ಸದಸ್ಯನನ್ನು ಆಯ್ಕೆಮಾಡುವ ಮುಂಚೆ ಮತದಾರರು ಯಾವ ರೀತಿ ಜಾಗ್ರತೆ ವಹಿಸಬೇಕೆಂದು ಕೆಲವಷ್ಟು ಸಲಹೆ ನೀಡಿದ್ದಾರೆ.

ಮುಂದಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ , ನಿಮ್ಮ ಗ್ರಾಮಕ್ಕೆ ಬೇಕಾದ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮತದಾರರ ವೇದಿಕೆ ಪರವಾಗಿ ರಾಜ್ಯದ ಮತದಾರರಲ್ಲಿ ಮನವಿ ಮಾಡುತ್ತೇನೆ.


ಮುಂದಿನ ವಿಧಾನ ಸಭಾ ಚುನಾವಣೆಗೂ ಕೂಡ ಈ ಚುನಾವಣೆ ದಿಕ್ಸೂಚಿಯಾಗ ಬಹುದು ಆದ್ದರಿಂದ ಮತದಾರರರು ಯೋಚಿಸಿ ಮತ ನೀಡಬೇಕು . ನಿಮ್ಮ ಗ್ರಾಮದ ಸಮಸ್ಯೆ ಗೆ ಕೂಡಲೆ ಸ್ಪಂದಿಸುವ ಸಾಮರ್ಥ್ಯವಿರುವವರನ್ನೇ ಆಯ್ಕೆ ಮಾಡಬೇಕು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿ ಗಳಿಗೆ ಮತ ನೀಡಿ ಅದರಲ್ಲೂ ವಿದ್ಯಾವಂತ ವಿಚಾರವಂತ ಜಾತ್ಯಾತೀತ ಮನೋಭಾವ ಇರುವ ಅಭ್ಯರ್ಥಿಗಳ ಆಯ್ಕೆ ಮಾಡಲು ಮನವಿ ಮಾಡುತ್ತೇನೆ.

 

 

 

ಮಹೇಂದ್ರ ಕುಮಾರ್ ಫಲ್ಗುಣಿ
ಯುವ ಜಾಗೃತಿ ಮತದಾರರ ವೇದಿಕೆ ಅದ್ಯಕ್ಷ

Leave a Reply

Your email address will not be published. Required fields are marked *