January 18, 2025

ಬಂಟ್ವಾಳ ತಾಲ್ಲೂಕು ಪೆರ್ನೆ ಬಿಳಿಯೂರು ಮೇಗಿನಮನೆ ದಿವಂಗತ ದೇರ ಭಂಡಾರಿ ಮತ್ತು ಪೂವಕ್ಕ ಭಂಡಾರಿ ದಂಪತಿಯ ಪುತ್ರ ಬಿಳಿಯೂರು ಮೇಗಿನಮನೆ ಗಣಪ ಭಂಡಾರಿ (87 ವರ್ಷ ) ಫೆಬ್ರವರಿ ಮೂರರ ಗುರುವಾರದಂದು ಮುಂಜಾನೆ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ದೈವಾಧೀನರಾದರು.

ಕಂಬಳ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಇವರು ವಿಷ್ಣುಮೂರ್ತಿ ಬಿಳಿಯೂರು ಮೇಗಿನಮನೆ ಗಣಪ ಭಂಡಾರಿ ಅವರ ಕೋಣಗಳು ಸುಮಾರು ಅರುವತ್ತು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸ್ಪರ್ಧೆಗಳನ್ನು ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಪ್ರಗತಿಪರ ಕೃಷಿಕರಾಗಿದ್ದು ಸಮಾಜದ ಕೊಡುಗೈ ದಾನಿಯಾಗಿದ್ದರು.

ಪತ್ನಿ ಮಾನಕ್ಕ ಗಣಪ ಭಂಡಾರಿ ಪುತ್ರಿ ಶ್ರೀಮತಿ ಕಮಲ ಸುಂದರ ಭಂಡಾರಿ ಆಲಂಕಾರು ಪುತ್ರರಾದ ಶ್ರೀ ಲಿಂಗಪ್ಪ ಭಂಡಾರಿ ,ಶ್ರೀ ಉಮಾ ನಾಥ ಭಂಡಾರಿ , ಶ್ರೀ ಐತಪ್ಪ ಭಂಡಾರಿ , ಶ್ರೀ ಸಂಜೀವ ಭಂಡಾರಿ , ಶ್ರೀ ಉಗಪ್ಪ ಭಂಡಾರಿ , ಶ್ರೀ ಪದ್ಮನಾಭ ಭಂಡಾರಿ , ಶ್ರೀ ದಿವಕಾರ ಭಂಡಾರಿ , ಶ್ರೀ ಸದಾನಂದ ಭಂಡಾರಿ ಹಾಗೂ ಅಳಿಯ , ಸೊಸೆಯಂದಿರು , ಮೊಮ್ಮಕ್ಕಳು , ಮರಿಮಕ್ಕಳನ್ನು ಅಗಲಿದ್ದಾರೆ .

ಗಣಪ ಭಂಡಾರಿಯವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಪತ್ನಿ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

Leave a Reply

Your email address will not be published. Required fields are marked *