January 18, 2025
Manada-Maatu

ನಾಲ್ಕನೇ ವರುಷಗಳನ್ನು ಪೂರೈಸಿ ಐದನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವ  ಜಾಲತಾಣದ ಭಂಡಾರಿ ವಾರ್ತೆಗೆ  ಶುಭ ಹಾರೈಕೆಗಳು.

 

 

  ತುಳು ಪ್ರಧಾನವಾಗಿ ಮೆರೆಯುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿರುವ, ಹಾಗೂ ಇದಕ್ಕೆ ಹೊಂದಿಕೊಂಡಿರುವ ಆಸುಪಾಸಿನ ಜಿಲ್ಲೆಗಳಲ್ಲಿರುವ ಹಾಗೆಯೇ ಭಾರತದಾದ್ಯಂತ ಪಸರಿಸಿರುವ ತುಳುವ ಭಂಡಾರಿ ಸಮಾಜದ ಜನರನ್ನು  ಆದುನಿಕ ಮಾಯಾಜಾಲದಲ್ಲಿ ಪರಸ್ಪರ ಸ್ಪಂದಿಸಲು ನಿರ್ಮಿಸಿದ ವಾರ್ತಾ ಮಾಧ್ಯಮದ ವೇದಿಕೆಯೇ ಭಂಡಾರಿ ವಾರ್ತೆ ಯ ಮೂಲ ಉದ್ದೇಶವಾಗಿರಬಹುದೆ಼ದು ನನ್ನ ನಂಬಿಕೆ.

    ನಾನು ಈ ಪತ್ರಿಕೆಯ ಚಟುವಟಿಕೆಯಲ್ಲಿ ಈವರೆಗೂ ಭಾಗವಹಿಸಿಲ್ಲ. ಕೇವಲ ಜಾಲತಾಣದಲ್ಲಿ ಕೇಳಿದ್ದೇನೆ ಪತ್ರಿಕೆ ಓದಿದ್ದೇನೆ.  ನನ್ನ ಹಳೇ ಮಿತ್ರರಾದ ಕುಶಲ್ ಭಂಡಾರಿ , ಬೆಂಗಳೂರು ಇವರು ನನಗೆ ವಾಟ್ಸಪ್ಪ್  ಮೂಲಕ ಹೊಸ ಮಿತ್ರರಾಗಿ ಸಂಪರ್ಕ ಹೊಂದಿದ ಬಳಿಕ ಭಂಡಾರಿ ವಾರ್ತೆಯ ಹಿನ್ನೆಲೆ ಮುನ್ನೆಲೆಯನ್ನು ನನಗೆ ಇತ್ತೀಚೆಗೆ ತಿಳಿ ಹೇಳಿದ ಬಳಿಕವೇ ಭಂಡಾರಿ ವಾರ್ತೆಯ ಬಗ್ಗೆ ನನಗೆ ಅರಿವಾಗಿರುವುದು.

ಭಂಡಾರಿ ವಾರ್ತೆಯ ಮೂಲ ಹುಟ್ಟು ಹಾಕಿದ ಸದಸ್ಯರಿಗೆ ಪ್ರಕೃತ ಭಂಡಾರಿ ವಾರ್ತೆಯನ್ನು ಮುನ್ನಡೆಸುತ್ತಿರುವ  ತಂಡದ ಕಿರಿಯರಿಗೆ ಶುಭಾಶೀರ್ವಾದವನ್ನು ಹಾಗೂ ಹಿರಿಯರಿಗೆ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ.

     ಭಂಡಾರಿ ಸಮಾಜದ ಬಂಧುಗಳಿಗಾಗಿ ಭಂಡಾರಿ ವಿವಾಹ ವೆಬ್ಸೈಟು ಅಸ್ತಿತ್ವಕ್ಕೆ  ಬಂದಿರುವುದು ಸಂತೋಷದ ವಿಚಾರ. ಇದನ್ನು ಭಾರಿ ವೆಚ್ಚದೊಂದಿಗೆ ಸ್ಥಾಪಿಸಿದ ಸ್ಥಾಪಕರಿಗೆ ಕೃತಜ್ನತೆಗಳು.

     ಹಿಂದೆ  ವಿವಾಹ ನೆಂಟಸ್ಥಿಕೆ ಮಾಡುವ ಕಾರ್ಯದಲ್ಲಿ ನನಗೆ ಬಹಳ ಆಸಕ್ತಿ ಇತ್ತು. ಕನಿಷ್ಟ 9 ಜೋಡಿಗಳ ವಿವಾಹ ಕೈಗೂಡುವ ಕಾರ್ಯದಲ್ಲಿ ನನ್ನ ಪಾತ್ರವೂ ಇತ್ತು. 

    1985 ರ ಬಳಿಕ ಭಂಡಾರಿ ಸಮಾಜ ಮಾತ್ರವಲ್ಲ ತುಳುನಾಡಿನ ಬಹುಪಾಲು ಜನರ ವಿವಾಹ ಸಂಬಂಧಿ ಬೇಡಿಕೆಗಳ ಸ್ವರೂಪವೇ ಬದಲಾಯ್ತು.

    ಹಿಂದಿನ ಪದ್ಧತಿಯಲ್ಲಿ ಹಿರಿಯರು ಸೇರಿ ತಮ್ಮ  ಮಕ್ಕಳಿಗೆ( ಹುಡುಗ/ಹುಡುಗಿಗೆ) ತಾವೇ ಮದುವೆ ಮಾಡಿಸುತಿದ್ದರು. ಬರು ಬರುತ್ತಾ ಕ್ರಮೇಣ  ಹಿರಿಯರು ತಮ್ಮ ಮನೆಯ ಹುಡುಗಿಗೆ ತಾವೇ ಹುಡುಗನನ್ನು ಆಯ್ಕೆ ಮಾಡಿ ವಿವಾಹ ಮಾಡುತಿದ್ದರು.  ತದನ಼ಂತರದಲ್ಲಿ ಹುಡುಗಿಗೆ ಮದುವೆ ಮಾಡುವುದು, ಹುಡುಗ ಬೇಕಾದರೆ ಮದುವೆ ಆಗುವುದು ಎಂಬ ಪರಿಕಲ್ಪನೆ ಸೃಷ್ಟಿಯಾಯಿತು.

ಎಲ್ಲಾ ಮನೆಯವರು ಹೇಳುವುದೇನೆಂದರೆ, ನಮ್ಮ ಹುಡುಗಿಗೆ ಒಂದು ನೆಂಟಸ್ಥಿಕೆ ಇದ್ದರೆ ಹೇಳಿಎಂದು. ಅದೇ ಹೊತ್ತಿಗೆ ನಿಮ್ಮ ಮನೆಯಲ್ಲಿ ಇರುವ ಹುಡುಗಿಯ ಅಣ್ಣನಿಗೆ ಮದುವೆ ಮಾಡುತ್ತೀರಾ ಎಂದರೆ

ಅವ ಹುಡುಗ, ಯಾವಾಗ ಬೇಕಾದರೂ ಮದುವೆಯಾಗಲಿ ಅಥವಾ ಆಗದೇ ಇರಲಿ, ನಮ್ಮ ಹುಡುಗಿಗೊಂದು ಹುಡುಗ ಹುಡುಕುವಿರಾ? ಎಂದು ಹೇಳುತ್ತಾರೆ.

   ಹಾಗಾದರೆ ಹುಡುಗಿಯನ್ನು ವಿವಾಹಕ್ಕೆ ಒತ್ತಾಯಿಸುತ್ತಾರೆ, ಆದರೆ ಅದೇ ಮನೆಯ ಪ್ರಾಯ ಮೀರುತ್ತಿರುವ ಹುಡುಗನಿಗೆ ಮದುವೆ ಆಗು ಎಂದು ಯಾರೂ ಹೇಳುವುದಿಲ್ಲ. ಇದರ ಅಡ್ಡ ಪರಿಣಾಮವೇ ಕಳೆದ ಸುಮಾರು  40 ವರುಷಗಳಿಂದೀಚೆಗೆ ವಿವಾಹ ಸಂಬಂಧಿ ಬೇಡಿಕೆಗಳು, ವಿದ್ಯಾವಂತವರಿಂದಲೇ ಪ್ರಾಂಭವಾದವಾದ high tech  ನಂಬಿಕೆಗಳು/ಬೇಡಿಕೆಗಳಿಂದ ನಮ್ಮ ತುಳುನಾಡಿನ ವರ/ ವಧೂವರರಿಗೆ ಸಕಾಲದಲ್ಲಿ ಮದುವೆಯಾಗದೆ ಬಾಕಿಯಾಗುತ್ತಿದೆ.

1. ಹುಡುಗ- ಹುಡುಗಿಗೆ ಸಮಾನ ಪ್ರಾಯದ ನಿರಿಕ್ಷೆ

2. ಸಮಾನ ಪದವಿಗಳು

3, ಇಬ್ಬರೂ ಉದ್ಯೋಗದಲ್ಲಿರಬೇಕು

4. ಉದ್ಯೋಗದಲ್ಲಿ ಸ್ಥಾನಮಾನವು ಸಮಾನ

ಕುಟುಂಬವೂ ಸ್ಥಾನಮಾನದಲ್ಲಿ ಸರಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು. ಇನ್ನೂ ಅನೇಕ ಇದೆ.

   ಇದೆಲ್ಲಾ ಸರಿ ಹೊಂದಿದರೂ ಮತ್ತೆ ಈ ಕೆಳಗಿನ ನಂಬಿಕೆಗಳ ಸವಾಲುಗಳು🤔

1. ಜ್ಯೋತಿಷ್ಯದಲ್ಲಿ ಕೂಡಿ ಬರಬೇಕು

2. ನಾಗನ ಮೂಲ

3 ದೈವದ ಮೂಲ

4 ಕುಟುಂಬ ಮೂಲ

5. ಬರಿ/ಗೋತ್ರ ಮೂಲ

6, ವರನ/ವದುವಿನ ಮನೆಯಲ್ಲಿ ಯಾರಾದರು ಅನ್ಯ ಧರ್ಮೀಯರನ್ನು ಅಥವಾ ಹಿಂದೂ ಧರ್ಮದಲ್ಲಿಯೇ ಅಂತರ್ಜಾತಿಯ ವಿವಾಹವಾಗಿದ್ದರೆ  ಪ್ರಸ್ತಾವನೆ ಬಿದ್ದು ಹೋಗುವುದು😱

ಮೇಲೆ ಹೇಳಿದ್ದು ಕೆಲವೇ ಉದಾಹರಣೆಗಳು.

 ಆದರೆ ಸ್ವಜಾತಿಯ ಕುಟುಂಬದಲ್ಲಿ ಇಷ್ಟೆಲ್ಲಾ ಷರತ್ತು ಹಾಕುವ ಕುಟುಂಬದ ವರ/ ವಧೂವರ ಮನೆಯವರು ಅನ್ಯ ಸಮುದಾಯದವರನ್ನು  ಮದುವೆ ಆಗುವಾಗ ಯಾವ ಷರತ್ತೂ ಇರುವುದಿಲ್ಲ.

ಸಂತೋಷವೇ ಒಪ್ಪಿಕೊಳ್ಳಣ. ನಮ್ಮ ಭಾರತೀಯ ಸಮಾಜದಲ್ಲಿ ಜಾತ್ಯಾತೀತ ಸಮಾಜ ನಿರ್ಮಿಸೋಣ 

ಆದರೆ ಸ್ವ ಸಮಾಜದಲ್ಲಿ ವಿವಾಹ ಆಗುವಾಗ ಅದರಲ್ಲೂ ಹುಡುಗನ ಕಡೆಯವರು ಹುಡುಗಿಯ ಕಡೆಯವರಿಗೆ ವಿವಾಹ ಸಂಭಂದಿ ಖರ್ಚು ವೆಚ್ಚಗಳನ್ನು ಹೆಚ್ಚಾಗಿ ಹೊರಿಸುವುದು ಎಷ್ಟು ಸರಿ?

ಹಿಂದಿನ ಕಾಲದಲ್ಲಿ  ಜನರು ಅನಕ್ಷರಸ್ಥರಾಗಿದ್ದರೂ, ಅವರು ಸಾಮಾನ್ಯ ಪರಿಜ್ನಾನ ಹೊಂದಿ ತಮ್ಮ ದುಡಿಮೆಯಿಂದ ತಾವೂ ಸಕಾಲದಲ್ಲಿ ಮದುವೆಯಾಗಿ ಮಕ್ಕಳನ್ನು ಪಡೆದು ಅವರಿಗೆ ಗರಿಷ್ಟ ವಿದ್ಯೆ ನೀಡಲಾಗದಿದ್ದರೂ ಕನಿಷ್ಟ ವಿದ್ಯೆ ನೀಡಿ, ದುಡಿಮೆ ಎಂದರೇನು ತಿಳಿಸಿ ಮಕ್ಕಳಿಗೂ ಸಕಾಲದಲ್ಲಿ ಸರಳ ರೀತಿಯಲ್ಲಿ ಮದುವೆ ಮಾಡಿ  ತಮ್ಮ ಜೀವಿತಾವಧಿಯಲ್ಲಿಯೇ ಬಹಳಷ್ಟು ಮಂದಿ ತಮ್ಮ ಮೊಮ್ಮಕ್ಳನ್ನು ಹಾಗು ಮರಿ ಮೊಮ್ಮಕ್ಕಳನ್ನು ಕಂಡು ಮುಂದಿನ ಪೀಳಿಗೆಗೆ ಮನ ಸಂಕುಲದ ಕೊಡುಗೆ ನೀಡಿ ಜೀವನ ಸಾರ್ಥಕ ಕಂಡಿದ್ದಾರೆ🙏🙏🙏

   ಹಿಂದಿನ ಜೀವನ ಪದ್ಧತಿ ಹೀಗಿರುವಾಗ  ಮದುವೆಗೆ ಸಾಂಪ್ರದಾಯಿಕವೂ, ವೈದ್ಯಕೀಯವಾಗಿಯೂ ನಿಗದಿಪಡಿಸಿದ ವಯೋಮಾನ ಮೀರುತ್ತಿರುವ ಈ ವೇಳೆ ಹುಡುಗ/ ಹುಡುಗಿಯರ ಮನೆಯವರು ಅನಗತ್ಯ ಕಾರಣಗಳನ್ನೊಡ್ಡದೆ ಮಕ್ಕಳಿಗೆ ಸಕಾಲದಲ್ಲಿ ಮದುವೆಯಾಗಲು ಪ್ರೋತ್ಸಾಹಿಸಿ. ಇದರಿಂದ ನಮ್ಮ ಕುಟುಂಬಕ್ಕೆ ಮಕ್ಕಳನ್ನು ಮೊಮ್ಮಕ್ಕಳನ್ನು ನೋಡುವ ಅವಕಾಶ ನಮ್ಮದ್ದಾಗಿರುತ್ತದೆ.

ನಮ್ಮಂತಹ ಸ್ವಲ್ಪ ಸಂಖ್ಯಾತ ಸಮುದಾಯದವರು ಸಕಾಲದಲ್ಲಿ ಸಂಸಾರಗಳನ್ನು ಮು಼ಂದಿನ ಪೀಳಿಗೆಯತ್ತ ಮುನ್ನಡೆಸದಿದ್ದಲ್ಲಿ ನಮ್ಮ ಸಮುದಾಯದ ಸಮಾಜ  ಶತಮಾನದೊಳಗೆ ದಂತ ಕಥೆಗೆ ಸೇರುವ ಸಾಧ್ಯತೆಗಳಿರಬಹುದೆಂದು ನನ್ನ ಅತಿಶಯಯೋಕ್ತಿ ಅಲ್ಲದ ಪ್ರಾಮಾಣ…

 ಭಂಡಾರಿ ವಿವಾಹ ವೆಬ್ ಸೈಟಿಗೆ ಈ ಕೆಳಗಿನ ವಿವರಗಳನ್ನು ಸೇರ್ಪಡಿಸಬಹುದೇ? , ಕಾರಣ ಬದಲಾದ ಜೀವನ ಶೈಲಿಗೆ ತಕ್ಕಂತೆ.

1. ವಿವಾಹ ಪೂರ್ವ ವಧೂ ಹಾಗೂ ವರ ಇಬ್ಬರೂ ತಜ್ನ ವೈದ್ಯರಿಂದ ಸಂಪೂರ್ಣ ಮೆಡಿಕಲ್ ಚೆಕ್ ಅಪ್ ಮಾಡಿಸಿ

Medical Certificate ಗಳನ್ನು  ಮದುವೆ ಪೂರ್ವ ಪರಿಶೀಲನೆಗೆ ನೀಡಿದರೆ ಹೇಗೇ?

2. ಕೊರೋನಾ ಕಾಲದ ಈ ಹೊತ್ತಲ್ಲಿ ಹೆಜ್ಜೆ ಹೆಜ್ಜೆಗೂ Corona Negative ಕೇಳುವ ಪದ್ಧತಿ ಇರುವಾಗ ಸುದೀರ್ಘ ಜೀವನ ಮಾಡುವ ದಂಪತಿಗಳ ಆರೋಗ್ಯದ ಗುಟ್ಟು ತಿಳಿಯುವುದು ಏರಡೂ ಕುಟುಂಬಗಳ ಹಕ್ಕಲ್ಲವೇ?

3. ವೈವಾಹಿಕ ಜೀವನಕ್ಕೆ ವೈದ್ಯಕೀಯವಾಗಿ ಏನೇನು ಸಂಭಂದವಿಲ್ಲದ ಜಾತಕಗಳನ್ನೇಕೆ ನೋಡಲು ಹೊಟ್ಟೆ ತುಂಬಿಸುವ ಜ್ಯೋತಿಷಿಗಳ ಬಳಿ ಹೋಗುತ್ತೀರಿ?

4. ವಧು ಹಾಗು ವರನಿಗೆ ಪರಸ್ಪರ ಒಪ್ಪಿಗೆಯಾದಲ್ಲಿ  ಮೂಲ ಹುಡುಕುವ ಬದಲು ಆಧಾರ್ ಮೂಲ ಹುಡುಕಿ ಹಾಗೆಯೇ ಜೀವಕ್ಕೆ ಕಂಟಕ ಇದೆ ಎಂದು ಜಾತಕ ನಂಬುವ ಬದಲು ತಜ್ನ ವೈದ್ಯರಿಂದ ತಪಾಸಣೆ ಧಡೆಸಿ ಮದುವೆ ಆಗುವುದಕ್ಕೆ ತೊಂದರೆಗಳಿವೆಯೇ ಎಂಬುದನ್ನು ಕೇಳಿ, ಆದಷ್ಟು ಬೇಗನೆ ನಿಮ್ಮ ಮಕ್ಕಳಿಗೆ  ಸಕಾಲದಲ್ಲಿ ವಿವಾಹ ಮಾಡಿ ಪುಣ್ಯ ಕಟ್ಟಿಕೊಳ್ಳಿ🙏🙏🙏

 ನಮ್ಮ ಸಮಾಜದಲ್ಲಿ ಕನಿಷ್ಟ ವಿದ್ಯಾರ್ಹತೆಯನ್ನು ಹೊಂದಿ ಕಠಿಣ ದುಮೆಯಿಂದ ಸ್ವವಾವಲಂಬಿ ಜೀವನ ನಡೆಸುತ್ತಾ ತಂದೆ ತಾಯಿಗಳನ್ನು ಸಾಕುತ್ತಾ ಇದ್ದಾರೆ. ಇವರಿಗಾರಿಗೂ Bio-Data ಇಲ್ಲ. ಹಾಗಾದರೆ ಇಂತಹ ಮನಸ್ಥಿತಿಯುಳ್ಳ ಸಮಾಜದಲ್ಲಿ 

ಕಡಿಮೆವಿದ್ಯಾರ್ಹತೆ ಹೊಂದಿದ ನಮ್ಮದೇ ಸಮಾಜದ ಯುವಕ/ಯುವತಿಯರಿಗೆ  ವಿವಾಹ ಭಾಗ್ಯ ಇಲ್ಲವೇ? ಎಂಬ ಪ್ರಶ್ನೆಯನ್ನು ಯಾರಲ್ಲಿ ಕೇಳುವುದು.  ತಮ್ಮ ಮಕ್ಕಳ ವಿವಾಹ ಭಾಗ್ಯ ಕಾಣದೆ  ಸರಳ ರೀತಿಯಲ್ಲಾದರೂ ವಿವಾಹ ಮಾಡುವ ಧೈರ್ಯ ಕಂಡು ಕೊಂಡಾಗಲೇ ಇದಕ್ಕೆ ಉತ್ತರ/ ಪರಿಹಾರ ದೊರೆಯಲು ಸಾದ್ಯವಾಗಬಹುದೇ?

ಭಂಡಾರಿ ಸಮುದಾಯದ ಹಿರಿಯ ನಾಗರಿಕ,

 

ಸೀತಾರಾಮ ಭಂಡಾರಿ ಕೋಣಾಜೆ

Leave a Reply

Your email address will not be published. Required fields are marked *