January 18, 2025
2

ಪೈನಾಪಲ್ ಪಾಯಸ

ರುಚಿಕರವಾದ ಪೈನಾಪಲ್ ಪಾಯಸ ಮಾಡುವ ವಿಧಾನ.

ಬೇಕಾಗುವ ಪದಾರ್ಥಗಳು…

  • ಪೈನಾಪಲ್- 1
  • ಸಕ್ಕರೆ- ಕಾಲು ಕಪ್
  • ತೆಂಗಿನ ಹಾಲು- 2 ಬಟ್ಟಲು
  • ತುಪ್ಪ-2 ಚಮಚ
  • ಗೋಡಂಬಿ-50 ಗ್ರಾಂ
  • ಕಾರ್ನ್‌ಫ್ಲೋರ್ (ಜೋಳದ ಹಿಟ್ಟು)- 1 ಚಮಚ

ಮಾಡುವ ವಿಧಾನ:

  • ಮೊದಲು ಪೈನಾಪಲ್ ಪೀಸ್‌ಗಳನ್ನು ಗೋಡಂಬಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ ತೆಗೆದಿಡಿ. 
  • ನಂತರ ಕೋಕೋನಟ್ ಮಿಲ್ಕ್‌ಗೆ ಕಾರ್ನ್‌ಫ್ಲೊರ್ ಸೇರಿಸಿ, ಸಕ್ಕರೆ ಬೆರೆಸಿ ಒಲೆಯ ಮೇಲಿಟ್ಟು ಕದಕುತ್ತಿರಬೇಕು.
  • ಮಿಶ್ರಣವು ಬಿಸಿಯಾಗುವಾಗ ಫ್ರೈ ಮಾಡಿದ ಪೈನಾಪಲ್ ಹಾಗೂ ಗೋಡಂಬಿ ಸೇರಿಸಿ ಒಂದು ಬಾರಿ ಕುದಿ ಬಂದ ಕೂಡಲೇ ಕೆಳಗಿಳಿಸಿದರೆ, ರುಚಿಕರವಾದ ಪೈನಾಪಲ್ ಪಾಯಸ ಸವಿಯಲು ಸಿದ್ಧ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಕೆ ಪಿ

Leave a Reply

Your email address will not be published. Required fields are marked *