
ಯಾಕೆಹೆಣ್ಣಿನಮೋಹ ಮಾಯೆಯಿದು ನೀತಿಳಿಯೊ।
ಲೋಕದೊಳು ನಡೆದಿಹುದು ಜಂಜಾಟ ಬದುಕು॥
ನಾಕವಿದು ಎಂದೆನುತ, ಆಶಿಸುವೆ ಮೂರ್ಖನೀ।
ಸಾಕೆಂದು ನಿನಗಿಲ್ಲ – ಏನೇನುಬೇಕು ॥
ಹರೆಯಕುಗ್ಗಲು ನಿನಗೆ, ತರುಣಿಮೋಹವದೇಕೆ.?।
ಇರದಿಲ್ಲಿ ಸುಕನಿನ್ನ ದುರ್ಮನಕೆ ತಿಳಿಯೋ ॥
ಕರಗುತಿಹೆ ಕಲ್ಪನೆಗೆ, ಬರಿದೆಕೆಡುತಿಹೆ ನಿನ್ನ।
ಸರಸಕಿಲ್ಲದಸತಿಗೆ, ಮರುಳಾಗಿ ಸೋತೆ॥
ಅಂದಣವಕುಂಟನೇರಲುಪೋದರೇನುಂಟು।
ಕುಂದಣವು ಕುರುಡಂಗೆ ಯಾಕೀಗಪೇಳು ॥
ಮಂದಮತಿ ನಾರಿಯೊಡ ಸುಕಪಟ್ಟು ಕೆಡುತಿಹೆಯ।
ಹಿಂದುಮುಂದಿನ ಪರಿಯ ಯೋಚಿಸದೆಕೆಟ್ಟೆ॥
ಪುರುಷತ್ವ ವಿಹುದೀಗ, ಯೆಂದುಬ್ಬಿ ಕುಳಿತಿರುವೆ।
ಪರನಾರಿಯಿಂನಿನ್ನ ಧೀಶಕ್ತಿತೊಲಗೆ ॥
ಬರಡಾಗಿ ಪೋಗುವೆಯ, ನೀನರಿತು ಕೊಂಡೀಗ।
ಹರಿಯನ್ನು ನೆನೆನೆನೆಯೊ, ನಿನಗೆ ಶುಭವಾಗೇ॥
