January 18, 2025
poem-clipart-symbol

ಹೃದಯದ ವೇದನೆ

ಏಕೋ ಇಂದು ಮನದ ನೋವು ಹೆಚ್ಚಿದೆ 
ನನ್ನವರನ್ನು ಕಳೆದುಕೊಂಡು ಹೃದಯ ವೇದನೆ ಅನುಭವಿಸಿದೆ…

ನನ್ನವರ ನೆನಪಿನಲ್ಲಿ ಮನವು ದಾರಿ ತಪ್ಪಿದೆ
ನನ್ನ ಜೀವನದ ಕನಸುಗಳು ಬತ್ತಿದೆ..

ಕಾಡುತಿದೆ ಎಂದು ಕಾಣದ ಮನಸ್ಸಿನ ವೇದನೆ 
ಯಾರಿಗೂ ಅರ್ಥ ಆಗದ ನನ್ನ ಮನದ ರೋಧನೆ….

ನೆನಪಿಗೆ ಬರುತಿದೆ ನನ್ನವರ ಜೊತೆಗೆ ಕಳೆದ ಸುಂದರ ಸಮಯ
ಆದರೆ ಈ ಸಮಯದಲ್ಲಿ ಉಳಿದಿರುವುದು ನಾನೊಬ್ಬನೇ ನನ್ನವರು ನನ್ನಿಂದ ಮಾಯ…

ಪ್ರತಿ ಕ್ಷಣವು ಅನುಭವಿಸಲಾರೆ ಈ ನೋವು
ಎಲ್ಲಾವ ಮರೆಯಲು ಬೇಗ ಬರಲಿ ನನಗೆ ಸಾವು….

ಮುಖವಾಡ

ಪ್ರಪಂಚದಲ್ಲಿ ಕೇಳುವರಿಲ್ಲ ನಿನ್ನ  ಗೋಳು
ಇಲ್ಲಿರುವುದು ಮುಖವಾಡ ತೊಟ್ಟ ಜನರ ಬಾಳು…

ನೀ ಮಾಡಲು ಹೊರಟ ಕೆಲಸಕ್ಕೆ ಹಾಕುವರು ಕನ್ನ
ನಿನ್ನ ಕಷ್ಟಕ್ಕೆ ಯಾರು ಹಾಕುವುದಿಲ್ಲ ಅನ್ನ
ಇದು ಮುಖವಾಡ ಧರಿಸಿದ ಜನರ ನಿಜ ಬಣ್ಣ…

ಕಷ್ಟಗಳಿಗೆ ಸ್ಪಂದಿಸುವವರು ಯಾರು ಇಲ್ಲ
ಈ ಪ್ರಪಂಚದಲ್ಲಿ
ಅದೇ ನಿನ್ನ ಸುಖಕ್ಕೆ ಓಡಿ ಬಂದು ಮೊದಲು ನಿಲ್ಲುವರು ಇಲ್ಲಿ
ಇದು ಮುಖವಾಡದ ಬದುಕು…

ನಿನ್ನಿಂದ ಲಾಭ ಪಡೆದು ನಿನ್ಯಾರು ಎಂಬುವ ಜನರ ಮಧ್ಯ
ಇಲ್ಲಿರುವುದು ಪ್ರೀತಿ ಪ್ರೇಮ ಎಲ್ಲಾ ಮಿಥ್ಯಾ
ಇದು ಮುಖವಾಡದ ಹಿಂದಿನ ಸತ್ಯ…

ಆಸ್ತಿ ಐಶ್ವರ್ಯ ಇರುವಾಗ ಎಲ್ಲರೂ ನಮ್ಮವರು
ನೀ ಎಲ್ಲಾ ಕಳೆದುಕೊಂಡ ಮೇಲೆ ಕೇಳುವರು ನಿನ್ಯಾರು
ಇಲ್ಲಿರುವುದು ಮುಖವಾಡ ಧರಿಸಿದ ಜನರು…

ನಿನ್ನ ಸಮಸ್ಯೆಗೆ ಸ್ಪಂದಿಸುವವರಿಲ್ಲ
ಹಿಂದಿನಿಂದ ನಿಂದಿಸುವವರೆ ಎಲ್ಲಾ
ಇದು ಮುಖವಾಡದ ಜಗತ್ತು ಇದನ್ನು ಅರಿತು ನೀ ಬದುಕು….

ಇದು ಮೂರು ದಿನದ ಬಾಳು.

ಒಮ್ಮೊಮ್ಮೆ ಗೆಲ್ಲುವೆ
ಒಮ್ಮೊಮ್ಮೆ ಸೋಲುವೆ
ಗೆದ್ದೆನೆಂದು ಹಿಗ್ಗಲಾರೆ ಸೋತೆನೆಂದು ಕುಗ್ಗಲಾರೆ 
ಇದು ಮೂರು ದಿನದ ಜೀವನವಲ್ಲವೆ…?

ಕೆಲವರನ್ನು ಪ್ರೀತಿಸಿದೆ 
ಕೆಲವರನ್ನು ದ್ವೇಷಿಸಿದೆ 
ಪ್ರೀತಿಯಿಂದ ಪಡೆದ ಲಾಭವನ್ನು ಮರೆಯಲಾರೆ
ದ್ವೇಷದಿಂದ ಕಳೆದುಕೊಂಡ ಪ್ರೀತಿಯ ನೋವನ್ನು ಮರೆತು ಜೀವಿಸುವೆ
ಇದು ಮೂರು ದಿನದ ಬಾಳಲ್ಲವೆ…?

ಕೆಲವು ಸಂದರ್ಭದಲ್ಲಿ ನಕ್ಕಿದ್ದೆ
ಕೆಲವು ಸಂದರ್ಭದಲ್ಲಿ ಅಳುತ್ತಿದ್ದೆ
ನಕ್ಕ ವಿಷಯ ನೆನಪಿನಲ್ಲಿಟ್ಟೆ 
ಅಳುತಿದ್ದ ವಿಷಯ ಮರೆತು ಬಿಟ್ಟೆ
ಇದು ಮೂರು ದಿನದ  ಮುಖವಾಡದ ಬದುಕಲ್ಲವೆ…?

ಬೇರೆ ಅವರು ನಕ್ಕಾಗ ನಾನು ಮನಸ್ಸಿನಲ್ಲಿ ಅಳುತಿದ್ದೆ.
ನಾನು ನಕ್ಕಾಗ ಬೇರೆ ಅವರು ಅವರ ಮನದಿ ಅಳುತಿದ್ದರು.
ಇದು ಮೂರು ದಿನದ ಜೀವನದ ನಾಟಕ ಅಲ್ಲವೆ…?

ನನ್ನ ವಿರೋಧಿಗಳು ಸತ್ತಾಗ ಖುಷಿಪಟ್ಟೆ
ನನಗೂ ಸಾವಿದೆ ಎಂಬುದನ್ನು ಮರೆತುಬಿಟ್ಟೆ 
ಇದು ಮೂರು ದಿನದ ಬಾಳು  ಕೊನೆಗೆ ಎಲ್ಲರಿಗೂ ಸಾವಿದೆ ಅಲ್ಲವೆ…..?

ಹರೀಶ್ ನಾರ್ವೆ

 

Leave a Reply

Your email address will not be published. Required fields are marked *